ಕೊರೊನಾದ ಮೊದಲನೇ ಅಲೆ ನಿಧಾನವಾಗಿ ಕಡಿಮೆಯಾಗುತ್ತಿದ್ದಂತೆ.. ವಿಮಾನಗಳು ಮತ್ತೆ ಹಾರಾಡಲು ಶುರು ಮಾಡಿದ್ದವು. ಮತ್ತೆ ಎಲ್ಲವು ಸಹಜ ಸ್ಥಿತಿಗೆ ಬಂತು ಎನ್ನುವಾಗ್ಲೇ ಕೊರೊನಾ ಎರಡನೇ ಅಲೆ ಶರವೇಗದಲ್ಲಿ ಬೀಸಲು ಶುರುವಾಯ್ತು. ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದಂತೆಯೇ ನ್ಯೂಜಿಲ್ಯಾಂಡ್, ಹಾಂಕಾಂಗ್, ಕೆನಡಾ ಸೇರಿದಂತೆ ಹಲವು ದೇಶಗಳು ಭಾರತದ ವಿಮಾನಗಳಿಗೆ ಸ್ವಯಂಪ್ರೇರಿತವಾಗಿ ನಿಷೇಧ ಹೇರಿದವು. ಆದ್ರೆ ಈ ಬಾರಿ ಖಾಸಗಿ ವಿಮಾನಗಳು ಮಾತ್ರ ಸೈಲೆಂಟಾಗದೆ ಎಂದಿನಂತೆ ಬಾನಂಗಳದಲ್ಲಿ ತಮ್ಮ ಹಾರಾಟವನ್ನ ಮುಂದುವರೆಸಿವೆ.

ಯಾಕೆ ಖಾಸಗಿ ಫ್ಲೈಟ್​ಗೆ ಡಿಮ್ಯಾಂಡ್ ಬಂತು..?
ಎರಡನೇ ಅಲೆ ದೇಶದಲ್ಲಿ ಸೃಷ್ಠಿಸಿರುವ ಅವಾಂತರ ಅಷ್ಟಿಷ್ಟಲ್ಲ. ಸಾರಿಗೆ, ಮೈಟ್ರೋಗಳು ಅದಾಗ್ಲೇ ಸ್ತಬ್ಧವಾಗಿವೆ. ವಿಮಾನಗಳು ಹಾರಾಡ್ತಾ ಇದ್ರೂ ಸಮೂಹ ವಿಮಾನಯಾನ ಸೇವೆ ಅಷ್ಟಾಗಿ ಲಾಭದಲ್ಲಿಲ್ಲ. ಕಾರಣ ಕೊರೊನಾ ಭಯದಿಂದ ಒಬ್ಬರ ಪಕ್ಕ ಇನ್ನೊಬ್ಬರು ಕುಳಿತು ಪ್ರಯಾಣಿಸಲು ಯಾರೂ ಇಷ್ಟಪಡ್ತಾ ಇಲ್ಲ. ತುಂಬಾ ಅನಿವಾರ್ಯ ಇದ್ರೆ ಮಾತ್ರ ಪ್ರಯಾಣ ಮಾಡ್ತಾ ಇದಾರೆ. ಆದರೆ, ಇಂಟರೆಸ್ಟಿಂಗ್ ವಿಚಾರ ಅಂದ್ರೆ ದುಡ್ಡಿರೋ ಜನ ಖಾಸಗಿ ಫ್ಲೈಟ್ಗಳಿಗೆ ಹೆಚ್ಚಾಗಿ ಮೊರೆ ಹೋಗ್ತಾ ಇದ್ದಾರೆ.

ಖಾಸಗಿ ಫ್ಲೈಟ್​ಗಳ ಬೇಡಿಕೆ ಶೇಕಡಾ 71.8ಕ್ಕೆ ಏರಿಕೆ
ಭಾರತದಲ್ಲಿ ಕೊರೊನಾ 2ನೇ ಅಲೆಯ ಅಬ್ಬರ ಹೆಚ್ಚಾಗುತ್ತಿದ್ದಂತೆಯೇ ಕೆಲ ಸೆಲೆಬ್ರೆಟಿಗಳು, ಉದ್ಯಮಿಗಳು, ದುಡ್ಡಿರುವ ರಾಜಕಾರಣಿಗಳು, ಖಾಸಗಿ ಜೆಟ್​ಗಳ ಮೂಲಕ ವಿದೇಶಕ್ಕೆ ಹಾರಿದ್ದಾರೆ. ಇನ್ನೂ ಕೆಲ ದೇಶಗಳು ಭಾರತದ ವಿಮಾನಗಳಿಗೆ ನಿರ್ಬಂಧ ಹೇರುತ್ತಿದ್ದಂತೆಯೇ ಖಾಸಗಿ ಜೆಟ್​ಗಳಲ್ಲಿ ಯಾರಿಗೂ ತಿಳಿಯದಂತೆ ವಿದೇಶಗಳಲ್ಲಿ ನೆಲೆ ಕಂಡು ಕೊಳ್ತಾ ಇದ್ದಾರೆ. ಇದುವರೆಗೂ ವಿಮಾನದಲ್ಲಿ ಪ್ರಯಾಣಿಸದ ಪ್ರಯಾಣಿಕರು ಕೊರೊನಾ ಎರಡನೇ ಅಲೆಗೆ ಹೆದರಿ ಇದೇ ಮೊದಲ ಬಾರಿಗೆ ಖಾಸಗಿ ಜೆಟ್​ಗಳನ್ನ ಬುಕ್ ಮಾಡಿ ಪ್ರಯಾಣ ಮಾಡ್ತಾ ಇದ್ದಾರೆ.

ಕೊರೊನಾ ಎರಡನೇ ಅಲೆಯಿಂದ ಖಾಸಗಿ ಜೆಟ್ ಸೇವೆಗಳಿಗೆ ಬೇಡಿಕೆ ಇಮ್ಮಡಿಯಾಗಿದೆ. ಪ್ರಯಾಣಿಕರು ಅನ್ಯ ದೇಶಗಳಿಗೆ ಹೋಗಲು ಖಾಸಗಿ ಜೆಟ್​ಗಳನ್ನೇ ಹೆಚ್ಚು ನೆಚ್ಚಿಕೊಂಡಿದ್ದಾರೆ ಅನ್ನೋದನ್ನ ಸರ್ಕಾರಿ ದಾಖಲೆಗಳೇ ಸ್ಪಷ್ಟಪಡಿಸುತ್ತಿವೆ. ಕಳೆದ ವರ್ಷದ ಮಾರ್ಚ್ ನಲ್ಲಿ 37.7 ರಷ್ಟಿದ್ದ ಬೇಡಿಕೆ ಇದೀಗ ಶೇಕಡಾ 71.8 ಕ್ಕೆ ಏರಿಕೆಯಾಗಿದೆ. ಈ ಅಂಕಿ ಅಂಶಗಳು ದೇಶದಲ್ಲಿ ಖಾಸಗಿ ಜೆಟ್​ಗಳಿಗೆ ಬೇಡಿಕೆ ಎಷ್ಟರ ಮಟ್ಟಿಗೆ ಹೆಚ್ಚಾಗಿದೆ ಎಂಬುದನ್ನು ಸಾರಿ ಹೇಳುತ್ತದೆ.

ಖಾಸಗಿ ಜೆಟ್ ಗಳಿಗೆ ಹೆಚ್ಚಿದ ಬೇಡಿಕೆ
2019-20ರ ಜನವರಿ ತಿಂಗಳಲ್ಲಿ ಖಾಸಗಿ ಜೆಟ್ ವಿಮಾನಗಳಿಗೆ ಶೇಕಡಾ 30 ಬೇಡಿಕೆ ಇದ್ರೆ, 2020-21 ರ ಜನವರಿ ವೇಳೆಗೆ ಶೇಕಡಾ 31.7ಕ್ಕೇ ಏರಿತ್ತು. ಇನ್ನೂ ಭಾರತದಲ್ಲಿ ಎರಡನೇ  ಅಲೆ ಕಾಣಿಸಿಕೊಂಡ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಖಾಸಗಿ ಜೆಟ್ಗಳ ಡಿಮ್ಯಾಂಡ್ ಫುಲ್ ಹೆಚ್ಚಾಯ್ತು. 2019-20ರ ಫೆಬ್ರವರಿಯಲ್ಲಿ 3.5 ರಷ್ಟು ಜನರು ಖಾಸಗಿ ಜೆಟ್​ಗಳನ್ನ ಅವಲಂಬಿಸಿದ್ರೆ, 2020-21 ರ ಫೆಬ್ರವರಿಯಲ್ಲಿ ಬರೋಬ್ಬರಿ 9.2 ರಷ್ಟು ಜನರು ಪ್ರೈವೆಟ್ ಜೆಟ್​ಗಳ ಮೊರೆ ಹೋಗಿದ್ರು. ಇನ್ನೂ ಕಳೆದ ಮಾರ್ಚ್ ತಿಂಗಳಲ್ಲಿ 37.7 ರಷ್ಟಿದ್ದ ಡಿಮ್ಯಾಂಡ್ ಈ ಬಾರಿ ಗಣನೀಯವಾಗಿ ಏರಿಕೆಯಾಗಿದ್ದು, ಶೇಕಡಾ 71.8 ರಷ್ಟು ಜನರು ಖಾಸಿಗೆ ಜೆಟ್ಗಳನ್ನ ಅವಲಂಬಿಸಿದ್ದಾರೆ.

“ದೇಶದಲ್ಲಿ ಎರಡನೇ ಅಲೆ ಆರಂಭವಾದಗಿನಿಂದ ಖಾಸಗಿ ಜೆಟ್​ಗಳಿಗೆ ಬೇಡಿಕೆ ಹೆಚ್ಚಾಗ್ತಿದೆ. ಅದರಲ್ಲೂ ಇದೇ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರ ಸಂಖ್ಯೆಯೇ ಅಧಿಕವಾಗಿದೆ. ಇವರು ದೇಶ-ವಿದೇಶಗಳಿಗೆ ಇದೇ ಖಾಸಗಿ ಜೆಟ್ ಗಳ ಮೂಲಕ ಪ್ರಯಾಣಿಸುತ್ತಿರುವುದರಿಂದ ಶೇಕಡಾ 25ರಷ್ಟು ಬೇಡಿಕೆ ಹೆಚ್ಚಾಗಿದೆ”
-ರಾಜನ್ ಮೆಹ್ರಾ, ಸಿಇಒ ಕ್ಲಬ್ ಒನ್ ಏರ್

ಇದುವರೆಗೂ ವಿಮಾನದಲ್ಲಿ ಸಂಚರಿಸಿದವರು ಕೊರೊನಾ 2ನೇ ಅಲೆಗೆ ಬೆದರಿ ಮೊದಲ ಬಾರಿಗೆ ಖಾಸಗಿ ಜೆಟ್​ಗಳಲ್ಲಿ ವಿವಿಧ ದೇಶಗಳಿಗೆ ಹಾರಿದ್ದಾರೆ. ಖಾಸಗಿ ಜೆಟ್​ಗಳಲ್ಲಿ ಪ್ರಯಾಣಿಸಿದವರಲ್ಲಿ ಹೆಚ್ಚಿನವರು ಇದೇ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸಿದವರಾಗಿದ್ದಾರೆ. ಇದ್ರಿಂದ ಖಾಸಗಿ ಜೆಟ್​ಗಳಿಗೆ ಡಿಮ್ಯಾಂಡ್ ಹೆಚ್ಚಾಗಿದ್ದು, ಇವು ಖಾಸಗಿ ಜೆಟ್​ಗಳ ಆದಾಯವನ್ನು ಕೂಡ ಇಮ್ಮಡಿಗೊಳಿಸಿದೆ.

The post ಕೊರೊನಾ 2ನೇ ಅಲೆಯಲ್ಲಿ ಖಾಸಗಿ ಜೆಟ್​​ ಮೊರೆಹೋದ ಭಾರತದ ಶ್ರೀಮಂತರು, ಹೆಚ್ಚಾಯ್ತು ಡಿಮ್ಯಾಂಡ್ appeared first on News First Kannada.

Source: newsfirstlive.com

Source link