ಕೊರೊನಾ ಇಳಿಮುಖವಾಗ್ತಾ ಇದ್ರೂ ಎರಡನೇ ಅಲೆ ತರ್ತಾ ಇರುವ ಗಂಡಾಂತರ ಮಾತ್ರ ಕಡಿಮೆ ಆಗ್ತಾ ಇಲ್ಲ. ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಕೆ ಆಗಿದ್ರೂ ಸಾವನ್ನಪ್ತಾ ಇರೋರು ಜಾಸ್ತಿನೇ ಆಗ್ತಾ ಇದೆ. ಎರಡನೇ ಅಲೆಯಲ್ಲಿ ಕೊರೊನಾ ತನ್ನ ಭೀಕರತೆ ತೋರಿಸಿದ್ದು ಒಂದು ಕಾರಣ ಆದ್ರೆ, ಇನ್ನೊಂದಿಷ್ಟು ಕಾರಣಗಳೂ ಇದಕ್ಕೆ ಸೇರಿಕೊಂಡಿವೆ.

ಕಳೆದ ಬಾರಿ ಮೊದಲನೇ ಅಲೆ ಬಂದಾಗ ಈ ಪ್ರಮಾಣದಲ್ಲಿ ಕೊರೊನಾ ಭೀಕರತೆ ತೋರಿಸಿರಲಿಲ್ಲ. ಆದ್ರೆ ಈ ಬಾರಿ ಮಾತ್ರ ಕೊರೊನಾ ಸಾವಿರಾರು ಜನರಿಗೆ ಆಘಾತ ತಂದಿದೆ. ಇನ್ನೂ ಕೊರೊನಾ ತನ್ನ ಅಟ್ಟಹಾಸ ನಿಲ್ಲಿಸಿಲ್ಲ. ದೇಶದಲ್ಲಿ, ರಾಜ್ಯದಲ್ಲಿ ಸೋಂಕಿತರ ಪ್ರಮಾಣ ಇಳಿಕೆ ಆಗ್ತಾ ಇದ್ರೂ ಸಾವಿನ ಪ್ರಮಾಣ ಮಾತ್ರ ಹೆಚ್ಚಾಗಿಯೇ ಇದೆ. ಈ ಬಾರಿಯಂತೂ ಉಸಿರಾಟದ ಸಮಸ್ಯೆಯಿಂದ, ಬಳಿಕ ಕೊರೊನೋತ್ತರ ಸಮಸ್ಯೆಯಿಂದ ಜನ ಸಾವನ್ನಪ್ತಾ ಇರೋದೇ ಹೆಚ್ಚು. ಯಾಕೆ ಹೀಗಾಗ್ತಾ ಇದೆ? ಎರಡನೇ ಅಲೆ ಗರಿಷ್ಠ ಮಟ್ಟಕ್ಕೆ ತಲುಪ್ತಾ ಇದ್ದಂತೆಯೇ ನೂರಾರು ಜನ ಜೀವವನ್ನೇ ಬಲಿ ತೆಗೆದುಕೊಂಡು ಬಿಡ್ತು ಕೊರೊನಾ. ಆದರೆ, ಈಗಲೂ ಮರಣದ ಪ್ರಮಾಣ ಕಡಿಮೆ ಆಗ್ತಾನೇ ಇಲ್ಲ. ಮತ್ತೆ ಮತ್ತೆ ಅದಕ್ಕೆ ಹೇಳ್ತಾ ಇದ್ದೇವೆ ಕೊರೊನಾ ಲಕ್ಷಣ ಕಂಡು ಬಂದ್ರೆ ನಿರ್ಲಕ್ಷ್ಯ ಮಾಡಬೇಡಿ. ಇದನ್ನು ಈಗಾಗಲೇ ಅನೇಕ ಬಾರಿ ಹೇಳಿದ್ದರೂ ಈಗ ಮತ್ತೆ ಯಾಕೆ ಹೇಳ್ತಾ ಇದ್ದೀವಿ ಅಂದ್ರೆ ಎರಡನೇ ಅಲೆ ತಗ್ತಾ ಇದೆ ,ಹೋಯ್ತು ಬಿಡಿ, ನನಗೇನು ಆಗಲ್ಲ ಅನ್ನೋ ಮನಸ್ಥಿತಿ ಬೇಡವೇ ಬೇಡ.

ಆರೇ ಆರು ದಿನ ವಿಳಂಬ ಆದ್ರೆ ಏನೇನೆಲ್ಲಾ ಆಗಿಬಿಡುತ್ತೆ ಗೊತ್ತಾ?
ಕೊರೊನಾ ಇಳಿಮುಖವಾಗ್ತಿದ್ರು ಮರಣ ಪ್ರಮಾಣ ತಗ್ತಿಲ್ಲ ಯಾಕೆ?

ಕೊರೊನಾ ಎರಡನೇ ಅಲೆ ಇನ್ನು ಸಾಕಷ್ಟು ತಗ್ಗಬೇಕಾಗಿದೆ. ದಿನದಿಂದ ದಿನಕ್ಕೆ ಕಡಿಮೆ ಆಗ್ತಾ ಇದ್ರೂ ಇದೇ ವೇಗದಲ್ಲಿ ಸೋಂಕಿತರ ಸಂಖ್ಯೆ ತಗ್ಗುತ್ತಾ ಹೋದ್ರೆ ಆಗ ಪರಿಸ್ಥಿತಿ ಸುಧಾರಿಸಬಹುದು. ಆಗ ಲಾಕ್ ಡೌನ್ ಕೂಡ ತೆರವಾಗಬಹುದು. ಹೀಗಾಗಿ ಅದಕ್ಕು ಮುನ್ನ ಯಾವುದೇ ಕಾರಣಕ್ಕೂ ಎಚ್ಚರ ತಪ್ಪಲೇಬಾರದು. ನಾನು ಮನೆಯಿಂದ ಹೊರಗೇ ಹೋಗಿಲ್ಲ, ಮನೆಯಲ್ಲೇ ಇದ್ದೇನೆ ಅನ್ನುವ ಮನಸ್ಥಿತಿ ಬೇಡವೇ ಬೇಡ ಅಂತಿದಾರೆ ತಜ್ಞರು. ಇನ್ನಷ್ಟು ಜನ ವ್ಯಾಕ್ಸಿನ್ ಹಾಕಿಸಿಕೊಂಡಿದ್ದೇವೆ, ನಾವು ಸೇಫ್ ಅಂತೆಲ್ಲ ಅಂದುಕೊಂಡಿರ್ತಾರೆ. ಯಾರಿಂದಲಾದರೂ, ಎಲ್ಲಿಂದೋ ಬಂದವರಿಂದ ನಿಮಗೆ ಹರಡಿರಬಹುದು. ನಿತ್ಯ ಬೆಳಗ್ಗೆ ವಾಕಿಂಗ್ ಹೋದಾಗಲೋ, ದಿನಸಿ ತರುವಾಗಲೇ ನಿಮಗೆ ಹರಡಿರಬಹುದು. ಹೀಗಾಗಿ ಏನೇ ಲಕ್ಷಣ ಕಂಡುಬಂದ್ರೂ ಇದು ಕೊರೊನಾ ಅಲ್ಲ, ಸಾದಾ ಜ್ವರ, ಸಾದಾ ಕೆಮ್ಮು, ವಾತಾವರಣ ಬದಲಾಗಿದ್ರಿಂದ ಹೀಗಾಗಿದೆ ಅಂತೆಲ್ಲ ಅಂದುಕೊಳ್ಳೋದೇ ಬೇಡ. ತಕ್ಷಣ ಕೋವಿಡ್ ಟೆಸ್ಟ್ ಮಾಡಿಸಿ. ಕಾರಣ ತಕ್ಷಣ ಚಿಕಿತ್ಸೆ ಕೊಟ್ರೆ ಕೊರೊನಾ ಅಪಾಯಕಾರಿಯಾಗಲ್ಲ ಅಂತಾ ಹೃದಯ ಶಸ್ತ್ರಚಿಕಿತ್ಸಕ ಡಾ.ಅಶ್ವಿನ್ ಪಿ ಹೇಳಿದ್ದಾರೆ.

ಕೊರೊನಾ ವಿಚಾರದಲ್ಲಿ ಮೊದಲ ವಾರವೇ ನಿರ್ಣಾಯಕ
ವೈರಸ್ ಸ್ಪೈಕ್ ಪ್ರೋಟಿನ್ ಬ್ಲಡ್ ಕ್ಲಾಟ್ ಮಾಡಲು ಬಿಡಬೇಡಿ

ಮೊದಲಿನಿಂದಲೂ ವೈದ್ಯರು ಇದನ್ನೇ ಹೇಳ್ತಾ ಬಂದಿದ್ದಾರೆ. ಆದರೆ ಜನರಿಗೆ ಇದು ಮರೆತೇ ಹೋಗುತ್ತೆ. ಪದೇ ಪದೇ ಇಂತಹ ತಪ್ಪು ಮಾಡ್ತಾ ಇರೋದ್ರಿಂದಾನೇ ಸಾವು ತಗ್ಗುತ್ತಿಲ್ಲ. ಸಾಮಾನ್ಯ ಲಕ್ಷಣ ಇರೋರು ನನಗೇನು ಆಗಲ್ಲ ಅಂತ ಕೊರೊನಾ ಟ್ರೀಟ್ಮೆಂಟ್ ತೆಗೆದುಕೊಳ್ಳದೇ ಕೆಮ್ಮು-ಜ್ವರದ ಟ್ಯಾಬ್ಲೆಟ್ ತೆಗೆದುಕೊಂಡು ಮೇಲ್ನೋಟಕ್ಕೆ ಗುಣವಾದಂತೆ ಆಗುತ್ತಾರೆ. ಆದ್ರೆ ವೈರಸ್ ನಿಯಂತ್ರಿಸುವ, ನಾಶ ಮಾಡುವ ಮೆಡಿಸಿನ್ ತೆಗೆದುಕೊಳ್ಳದಿದ್ರೆ ಯಾವ ಮೆಡಿಸಿನ್ ತೆಗೆದುಕೊಂಡರೂ ಕೂಡ ಅದು ವೇಸ್ಟ್ ಆಗುತ್ತೆ. ಕೊರೊನಾ ಪಾಸಿಟಿವ್ ದೃಢಪಟ್ಟ ಮೇಲೆ ಒಂದೆರಡು ದಿನಗಳಲ್ಲೇ ಕೋವಿಡ್ ಟ್ರೀಟ್ಮೆಂಟ್ಗೆ ಈಗ ಬಳಸಲಾಗ್ತಾ ಇರುವ ಮೆಡಿಸಿನ್ ತೆಗೆದುಕೊಂಡು ಬಿಟ್ರೆ ಶೇಕಡಾ 90ರಷ್ಟು ಸೇಫ್. ಇದನ್ನು ಬಿಟ್ಟು ನನಗೇನು ಆಗಲ್ಲ, ಇನ್ನೊಂದು ಎರಡು ದಿನ ನೋಡೋಣ ಅಂತ ವಿಳಂಬ ಮಾಡ್ತಾ ಹೋದ್ರೆ ಮುಂದೆ ಅಪಾಯಕ್ಕೆ ನೀವೇ ಆಹ್ವಾನ ಕೊಟ್ಟಂತೆ ಆಗುತ್ತೆ.

ಸ್ಪೈಕ್ ಪ್ರೋಟಿನ್ ನಿಮ್ಮ ರಕ್ತನಾಳದಲ್ಲಿನ ಕ್ಲಾಟ್ ಸೃಷ್ಟಿ ಮಾಡುತ್ತೆ. ಬ್ಲಡ್ ಕ್ಲಾಟ್ ಆದಾಗ ಆಕ್ಸಿಜನ್ ಎಷ್ಟೇ ಕೊಟ್ರೂನೂ ಅದು ಹೀರಿಕೊಳ್ಳಲ್ಲ. ಮುಂದೆ ಶ್ವಾಸಕೋಶದೊಳಗಡೆ ಫೈಬ್ರೋಸಿಸ್ ಅಂತ ಆಗುತ್ತೆ. ಶ್ವಾಸಕೋಶಕ್ಕೆ ಆಕ್ಸಿಜನ್ ಹೀರಿಕೊಳ್ಳುವ ಕೆಪ್ಯಾಸಿಟಿ ಹೋಗಿ ಬಿಡುತ್ತೆ. ಆಗ ಎಷ್ಟೇ ಪ್ರಯತ್ನ ಮಾಡಿದ್ರೂ, ಐಸಿಯು ವೆಂಟಿಲೇಟರ್ ನಲ್ಲಿಟ್ಟರೂ ಉತ್ತಮ ಫಲಿತಾಂಶ ಸಿಗೋದು ಕಷ್ಟ ಅಂದ್ರೆ ನೀವೇ ಅರ್ಥ ಮಾಡಿಕೊಳ್ಳಿ ಎನ್ನುತ್ತಾರೆ ತಜ್ಞರು.

ದಿಢೀರ್ ಅಂತ ಡೆತ್ ಆಗ್ತಾ ಇರೋದಕ್ಕೆ ನಿಖರ ಕಾರಣ ಏನು?
ಮೊದಲು ಏನು ಮಾಡದೇ ದಿಢೀರ್ ಶಾಕ್ ಕೊಡ್ತಿರುವ ವೈರಸ್

ಈ ಎರಡನೇ ಅಲೆ ಸಂದರ್ಭದಲ್ಲಿ ಬಹಳಷ್ಟು ಜನ ಹೇಳ್ತಾ ಇರೋ ಮಾತು ಒಂದೇ. ನಿನ್ನೆ ಚೆನ್ನಾಗಿಯೇ ಇದ್ರು, ಒಂದು ಗಂಟೆ ಹಿಂದೆ ಫೋನ್ನಲ್ಲಿ ಮಾತಾಡಿದ್ರು. ಆದ್ರೆ ಹೋಗಿ ಬಿಟ್ರು ಅಂತಾ. ಆದ್ರೆ ಹೀಗಾಗೋದಕ್ಕೆ ಕಾರಣವೇನು. ಏನೇ ಲಕ್ಷಣ ಇದ್ರೂ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳದೇ ಇರೋದು ಮೊದಲನೇ ತಪ್ಪು. ಕೊರೊನಾ ದೃಢಪಟ್ಟ ಮೇಲೆ ವೈದ್ಯರ ಸಲಹೆ ಮೇರೆಗೆ ಮಾರ್ಗಸೂಚಿಯಂತೆ ಚಿಕಿತ್ಸೆ ಪಡೆದುಕೊಳ್ಳದೇ ಇರೋದು ಎರಡನೇ ತಪ್ಪು. ನನಗೇನು ಆಗಲ್ಲ ಅಂತ ಕೋರ್ಸ್ ಕಂಪ್ಲೀಟ್ ಮಾಡದೇ ನಿರ್ಲಕ್ಷ್ಯ ಮಾಡೋದು ಮೂರನೇ ತಪ್ಪು. ಇದೆಲ್ಲದರ ಪರಿಣಾಮ ಕೊರೊನಾ ಬಂದ 8 ಅಥವಾ 9 ದಿನಕ್ಕೆ ನಿಜವಾದ ಪ್ರಾಬ್ಲಮ್ ಶುರುವಾಗುತ್ತೆ. ಮೊದಲು ಉಸಿರಾಟದ ಸಮಸ್ಯೆ, ನಂತರ ಇನ್ಫೆಕ್ಷನ್, ಬಳಿಕ ನ್ಯುಮೋನಿಯಾ, ಅದಾದ ಮೇಲೆ ಈಗ ಬರ್ತಾ ಇರುವ ಫಂಗಸ್. ಬಹುಶಃ ಇಷ್ಟೆಲ್ಲ ಆದ ಮೇಲೆ ಅದರ ಪರಿಣಾಮ ಹೇಗಿರಬಹುದು ನೀವೇ ಊಹಿಸಿಕೊಳ್ಳಿ. ಈಗ ಸಾವನ್ನಪ್ತಾ ಇರುವ ಬಹುತೇಕರು ಇದೇ ರೀತಿ ನಿರ್ಲಕ್ಷ್ಯ ವಹಿಸಿದ್ರು ಅನ್ನೋದು ಹಲವಾರು ಪ್ರಕರಣಗಳಲ್ಲಿ ಖಚಿತವಾಗಿದೆ. ಆದ್ರೆ ಬೇರೆ ಬೇರೆ ಅನಾರೋಗ್ಯ ಸಮಸ್ಯೆಗಳಿಂದ ಅಪಾಯ ಎದುರಿಸ್ತಾ ಇರುವ ರೋಗಿಗಳಿಗೆ ಇದು ಅನ್ವಯವಾಗಲ್ಲ.

ಕೊರೊನಾ ಬಂದವರೆಲ್ಲ ಸಿಕ್ಕ ಸಿಕ್ಕ ಟೆಸ್ಟ್ ಮಾಡಿಸಿಕೊಳ್ಳಬೇಕಿಲ್ಲ
ಆರ್ಟಿಪಿಸಿಆರ್ ನಲ್ಲಿ ಪಾಸಿಟಿವ್ ಬಂದ ತಕ್ಷಣ ಚಿಕಿತ್ಸೆ ಪಡೆಯಿರಿ

ಕೊರೊನಾ ಬಂದವರೆಲ್ಲ ಸಿಕ್ಕ ಸಿಕ್ಕ ಟೆಸ್ಟ್ ಮಾಡಿಸಿಕೊಳ್ಳಬೇಕಾಗಿಲ್ಲ. ಕೊರೊನಾ ಬಂದ ತಕ್ಷಣವೇ ಸಿಟಿ ಸ್ಕ್ಯಾನ್ ಮಾಡಿಸೋದು, ರಕ್ತ ಪರೀಕ್ಷೆ ಮಾಡಿಸೋದು ಬೇಕಾಗಿಲ್ಲ. ಆರ್ಟಿಪಿಸಿಆರ್ ಟೆಸ್ಟ್ ನಲ್ಲಿ ಪಾಸಿಟಿವ್ ಅಂತ ಗೊತ್ತಾದಾಗ ಮಾರ್ಗಸೂಚಿಯಂತೆ ಚಿಕಿತ್ಸೆ ಪಡೆದುಕೊಳ್ಳಿ. ಸಾಮಾನ್ಯ ಲಕ್ಷಣ ಇರೋರಿಗೆ ಬಹುತೇಕ ಈ ಟ್ರೀಟ್ಮೆಂಟ್ ನಿಂದಲೇ ಗುಣವಾಗುತ್ತೆ. ಆದ್ರೆ ಮೂರ್ನಾಲ್ಕು ದಿನಗಳ ನಂತರವೂ ನಿಮಗೆ ಆರೋಗ್ಯ ಸುಧಾರಣೆ ಆಗದೇ ಇದ್ರೆ ಸಿಟಿ ಸ್ಕ್ಯಾನ್ ಮತ್ತಿತರೆ ಟೆಸ್ಟ್ ಮಾಡಿಸಬೇಕಾಗುತ್ತದೆ. ಮೊದಲೇ ಟೆಸ್ಟ್ ಮಾಡಿಸೋದ್ರಿಂದ ಯಾವುದೇ ಪ್ರಯೋಜನ ಆಗಲ್ಲ. ಕಾರಣ ಮೆಡಿಸಿನ್ ತೆಗೆದುಕೊಳ್ಳಲು ಶುರು ಮಾಡಿ ಅದರ ಪರಿಣಾಮ ಆಗೋದಕ್ಕೆ ,ಆರೋಗ್ಯದಲ್ಲಿ ಚೇತರಿಕೆ ಕಾಣದೋಕ್ಕೆ 24 ಗಂಟೆಯಿಂದ 48 ಗಂಟೆಗಳ ಟೈಮ್ ಆದ್ರೂ ಬೇಕಾಗುತ್ತದೆ. ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೀತಾ ಇದ್ರೂ ಆರೋಗ್ಯದಲ್ಲಿ ಸುಧಾರಣೆ ಆಗಿಲ್ಲ ಅಂದ್ರೆ ತಕ್ಷಣ ಎಚ್ಚೆತ್ತುಕೊಳ್ಳಬೇಕು.

ನೀವು ವೈದ್ಯರು ಹೇಳಿದ ಹಾಗೆ ನಡೆದುಕೊಂಡರೆ ಯಾವುದೇ ಅಪಾಯವೂ ಆಗೋದಿಲ್ಲ. ಅದು ಬಿಟ್ಟು ಎರಡನೇ ಅಲೆ ಕಡಿಮೆ ಆಗ್ತಾ ಇದೆ, ನಮ್ಮ ಊರಿನಲ್ಲಿ ಕೊರೊನಾ ಇಲ್ಲ, ನಾನು ಮನೆಯಿಂದ ಆಚೇನೇ ಹೋಗಿಲ್ಲ, ನನಗೆಲ್ಲಿಂದ ಕೊರೊನಾ ಬರುತ್ತೆ ಅಂತ ಮನೆಯಲ್ಲೇ ಇದ್ದು ಕೊರೊನಾ ಸೋಂಕು ಉಲ್ಭಣವಾಗುವಂತೆ ಮಾಡಿಕೊಳ್ಳಬೇಡಿ. ವೈದ್ಯರು ಹೇಳಿದ ಹಾಗೆ ಚಿಕಿತ್ಸೆ ಪಡೆದುಕೊಂಡರೂ ಹಲವಾರು ಮಂದಿ ಕೊರೊನಾ ಗೆಲ್ಲಲು ಸಾಧ್ಯವಾಗಿಲ್ಲ. ಇನ್ನು ಕೊರೊನಾ ಗೆದ್ದು ಬಂದರೂ ಅನೇಕರು ಕೆಲವು ದಿನಗಳ ನಂತರ ಅಪಾಯ ಎದುರಿಸಿದ್ದಾರೆ. ಈಗಂತೂ ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್, ಯಲ್ಲೋ ಫಂಗಸ್ ಕಾಟ ಬೇರೆ. ಹೀಗಾಗಿ ಆದಷ್ಟು ಜಾಗ್ರತೆಯಿಂದ ಇದ್ದರೆ ಎರಡನೇ ಅಲೆಯಿಂದ ಪಾರಾಗಬಹುದು. ಇಲ್ಲವಾದರೆ ಈಗ ಕೇಸ್ ಕಡಿಮೆ ಆಗ್ತಾ ಇರೋ ಸಂದರ್ಭದಲ್ಲಿ, ಎರಡನೇ ಅಲೆಯ ಕೊನೆಯ ಹಂತದಲ್ಲಿ ಸೋಂಕು ತಗುಲಿಸಕೊಳ್ಳದಿರಿ.

ಕೊರೊನಾ ಸೋಂಕಿತರ ಸಂಖ್ಯೆ ಇಳಿತಾ ಇದೆ ಅಂತ ಎಚ್ಚರ ತಪ್ಪಬೇಡಿ. ಏನೂ ಆಗಲ್ಲ ಅಂತೆಲ್ಲ ಅತಿಯಾದ ವಿಶ್ವಾಸದಿಂದ ಇರಬೇಡಿ. ಹಾಗಂತ ಗಾಬರಿ ಮಾಡಿಕೊಳ್ಳೋದೂ ಬೇಡಾ. ಮುನ್ನೆಚ್ಚರಿಕೆ ಮಾತ್ರ ಇರಲಿ, ಹಾಗೆಯೇ ತಜ್ಞರ ಸಲಹೆಯನ್ನೂ ಪರಿಗಣಿಸಿ.

 

The post ಕೊರೊನಾ 2ನೇ ಅಲೆ ತಗ್ಗಿದ್ರೂ, ಮರಣ ಪ್ರಮಾಣ ಕಡಿಮೆಯಾಗದಿರೋದು ಯಾಕೆ? appeared first on News First Kannada.

Source: newsfirstlive.com

Source link