ದೆಹಲಿಯಲ್ಲಿ ಕೊರೊನಾದ ಮೂರನೇ ಅಲೆ ಭಾರೀ ದೊಡ್ಡ ಪ್ರಮಾಣದಲ್ಲಿ ಅಪ್ಪಳಿಸಲಿದೆ, ಹೀಗಾಗಿ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಇಂಡಿಯನ್ ಇನ್​ಸ್ಟಿಟ್ಯೂಟ್​ ಆಫ್ ಟೆಕ್ನಾಲಜಿ (ಐಐಟಿ) ಎಚ್ಚರಿಕೆಯನ್ನ ನೀಡಿದೆ.

ಐಐಟಿ ನೀಡಿರುವ ಮಾಹಿತಿ ಪ್ರಕಾರ.. ದೆಹಲಿಯಲ್ಲಿ ಪ್ರತಿನಿತ್ಯ ಸುಮಾರು 45 ಸಾವಿರ ಪ್ರಕರಣಗಳನ್ನ ಎದುರಿಸಬೇಕಾಗಬಹುದು, ಅಲ್ಲದೇ 9 ಸಾವಿರ ರೋಗಿಗಳಿಗೆ ಆಸ್ಪತ್ರೆಯ ಅಗತ್ಯತೆ ಬೇಕಾಗುತ್ತದೆ. ಹೀಗಾಗಿ ಕೊರೊನಾದ ಮೂರನೇ ಅಲೆಯನ್ನ ಎದುರಿಸಲು ಸಿದ್ಧರಾಗಬೇಕಿದೆ ಎಂದು ದೆಹಲಿ ಕೋರ್ಟ್​ಗೆ ಐಐಟಿ ವರದಿಯನ್ನ ನೀಡಿದೆ.

ಎರಡನೇ ಅಲೆಗಿಂತ ಮೂರನೇ ಅಲೆ ತುಂಬಾ ಭಯಾನಕವಾಗಿರಲಿದೆ. ಇದಕ್ಕಾಗಿ ಸರ್ಕಾರ ಇಗಿನಿಂದಲೇ ತಯಾರಿ ಮಾಡಿಕೊಳ್ಳಬೇಕು. ಒಟ್ಟು 47 ವೈದ್ಯಕೀಯ ಉಪಕರಣಗಳನ್ನ ಇಗೀನಿಂದಲೇ ಸಂಗ್ರಹಿಸಿಟ್ಟಿಕೊಳ್ಳಬೇಕು. ಪ್ರತಿನಿತ್ಯ 944 ಮೆಟ್ರಿಕ್ ಟನ್​​ ಆಕ್ಸಿಜನ್ ಅವಶ್ಯಕತೆ ಬೀಳುತ್ತದೆ ಎಂದು ಕೋರ್ಟ್​​ಗೆ ಮಾಹಿತಿ ನೀಡಿದೆ.

ಐಐಟಿ ನೀಡಿರುವ ವರದಿ ಬೆನ್ನಲ್ಲೇ ನ್ಯಾ. ವಿಪಿನ್ ಸಿಂಘಿ ಮತ್ತು ನ್ಯಾ.ಜಸ್ಮೀತ್ ಸಿಂಗ್ ನೇತೃತ್ವದ ಪೀಠ, ಕೊರೊನಾದ ಮೂರನೇ ಅಲೆಯನ್ನ ಎದುರಿಸಲು ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಅಲ್ಲದೇ 4 ವಾರಗಳ ಒಳಗೆ ಎಲ್ಲಾ ಸಿದ್ಧತೆಗಳನ್ನ ಮಾಡಿಕೊಂಡು ಕೋರ್ಟ್​ಗೆ ಮಾಹಿತಿ ನೀಡಬೇಕು ಎಂದು ಕೋರ್ಟ್​ ಸೂಚನೆ ನೀಡಿದೆ.

The post ‘ಕೊರೊನಾ 3ನೇ ಅಲೆ ಇನ್ನೂ ಭಯಂಕರವಾಗಿರುತ್ತೆ’ ಈ ಭಯಾನಕ ಎಚ್ಚರಿಕೆ ಕೊಟ್ಟಿದ್ಯಾರು ಗೊತ್ತಾ? appeared first on News First Kannada.

Source: newsfirstlive.com

Source link