ನವದೆಹಲಿ: ಕೊರೊನಾ ಎರಡನೇ ಅಲೆಯಲ್ಲಿ ಇದೀಗ ಕೊರೊನಾ ಸೋಂಕುಗಳ ಸಂಖ್ಯೆ ಕಡಿಮೆಯಾಗುತ್ತಿದೆ.. ಈ ಮಧ್ಯೆ ತಜ್ಞರು ಮೂರನೇ ಅಲೆಯ ಬಗ್ಗೆ ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ. ಇತ್ತೀಚೆಗೆ ಏಮ್ಸ್ ಮುಖ್ಯಸ್ಥ 6 ರಿಂದ 8 ವಾರಗಳಲ್ಲಿ ಮೂರನೇ ಅಲೆ ಭಾರತಕ್ಕೆ ಅಪ್ಪಳಿಸಲಿದೆ ಎಂದು ಹೇಳಿದ್ದಾರೆ.

ಈ ಮಧ್ಯೆ ಇಂದು ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶ್ವೇತ ಪತ್ರವೊಂದನ್ನ ಹೊರಡಿಸಿದ್ದಾರೆ. ಈ ಶ್ವೇತಪತ್ರದಲ್ಲಿ ಕೊರೊನಾ ನಿಯಂತ್ರಿಸುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸಲಹೆಗಳನ್ನು ನೀಡಿದ್ದು.. ನಾನು ಬೆರಳು ಮಾಡಿ ತೋರಿಸುತ್ತಿಲ್ಲ.. ಬದಲಿಗೆ ಕೊರೊನಾ ವಿರುದ್ಧ ಹೋರಾಟಕ್ಕೆ ಸಹಾಯ ಮಾಡುತ್ತಿದ್ದೇನೆ.. ಇಡೀ ದೇಶಕ್ಕೆ ಮೂರನೇ ಅಲೆ ಅಪ್ಪಳಿಸಲಿದೆ ಎಂಬುದು ಗೊತ್ತಿದೆ ಎಂದಿದ್ದಾರೆ.

3ನೇ ಅಲೆ ನಂತರ ಮತ್ತಷ್ಟು ಅಲೆಗಳೂ ಸೃಷ್ಟಿಯಾಗಬಹುದು..

ನಾನು ಥರ್ಡ್ ವೇವ್ ಬಗ್ಗೆಯಷ್ಟೇ ಹೇಳುವುದಿಲ್ಲ.. ಕೊರೊನಾ ವೈರಸ್​ ಹೆಚ್ಚು ಹೆಚ್ಚು ಮ್ಯೂಟೇಟ್ ಆಗುತ್ತಿದ್ದು ಥರ್ಡ್ ವೇವ್ ನಂತರ ಮತ್ತಷ್ಟ ಅಲೆಗಳು ಅಪ್ಪಳಿಸಬಹುದೆಂದು ಭಾವಿಸುತ್ತೇನೆ. ಇದಕ್ಕಾಗಿ ಸರ್ಕಾರ ಸಜ್ಜಾಗಬೇಕೆಂದು ನಾವು ಒತ್ತಾಯಿಸುತ್ತೇವೆ. ಮೊದಲ ಮತ್ತು ಎರಡನೇ ಅಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಣ ವಿನಾಶಕಾರಿಯಾಗಿತ್ತು ಎನ್ನುವುದು ಸ್ಪಷ್ಠ. ನಾವದನ್ನು ಪಾಯಿಂಟ್ ಮಾಡಲೂ ಪ್ರಯತ್ನಿಸಿದೆವು.

ಕೋವಿಡ್ ಕೇಬಲ್ ಬಯೋಲಾಜಿಕಲ್ ವಿದ್ಯಮಾನವಷ್ಟೇ ಆಗಿರದೆ ಆರ್ಥಿಕ ಮತ್ತು ಸಾಮಾಜಿಕ ವಿದ್ಯಮಾನವೂ ಹೌದು. ಹೀಗಾಗಿ ನಾವು ಅತೀ ಬಡವ ಮತ್ತು ಅತೀ ನಿಶ್ಯಕ್ತ ಜನರ ಅಗತ್ಯಗಳನ್ನು ಪೂರೈಸಬೇಕಿದೆ.- ರಾಹುಲ್ ಗಾಂಧಿ, ಎಐಸಿಸಿ ಮಾಜಿ ಅಧ್ಯಕ್ಷ

ಇದೇ ವೇಳೆ ನಾವು ಮೂಲಭೂತವಾಗಿ 4 ಪಿಲ್ಲರ್​​ಗಳನ್ನು ಅಭಿವೃದ್ಧಿಪಡಿಸಿದ್ದೇವೆ ಎಂದ ರಾಹುಲ್ ಗಾಂಧಿ ಇವುಗಳನ್ನು ಪಾಲಿಸಿದರೆ ಕೊರೊನಾ ಮೂರನೇ ಅಲೆಯ ಜೊತೆಗೆ ಹೋರಾಟ ನಡೆಸುವುದರ ಜೊತೆ ಜೊತೆಗೇ ಆರ್ಥಿಕತೆಯನ್ನೂ ಕಾಪಾಡಿಕೊಳ್ಳಬಹುದು ಎಂದಿದ್ದಾರೆ.

ರಾಹುಲ್ ಗಾಂಧಿ ಹೇಳಿದ 4 ಸಲಹೆಗಳು.. 

1. ಎಲ್ಲಿ ತಪ್ಪಾಗಿದೆಯೆಂಬುದನ್ನು ಅರ್ಥ ಮಾಡಿಕೊಳ್ಳುವುದು.. ಇದಕ್ಕೆ ನಮ್ಮ ಸಲಹೆ ಒಂದು ಆಯೋಗವನ್ನ ರಚಿಸಿ ಸಮಸ್ಯೆಗಳ ಬಗ್ಗೆ ಅವರಿಂದ ಮಾಹಿತಿ ಪಡೆದು ಸರಿಪಡಿಸಿಕೊಳ್ಳುವುದು.

2. ನಾವು ಮೂರನೇ ಅಲೆಗೆ ನಮ್ಮನ್ನ ಸಿದ್ಧರಾಗಿಸಿಕೊಳ್ಳುವುದು.. ಆಕ್ಸಿಜನ್​ನಂಥ ಅತ್ಯವಶ್ಯಕ ಅಗತ್ಯಗಳ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದು.

3. ಆರ್ಥಿಕ ನೆರವು ಪ್ಯಾಕೇಜ್ ಘೋಷಿಸುವುದು.

4. ಕೊನೆಯದಾಗಿ ಕೋವಿಡ್ ಪರಿಹಾರ ನಿಧಿ.. ಪ್ರೀತಿ ಪಾತ್ರರನ್ನು ಕಳೆದುಕೊಂಡವರಿಗೆ ಪರಿಹಾರ ನೀಡುವ ಮೂಲಕ ಅವರ ಸಂಕಷ್ಟಕ್ಕೆ ನೆರವಾಗುವುದು.

The post ಕೊರೊನಾ 3ನೇ ಅಲೆ ವಿರುದ್ಧ ಹೋರಾಡಲು 4 ಸಲಹೆ ನೀಡಿದ ರಾಹುಲ್ ಗಾಂಧಿ appeared first on News First Kannada.

Source: newsfirstlive.com

Source link