ಕೊರೊನಾ ಸ್ಥಿತಿಗತಿ ಕುರಿತು ಇಂದು ಸಂಜೆ ಸಚಿವರ ಜೊತೆ ಸಿಎಂ ಸಭೆ

ಕೊರೊನಾ ಸ್ಥಿತಿಗತಿ ಕುರಿತು ಇಂದು ಸಂಜೆ ಸಚಿವರ ಜೊತೆ ಸಿಎಂ ಸಭೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹರಡೋದನ್ನ ತಡೆಯೋಕೆ ರಾಜ್ಯ ಸರ್ಕಾರ ಹರ ಸಾಹಸ ಪಡ್ತಿದೆ. ಅಲ್ಲದೆ, ಕೊರೊನಾ ಸೋಂಕಿತರು ಎದುರಿಸುತ್ತಿರುವ ಸಮಸ್ಯೆಯನ್ನ ಪರಿಹರಿಸಿ, ಸೋಂಕು ನಿಯಂತ್ರಣಕ್ಕೆ ತರಲು ಐವರು ಸಚಿವರಿಗೆ ವಿಶೇಷ ಜವಾಬ್ದಾರಿಯನ್ನೂ ಸಿಎಂ ಬಿ.ಎಸ್. ಯಡಿಯೂರಪ್ಪ ನೀಡಿದ್ದಾರೆ.

ಇವತ್ತು ಸಂಜೆ ಸಚಿವರ ಜೊತೆ ಯಡಿಯೂರಪ್ಪ ಸಭೆ ನಡೆಸಲಿದ್ದಾರೆ. ಸಂಜೆ 6 ಗಂಟೆಗೆ ಸಿಎಂ ಸರ್ಕಾರಿ ನಿವಾಸ ಕಾವೇರಿಯಲ್ಲಿ ಸಭೆ ನಡೆಯಲಿದ್ದು, ಸದ್ಯ ರಾಜ್ಯದಲ್ಲಿ ಕೊರೊನಾ ಸ್ಥಿತಿಗತಿ ಹೇಗಿದೆ, ಸೋಂಕು ನಿಯಂತ್ರಣಕ್ಕೆ ಏನೆಲ್ಲಾ ಕ್ರಮಗಳನ್ನ ಕೈಗೊಳ್ಳಲಾಗಿದೆ, ಸಮಸ್ಯೆಗಳು ಎಷ್ಟು ಬಗೆಹರಿದಿವೆ ಅನ್ನೋ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.

The post ಕೊರೊನಾ ಸ್ಥಿತಿಗತಿ ಕುರಿತು ಇಂದು ಸಂಜೆ ಸಚಿವರ ಜೊತೆ ಸಿಎಂ ಸಭೆ appeared first on News First Kannada.

Source: newsfirstlive.com

Source link