ಬೆಳಗಾವಿ: ಕೊರೋನಾ ಸಾಂಕ್ರಾಮಿಕ ತಡೆಗೆ ಹೋಮ-ಹವನ ನಡೆಸಿದ್ದಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಗಿರೀಶ್ ದೊಂಗಡಿ, ಜಯಂತ್ ಜಾಧವ್, ಕಲ್ಲಪ್ಪ ಶಹಾಪುರಕರ್ ಹಾಗೂ ಸುನೀಲ್ ಮುತಗೇಕರ್ ಎಂಬವರ ವಿರುದ್ಧ ದೂರು ದಾಖಲಾಗಿದೆ.

ಮೇ 24 ರಂದು ಬೆಳಗಾವಿಯ ಬಸವನಗಲ್ಲಿಯಲ್ಲಿ ಹೋಮ ನಡೆಸಿದ ಹಿನ್ನೆಲೆ ಮಹಾನಗರ ಪಾಲಿಕೆ ಕಿರಿಯ ಆರೋಗ್ಯ ನಿರೀಕ್ಷಕರು ದೂರು ನೀಡಿದ್ದರು. ಇದನ್ನ ಆಧರಿಸಿ ನಾಲ್ವರ ವಿರುದ್ಧ ಶಹಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೊರೊನಾ ಹೋಗಲಾಡಿಸಲು, ವಾತಾವರಣ ಶುದ್ಧೀಕರಣ ಮಾಡುವ ಉದ್ದೇಶದಿಂದ ಬೆಳಗಾವಿ ನಗರದ ವಿವಿಧ ಗಲ್ಲಿಗಳಲ್ಲಿ ಹೋಮ-ಹವನ ನಡೆಸಲಾಗಿತ್ತು. ರಾಜ್ಯಾದ್ಯಂತ ಇದಕ್ಕೆ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿತ್ತು.

The post ಕೊರೊನಾ ಹೋಗಲಾಡಿಸಲು ಹೋಮ ಹವನ- ನಾಲ್ವರ ವಿರುದ್ಧ ಕೇಸ್ ದಾಖಲು appeared first on News First Kannada.

Source: newsfirstlive.com

Source link