ಬಳ್ಳಾರಿ: ಚುನಾವಣೆಯಿಂದ ಕೊರೊನಾ ಸೋಂಕು ಹೆಚ್ಚಾಗಿದೆ ಎಂಬುದು ಸುಳ್ಳು ಅಂತ ಜಿಲ್ಲೆಯಲ್ಲಿ ಸಚಿವ ಜಗದೀಶ್​ ಶೆಟ್ಟರ್​ ಹೇಳಿಕೆ ಕೊಟ್ಟಿದ್ದಾರೆ. ಪಂಚರಾಜ್ಯ ಮತ್ತು ಬಳ್ಳಾರಿ ಪಾಲಿಕೆ ಚುನಾವಣೆಯಿಂದ ವೈರಸ್ ಆತಂಕ ಹೆಚ್ಚಾಗಿದೆ ಎಂಬುದು ಸುಳ್ಳು, ಕೊರೊನಾ ಹೆಚ್ಚಳಕ್ಕೆ ನೂರಾರು ಕಾರಣ ಇವೆ. ಜನರೇ ಈ ಕೊರೊನಾ ಜೊತೆಗೆ ಹೋರಾಡಬೇಕಿದೆ ಅಂತ ಹೇಳಿದ್ರು.

ಅಲ್ಲದೇ.. ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಕಾಡುತ್ತಿದೆ, ರಾಜ್ಯದಲ್ಲಿ ಆಕ್ಸಿಜನ್ ಹಂಚಿಕೆ ನೋಡಿಕೊಳ್ಳುವ ಜವಾಬ್ದಾರಿ ಸಿಎಂ ನನಗೆ ನೀಡಿದ್ದಾರೆ. ರಾಜ್ಯದಲ್ಲಿ ದಿನಕ್ಕೆ 1,750 ಟನ್  ಆಕ್ಸಿಜನ್ ಅಗತ್ಯವಿದೆ. ಸದ್ಯ ನಮ್ಮಲ್ಲಿ 1,200 ಹೆಚ್ಚು ಟನ್ ಆಕ್ಸಿಜನ್ ಲಭ್ಯ ಇದೆ. ಹೀಗಾಗಿ, ಇದನ್ನ ಹೆಚ್ವಳ ಮಾಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಅಂತ ಸಚಿವ ಜಗದೀಶ್​ ಶೆಟ್ಟರ್​ ಹೇಳಿದ್ದಾರೆ.

ಜಿಂದಾಲ್ ಕಂಪನಿಯವರ ಜೊತೆಯಲ್ಲಿ ಸಭೆ ಮಾಡಿದ್ದೇನೆ..

ರಾಜ್ಯದಲ್ಲಿ ಅತಿಹೆಚ್ಚು ಆಕ್ಸಿಜನ್​ನ್ನು ಜಿಂದಾಲ್​ನಲ್ಲಿ ಉತ್ಪಾದನೆ ಮಾಡಲಾಗ್ತಿದೆ. ಸ್ಟೀಲ್ ಉತ್ಪಾದನೆಗೆ ಆಕ್ಸಿಜನ್ ಬಳಕೆ ಕಡಿಮೆ ಮಾಡಿ, ವೈದ್ಯಕೀಯ ಸೇವೆಗೆ ನೀಡುವಂತೆ ಸೂಚನೆ ನೀಡಲಾಗಿದೆ. ಜಿಂದಾಲ್​ನವರು ನಮ್ಮ ಮನವಿಗೆ ಸ್ಪಂದನೆ ನೀಡಿದ್ದಾರೆ. ಹೊರ ರಾಜ್ಯದಿಂದಲೂ ಬೇಡಿಕೆ ಹೆಚ್ಚಿದೆ, ರಾಜ್ಯದಲ್ಲಿಯೂ ಆಕ್ಸಿಜನ್ ಬೇಡಿಕೆ ದಿನೇ ದಿನೇ ಏರಿಕೆ ಆಗುತ್ತಿದೆ. ಕೊಪ್ಪಳ, ಬೆಂಗಳೂರು ಭದ್ರಾವತಿಯಲ್ಲಿ ಸ್ಥಗಿತಗೊಂಡ ಕಾರ್ಖಾನೆಯಲ್ಲಿ ಆಕ್ಸಿಜನ್ ಉತ್ಪಾದನೆ ಮಾಡಲು ಸೂಚನೆ ನೀಡಲಾಗಿದೆ ಅಂತ, ಜಿಂದಾಲ್ ಆಕ್ಸಿಜನ್ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ ಬಳಿಕ ಸಚಿವ ಜಗದೀಶ್ ಶೆಟ್ಟರ್ ಈ ಹೇಳಿಕೆಯನ್ನ ನೀಡಿದ್ದಾರೆ.

The post ಕೊರೊನಾ ಹೆಚ್ಚಾಗೋದಕ್ಕೆ ಚುನಾವಣೆ ಕಾರಣ ಅಲ್ಲ: ಜಗದೀಶ್​ ಶೆಟ್ಟರ್​ appeared first on News First Kannada.

Source: newsfirstlive.com

Source link