ಏಪ್ರಿಲ್ 16 ರಂದು ತೆರೆಗೆ ಬಂದ ಅಜಯ್ ರಾವ್ ಮತ್ತು ಅಪೂರ್ವಾ ಅಭಿನಯದ "ಕೃಷ್ಣ ಟಾಕೀಸ್" ಚಿತ್ರ ರಿಲೀಸ್ ಆದ ನಾಲ್ಕು ದಿನಗಳಲ್ಲೇ ಪ್ರದರ್ಶನ ನಿಲ್ಲಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ಚಿತ್ರ ನಿರ್ಮಾಪಕರು ಗೋವಿಂದರಾಜು ಎ.ಎಚ್. ಆಲೂರು ಹಾಗೂ ಇಡೀ ತಂಡವು ಈ ತೀರ್ಮಾನಕ್ಕೆ ಒಪ್ಪಿದ್ದು ಪ್ರಸ್ತುತ ಕೋವಿಡ್ ಸಮಸ್ಯೆಗಳ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ. ಎಂದು ನಿರ್ದೇಶಕ ವಿಜಯ್ ಆನಂದ್ ಹೇಳಿದ್ದಾರೆ.

“ಚಿತ್ರವು ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಪಡೆಯುತ್ತಿದ್ದರೂ, ಜನರು ಈಗ ಚಿತ್ರಮಂದಿರಗಳಿಗೆ ಬರಲು ಆಸಕ್ತಿ ಹೊಂದಿಲ್ಲ. ಎರಡನೆಯದಾಗಿ, ಮಾಲ್‌ಗಳು, ಚಿತ್ರಮಂದಿರಗಳು ಅಥವಾ ರೆಸ್ಟೋರೆಂಟ್‌ಗಳಿಗೆ ಸಂಬಂಧಿಸಿದಂತೆ ಸರ್ಕಾರ ತೆಗೆದುಕೊಳ್ಳುವ ನಿರ್ಧಾರವು ಜನರನ್ನು ಮತ್ತಷ್ಟು ನಿರ್ಬಂಧಿಸುತ್ತದೆ. ಥಿಯೇಟರ್ ಮಾಲೀಕರು ಪ್ರದರ್ಶನವನ್ನು ಖಾಲಿ ಆಸನಗಳೊಂದಿಗೆ ನಡೆಸುತ್ತಾರೆ ಎಂದು ನಾವು ನಿರೀಕ್ಷಿಸಲಾಗುವುದಿಲ್ಲ. ಇದಲ್ಲದೆ, ನಾವು ಆರೋಗ್ಯದ ಕುರಿತಂತೆ ಅಪಾಯದಲ್ಲಿದ್ದು ಇದರಿಂದ ಸಾರ್ವಜನಿಕರಿಗೆ ಅನಾನುಕೂಲವಾಗಬಾರದು. ಆದ್ದರಿಂದ, ನಮ್ಮ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶಿಸುವ ನಿರ್ಧಾರವನ್ನು ಕೈಬಿಟ್ಟಿದ್ದೇವೆ".

ಪರಿಸ್ಥಿತಿ ಹದಗೆಡುತ್ತಿದೆ ಎಂದು ಅರಿವಿದ್ದೂ ಚಿತ್ರವನ್ನೇಕೆ ಬಿಡುಗಡೆ ಮಾಡಲಾಗಿತ್ತು ಎಂಬ ಪ್ರಶ್ನೆಗೆ ಈ ನ್ರ್ಧಾರ ಎಡೆಮಾಡಿದೆ. ಇದಕ್ಕೆ ಉತ್ತರಿಸಿರುವ ನಿರ್ದೇಶಕ “ನಮ್ಮ ಚಿತ್ರವನ್ನು ಬಿಡುಗಡೆ ಮಾಡುವ ನಿರ್ಧಾರವನ್ನು ಒಂದು ತಿಂಗಳ ಹಿಂದೆ ತೆಗೆದುಕೊಳ್ಳಲಾಗಿದೆ, ಆ ಸಮಯದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತಿತ್ತು. ಆದರೆ, ಕೊರೋನಾ ಮತ್ತೆ ಏರಿಕೆಯಾಗುತ್ತಿದ್ದು ಚಿತ್ರಮಂದಿರಗಳಲ್ಲಿ ಐವತ್ತು ಶೇಕಡಾ ಸಾಮರ್ಥ್ಯದೊಡನೆ ಚಿತ್ರವನ್ನು ಬಿಡುಗಡೆ ಮಾಡಲು ನಾವು ನಿರ್ಬಂಧಕ್ಕೆ ಒಳಪಟ್ಟಿದ್ದೇವೆ. ಏ.13ರಿಂದೀಚೆಗೆ ಕೋವಿಡ್ ಪ್ರಕರಣ ಏರುಗತಿಯಲ್ಲಿ ಸಾಗಿತ್ತಾದರೂ ನಾವು ಆ ಹೊತ್ತಿಗೆ,ವಿವಿಧ ಚಿತ್ರಮಂದಿರಗಳೊಂದಿಗೆ ಸಂಬಂಧ ಹೊಂದಿದ್ದೆವು. ಅದಕ್ಕಾಗಿ ಚಿತ್ರ ಬಿಡುಗಡೆ ಮಾಡುವುದನ್ನು ಹೊರತುಪಡಿಸಿ ನಮಗೆ ಬೇರೆ ಆಯ್ಕೆಗಳಿರಲಿಲ್ಲ, ಆದರೆ ವೀಕ್ಷಿಸಲು ನಮಗೆ ಪ್ರೇಕ್ಷಕರು ಇಲ್ಲದಿದ್ದಾಗ, ಅದನ್ನು ಚಾಲನೆಯಲ್ಲಿರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ”.

ಒಮ್ಮೆ ಕೊರೋನಾ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದಾಗ ನಿರ್ಮಾಣ ಸಂಸ್ಥೆ ಚಿತ್ರವನ್ನು ಮತ್ತೆ ಚಿತ್ರಮಂದಿರಗಳಲ್ಲಿ ಪ್ರದರ್ಶನ ಮಾಡಲಿದೆ “ಸಾರ್ವಜನಿಕ ಆರೋಗ್ಯ ಮುಖ್ಯ ಮತ್ತು ನಾವೂ ಆ ವರ್ಗಕ್ಕೆ ಸೇರುತ್ತೇವೆ. ಇಲ್ಲಿಯವರೆಗೆ, ಚಿತ್ರವನ್ನು ಯಾರು ನೋಡಿರುವರೋ ಅವರೆಲ್ಲಾ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಇದು ಮರು ಬಿಡುಗಡೆಯ ಬಗ್ಗೆ ಹೆಚ್ಚಿನ ವಿಶ್ವಾಸವನ್ನು ನೀಡಿದೆ. ಜನರ ಜೀವನವು ಸಾಮಾನ್ಯ ಸ್ಥಿತಿಗೆ ಬಂದಾಗ ನಾವು ಚಿತ್ರಮಂದಿರಗಳಿಗೆ ಹಿಂತಿರುಗುತ್ತೇವೆ” ಎಂದು ಅಜಯ್ ರಾವ್ ಹೇಳಿದರು.

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More