ಕೊರೊನಾ 2ನೇ ಅಲೆಯಿಂದ ಎಚ್ಚೆತ್ತಿದ್ದೇವೆ.. 3ನೇ ಅಲೆಗೆ 2,500 ಕೋಟಿ ಮೀಸಲಿಟ್ಟಿದ್ದೇವೆ

ಕೊರೊನಾ 2ನೇ ಅಲೆಯಿಂದ ಎಚ್ಚೆತ್ತಿದ್ದೇವೆ.. 3ನೇ ಅಲೆಗೆ 2,500 ಕೋಟಿ ಮೀಸಲಿಟ್ಟಿದ್ದೇವೆ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮಾತನಾಡಿದ ಸಚಿವ ಜೆ.ಸಿ.ಮಾಧುಸ್ವಾಮಿ.. ಕೊರೋನಾ ಮೂರನೇ ಅಲೆ ಎದುರಿಸಲು ಸರ್ಕಾರ ಸರ್ವ ಸನ್ನದ್ಧವಾಗಿದೆ. ಮೂರನೇ ಅಲೆಗೊಸ್ಕರ 2,500 ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದಿದ್ದಾರೆ.

ಈ ಹಿಂದೆ ಆಕ್ಸಿಜನ್ ಕೊರತೆ ಎದುರಿಸಿರೋದ್ರಿಂದ ಅದರ ಸಮಸ್ಯೆ ಎದುರಾಗದಂತೆ ಕ್ರಮ ವಹಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಕೊವೀಡ್ ಲಸಿಕೆ ಉಚಿತವಾಗಿ ನೀಡಿರೋದ್ರಿಂದ 2,000 ಕೋಟಿ ರೂಪಾಯಿ ಉಳಿತಾಯವಾಗಿದೆ. ಉಳಿತಾಯವಾದ ಹಣವನ್ನೂ ಕೊರೊನಾ ಮೂರನೇ ಅಲೆಗೆ ಬಳಕೆ ಮಾಡ್ತೇವೆ.

ಮೂರನೇ ಕೇವಲ ಮಕ್ಕಳ ಮೇಲಷ್ಟೇ ಅಲ್ಲದೇ ಯುವಕರ ಮೇಲೂ ಪರಿಣಾಮ ಬೀರಲಿದೆ. ತುಮಕೂರು ಜಿಲ್ಲೆಯಲ್ಲೂ 18 ಸಾವಿರ ಮಕ್ಕಳಿಗೆ ಕೊರೊನಾ ತಗುಲಿತ್ತು. ಆದರೆ ಕೇವಲ 2% ಮಾತ್ರ ಆಸ್ಪತ್ರೆಗಳಿಗೆ ದಾಖಲಾದರು. ಕೊರೊನಾ ಎರಡನೇ ಅಲೆಯಿಂದ ಎಚ್ಚೆತ್ತುಕೊಂಡಿದ್ದೇವೆ. ತಜ್ಞರ ವರದಿಯಂತೆ ಈಗಾಗಲೇ ಅಗತ್ಯ ಕ್ರಮಕ್ಕೆ ಸರ್ಕಾರ ಮುಂದಾಗಿದೆ ಎಂದಿದ್ದಾರೆ.

The post ಕೊರೊನಾ 2ನೇ ಅಲೆಯಿಂದ ಎಚ್ಚೆತ್ತಿದ್ದೇವೆ.. 3ನೇ ಅಲೆಗೆ 2,500 ಕೋಟಿ ಮೀಸಲಿಟ್ಟಿದ್ದೇವೆ appeared first on News First Kannada.

Source: newsfirstlive.com

Source link