ಕೊರೊನಾ 3ನೇ ಅಲೆ; ಮುಂದಿನ 100-120 ದಿನಗಳು ಭಾರೀ ಡೇಂಜರ್

ಕೊರೊನಾ 3ನೇ ಅಲೆ; ಮುಂದಿನ 100-120 ದಿನಗಳು ಭಾರೀ ಡೇಂಜರ್

ನವದೆಹಲಿ: ಕೋವಿಡ್​ ವಿರುದ್ಧದ ಹೋರಾಟದಲ್ಲಿ ಮುಂದಿನ 100 ರಿಂದ 120 ದಿನಗಳು ಭಾರತದ ಪಾಲಿಗೆ ಗಂಭೀರವಾದ ದಿನಗಳು ಎಂದು ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆಯನ್ನ ನೀಡಿದೆ.

ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಪೌಲ್ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದು.. ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಇಳಿಕೆಯಾಗುವುದು ಇದೀಗ ಮಂದಗತಿಗೆ ಸಾಗಿದೆ.. ಇದು ವಾರ್ನಿಂಗ್ ಸಿಗ್ನಲ್ ಎಂದಿದ್ದಾರೆ. ಪೊಲೀಸ್ ಸಿಬ್ಬಂದಿ ಮೇಲೆ ಐಸಿಎಂಆರ್​ ನಡೆಸಿದ ಅಧ್ಯಯನದ ವರದಿಯನ್ನು ಮುಂದಿಟ್ಟುಕೊಂಡು ಈ ಮಾತುಗಳನ್ನು ಹೇಳಿದ್ದಾರೆ.

ಈ ಅಧ್ಯಯನದಲ್ಲಿ ಎರಡೂ ವ್ಯಾಕ್ಸಿನ್ ಪಡೆದ ನಂತರ 95 ಪರ್ಸೆಂಟ್ ಸಾವುಗಳು ಕಡಿಮೆಯಾಗಿರುವುದು ಕಂಡುಬಂದಿದೆ ಎಂದಿದ್ದಾರೆ. ಒಂದು ಡೋಸ್ ವ್ಯಾಕ್ಸಿನ್ 82 ಪರ್ಸೆಂಟ್​ವರೆಗೆ ಸಾವಿನ ಸಂಖ್ಯೆಯನ್ನ ಇಳಿಸಿದೆ. 2 ಡೋಸ್ ವ್ಯಾಕ್ಸಿನ್ 95 ಪರ್ಸೆಂಟ್ ಸಾವಿನ ಸಂಖ್ಯೆಯನ್ನ ಕಡಿಮೆಯಾಗಿಸಿದೆ ಎಂದಿದ್ದಾರೆ.

ನಾವು ಜುಲೈ ಅಂತ್ಯದ ವೇಳೆಗೆ 50 ಕೋಟಿ ಕೊರೊನಾ ವ್ಯಾಕ್ಸಿನ್ ಡೋಸ್ ಹಂಚಿಕೆ ಮಾಡುವ ಗುರಿ ಇಟ್ಟುಕೊಂಡಿದ್ದೇವೆ. ಸರ್ಕಾರ 66 ಕೋಟಿ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗೆ ಆರ್ಡರ್ ನೀಡಿದೆ. ಹೆಚ್ಚುವರಿಯಾಗಿ 22 ಕೋಟಿ ಡೋಸ್ ವ್ಯಾಕ್ಸಿನ್ ಖಾಸಗಿ ಆಸ್ಪತ್ರೆಗಳಿಗೆ ಹೋಗಲಿವೆ ಎಂದಿದ್ದಾರೆ.

ಇನ್ನು ಕೇಂದ್ರ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಮಾತನಾಡಿ.. ಲಾಕ್​ಡೌನ್ ಸಡಿಲಿಕೆ ಮಾಡಿದ ನಂತರ ಜನರು ಮಾಸ್ಕ್ ಧರಿಸುವುದರಲ್ಲಿ ನಿರ್ಲಕ್ಷ್ಯ ತೋರುತ್ತಿರುವುದು ಕಂಡುಬಂದಿದೆ. ನಾವು ಮಾಸ್ಕ್ ಧರಿಸುವುದನ್ನ ಬದುಕಿನ ಭಾಗವಾಗಿಸಿಕೊಳ್ಳಬೇಕಿದೆ. ಇತ್ತೀಚಿನ ದಿನಗಳಲ್ಲಿ ರಿಕವರಿ ರೇಟ್ ಹೆಚ್ಚಾಗಿದೆ ಜೊತೆಗೆ ಪ್ರತಿದಿನದ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ. ಆದರೆ ಕೆಲವು ಎಚ್ಚರಿಕೆಗಳನ್ನೂ ತೆಗೆದುಕೊಳ್ಳಬೇಕಿದೆ.. ದೇಶದ 47 ಜಿಲ್ಲೆಗಳಲ್ಲಿ ಪಾಸಿಟಿವಿಟಿ ಈಗಲೂ 10 ಪರ್ಸೆಂಟ್​ಗಿಂತಲೂ ಹೆಚ್ಚಾಗಿದೆ ಎಂದಿದ್ದಾರೆ.

The post ಕೊರೊನಾ 3ನೇ ಅಲೆ; ಮುಂದಿನ 100-120 ದಿನಗಳು ಭಾರೀ ಡೇಂಜರ್ appeared first on News First Kannada.

Source: newsfirstlive.com

Source link