ನವದೆಹಲಿ: ಕೊರೊನಾ ಎರಡನೇ ಅಲೆಗೆ ದೇಶದ ಆರೋಗ್ಯ ವ್ಯವಸ್ಥೆಯೇ ನಲುಗಿಹೋಗುತ್ತಿದೆ. ಈ ಮಧ್ಯೆ ಕೇಂದ್ರ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ. ವಿಜಯ್ ರಾಘವನ್ ಸಮಾಧಾನಕರ ಸುದ್ದಿಯೊಂದನ್ನ ನೀಡಿದ್ದಾರೆ.

ಜನರಲ್ಲಿ ಭೀತಿ ಸೃಷ್ಟಿಸುತ್ತಿರುವ ಕೊರೊನಾ ಮೂರನೇ ಅಲೆಯು ಎಲ್ಲ ಕಡೆಯೂ ಸಂಭವಿಸುವುದಿಲ್ಲ ಅಂತಾ ವಿಜಯ್ ರಾಘವನ್ ಹೇಳಿದ್ದಾರೆ. ಸ್ಥಳೀಯ, ಜಿಲ್ಲಾ ಹಾಗೂ ರಾಜ್ಯ ಮಟ್ಟಗಳಲ್ಲಿ ಕೊರೊನಾ ಮಾರ್ಗಸೂಚಿಗಳು ಎಷ್ಟು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲಾಗುತ್ತಿದೆ ಎಂಬುದರ ಮೇಲೆ ಇದು ಅವಲಂಬಿತವಾಗಿರುತ್ತದೆ. ಕಠಿಣ ನಿಯಮಗಳನ್ನ ಕೈಗೊಂಡರೆ ಈ ಸ್ಥಗಳಲ್ಲಿ ಅಥವಾ ದೇಶದಲ್ಲಿ ಎಲ್ಲಿಯಾದ್ರೂ ಕುಡ 3ನೇ ಅಲೆ ಬರದೇ ಇರಬಹುದು ಎಂದು ಕೇಂದ್ರ ಸರ್ಕಾರಕ್ಕೆ ಅವರು ಸಲಹೆ ನೀಡಿದ್ದಾರೆ ಎಂದು ವರದಿಯಾಗಿದೆ.

The post ಕೊರೊನಾ 3ನೇ ಅಲೆ ಎಲ್ಲಾ ಕಡೆಯೂ ಬರಲ್ಲ, ಕಠಿಣ ನಿಯಮ ಕೈಗೊಂಡ್ರೆ ತಡೆಯಬಹುದು -ಕೇಂದ್ರ ಪ್ರಧಾನ ವೈಜ್ಞಾನಿಕ ಸಲಹೆಗಾರ ರಾಘವನ್ appeared first on News First Kannada.

Source: newsfirstlive.com

Source link