ನವದೆಹಲಿ: ಮಾರಕ ಕೋವಿಡ್​​-19 ವೈರಸ್​​ ತಡೆಯಲು ಹಗಲು ರಾತ್ರಿಯೆನ್ನದೇ ದುಡಿಯುತ್ತಿರುವ ಎಲ್ಲಾ ಭಾರತೀಯ ವೈದ್ಯರಿಗೂ ಈ ವರ್ಷ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾರತ ರತ್ನ ನೀಡಲಿ ಎಂದು ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​​ ಆಗ್ರಹಿಸಿದ್ದಾರೆ.

ಕೇಂದ್ರ ಸರ್ಕಾರ ದೇಶದ ಎಲ್ಲಾ ವೈದ್ಯರು ಮತ್ತು ದಾದಿಯರಿಗೂ ಭಾರತ ರತ್ನ ನೀಡಲೇಬೇಕು. ಆಗ ಮಾತ್ರ ತಮ್ಮ ಪ್ರಾಣವನ್ನು ಲೆಕ್ಕಿಸದೇ ದೇಶಕ್ಕಾಗಿ ಜನರ ಸೇವೆಯಲ್ಲಿ ತೊಡಗಿರುವ ಕೋವಿಡ್​​-19 ವಾರಿಯರ್ಸ್​ಗೆ ಗೌರವ ನೀಡಿದಂತಾಗುತ್ತದೆ. ಇದು ಇಡೀ ದೇಶಕ್ಕೆ ಸಂತೋಷ ನೀಡಲಿದೆ ಎಂದು ಕೇಂಜ್ರಿವಾಲ್​ ಟ್ವೀಟ್ ಮಾಡಿದ್ದಾರೆ.

ಲಕ್ಷಾಂತರ ವೈದ್ಯಕೀಯ ಸಿಬ್ಬಂದಿ ದೇಶಕ್ಕಾಗಿ ಶ್ರಮಿಸುತ್ತಿದ್ದಾರೆ. ಒಂದು ವೇಳೆ ಇಂತಹ ಕೊರೋನಾ ವಾರಿಯರ್ಸ್​ಗೆ ಭಾರತ ರತ್ನ ನೀಡಲು ದೇಶದ ಕಾನೂನು ಅಡ್ಡ ಬಂದಲ್ಲಿ ಅದನ್ನು ಬದಲಾಯಿಸಿ ಎಂದು ಪ್ರಧಾನಿ ಮೋದಿಯವರಲ್ಲಿ ಕೇಜ್ರಿವಾಲ್​ ವಿನಂತಿಸಿದ್ದಾರೆ.

The post “ಕೊರೋನಾ ವಿರುದ್ಧ ಹೋರಾಡುತ್ತಿರುವ ದೇಶದ ವೈದ್ಯರಿಗೆ ಭಾರತ ರತ್ನ ಕೊಡಿ” -ಕೇಂದ್ರಕ್ಕೆ ಕೇಜ್ರಿವಾಲ್​ ಒತ್ತಾಯ appeared first on News First Kannada.

Source: newsfirstlive.com

Source link