ನವದೆಹಲಿ: ದೇಶದಲ್ಲಿ ಎರಡನೇ ಅಲೆಯಲ್ಲಿ ವೈದ್ಯರೂ ಸಹ ಸಾವನ್ನಪ್ಪುತ್ತಿದ್ದು ಈವರೆಗೆ ಒಟ್ಟು 634 ವೈದ್ಯರು ಸಾವನ್ನಪ್ಪಿದ್ದಾರೆ. ಅದ್ರಲ್ಲೂ ದೆಹಲಿ ವೈದ್ಯರೇ ಹೆಚ್ಚು ಸಾವನ್ನಪ್ಪಿದ್ದಾರೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ಸ್ ಹೇಳಿದೆ.

ಇಂಡಿಯನ್ ಮೆಡಿಕಲ್ ಅಸೊಸಿಯೇಷನ್ ನೀಡಿರೋ ಮಾಹಿತಿ ಪ್ರಕಾರ.. ದೇಶದಲ್ಲಿ ಇಲ್ಲಿಯವರೆಗೆ 624 ಜನ ವೈದ್ಯರು ಎರಡನೇ ಅಲೆಯಲ್ಲಿ ಪ್ರಾಣಕಳೆದುಕೊಂಡಿದ್ದಾರೆ. ಇದರಲ್ಲಿ ದೆಹಲಿ ಒಂದರಲ್ಲೇ 109 ಕ್ಕೂ ಹೆಚ್ಚು ವೈದ್ಯರು ಪ್ರಾಣಕಳೆದುಕೊಂಡಿದ್ದಾರೆ. ನಂತರದ ಸ್ಥಾನದಲ್ಲಿ ಬಿಹಾರ್​ ಇದ್ದು ಇಲ್ಲಿ 96 ವೈದ್ಯರು ಪ್ರಾಣಕಳೆದುಕೊಂಡಿದ್ದಾರೆ. ಇನ್ನು ಉತ್ತರಪ್ರದೇಶ ರಾಜ್ಯದಲ್ಲೂ 79 ವೈದ್ಯರು ಪ್ರಾಣಕಳೆದುಕೊಂಡಿದ್ದಾರೆ ಎಂದು ಐ ಎಮ್ ಎ ತಿಳಿಸಿದೆ. ಇದರ ಜೊತೆಗೆ ನರ್ಸ್ ಗಳ ಸಂಖ್ಯೆ ಸೇರಿಸಿದ್ದೇ ಆದರೆ ಅದು ಎರಡು ಸಾವಿರದ ಗಡಿದಾಟಲಿದೆ ಅಂತ ಅಂದಾಜಿಸಲಾಗಿದೆ.

The post ಕೊರೊನಾ 2ನೇ ಅಲೆಯಲ್ಲಿ ಬರೋಬ್ಬರಿ 634 ವೈದ್ಯರು ಸಾವು.. ದೆಹಲಿಯಲ್ಲೇ ಹೆಚ್ಚು appeared first on News First Kannada.

Source: newsfirstlive.com

Source link