ಕೊರೋನಾ ಹೊಡೆತದಿಂದ ಇನ್ನೂ ಚೇತರಿಸಿಕೊಳ್ಳದ ಚಿತ್ರರಂಗಕ್ಕೆ ಆಕಸ್ಮಿಕ ಸಾವುಗಳು ಮರ್ಮಾಘಾತ ನೀಡುತ್ತಿವೆ: ತಾರಾ ಅನುರಾಧಾ


Tara Anuradha

ಬೆಂಗಳೂರಿನ ಸದಾಶಿವನಗರನಲ್ಲಿರುವ ಪುನೀತ್ ರಾಜಕುಮಾರ್ ಅವರ ಮನೆಗೆ ನಟ-ನಟಿಯರು, ಗಣ್ಯರು ಭೇಟಿ ನೀಡುತ್ತಲೇ ಇದ್ದಾರೆ. ಅಪ್ಪು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದವರು ಈಗ ಅವರ ಮನೆಗೆ ಭೇಟಿ ಅವರ ಮಡದಿ ಮತ್ತು ಮಕ್ಕಳಿಗೆ ಸಾಂತ್ವನ ಹೇಳಿ ಹೋಗುತ್ತಿದ್ದಾರೆ. ಶುಕ್ರವಾರದಂದು ಪುನೀತ್ ನಿವಾಸಕ್ಕೆ ಭೇಟಿ ನೀಡಿದವರಲ್ಲಿ ಖ್ಯಾತ ನಟಿ ತಾರಾ ಅನುರಾಧ ಸಹ ಒಬ್ಬರು. ಕುಟುಂಬದವರನ್ನು ಮಾತಾಡಿಸಿ ಹೊರ ಬಂದ ನಂತರ ಅವರ ಅಪ್ಪು ಸಾವಿಗೆ ಸಂಬಂಧಿಸಿದ ಅಂಕಿಗಳ ಆಧಾರದಲ್ಲಿ ಮಾತಾಡಿ ಮಾಧ್ಯಮದವರಲ್ಲಿ ಸೋಜಿಗ ಹುಟ್ಟಿಸಿದರು.

ತಾರಾ ಅವರು ಹೇಳಿದ್ದೇನೆಂದರೆ, 46 ನೇ ವಯಸ್ಸಿಗೆ ಮರಣ ಹೊಂದಿದ ಅಪ್ಪು ಅವರ ಅಂತ್ಯಕ್ರಿಯೆ ನಡೆದಿದ್ದು 46 ತಾಸುಗಳ ಬಳಿಕ. ಅದಾದ ಮೇಲೆ ಅವರು ಇತ್ತೀಚಿಗೆ ನಿಧನ ಹೊಂದಿದ ಸ್ಯಾಂಡಲ್ವುಡ್ ನಟರಾದ ಚಿರಂಜೀವಿ ಸರ್ಜಾ ಮತ್ತು ಸಂಚಾರಿ ಅವರ ಹಾಗೆ ಅಪ್ಪು ಸಹ 17 ನೇ ತಾರೀಖಿನಂದು ಜನಿಸಿದ್ದರು. ಅಪ್ಪು ಮಾರ್ಚ್ 17 ರಂದು ಹುಟ್ಟಿದ್ದರೆ, ಸರ್ಜಾ ಅಕ್ಟೋಬರ್ 17 ಮತ್ತು ವಿಜಯ್ ಜುಲೈ 17 ರಂದು ಜನಿಸಿದ್ದರು.

ಕನ್ನಡ ಚಿತ್ರರಂಗ ಬಹಳಷ್ಟು ಜನರನ್ನು ಕಳೆದುಕೊಂಡಿದೆ, ಭಗವಂತ ಇನ್ನು ಯಾರನ್ನೂ ತನ್ನಲ್ಲಿಗೆ ಕರೆಸಿಕೊಳ್ಳುವುದು ಬೇಡ. ಚಿತ್ರರಂಗದವರೆಲ್ಲ ಬಹಳ ದುಃಖದಲ್ಲಿದ್ದಾರೆ. ಕೊರೊನಾ ಪಿಡುಗಿನ ಆಘಾತದಿಂದ ಸ್ಯಾಂಡಲ್ ವುಡ್ ಇನ್ನೂ ಚೇತರಿಸಿಕೊಂಡಿಲ್ಲ. ನಮ್ಮ ನೋವುಗಳು ಇಲ್ಲಿಗೆ ನಿಂತುಬಿಡಲಿ ಎಂದು ತಾರಾ ಅನುರಾಧ ಹೇಳಿದರು.

ಇದನ್ನೂ ಓದಿ:   ಪಟಾಕಿ ಹಚ್ಚೋದು ಬೇಡ, ದೇಹದ ಕ್ಯಾಲೋರಿ ಬರ್ನ್ ಮಾಡೋಣ; ದೀಪಾವಳಿಗೆ ಮನವಿ ಮಾಡಿದ್ದ ಪುನೀತ್ ಹಳೆಯ ವಿಡಿಯೋ ವೈರಲ್​

TV9 Kannada


Leave a Reply

Your email address will not be published. Required fields are marked *