ಬೆಂಗಳೂರು: ನಗರದಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕೊಲೆಗೆ ಸಂಚು ರೂಪಿಸುತ್ತಿದ್ದ ರೌಡಿ ಗ್ಯಾಂಗ್​ವೊಂದನ್ನ ಹೆಡೆಮುರಿಕಟ್ಟಿದ್ದಾರೆ. ಪ್ರಕರಣ ಸಂಬಂಧ ಸೋಮ‌‌ ಕಾಡುಬೀಸನಹಳ್ಳಿ ಹಾಗೂ ಆತನ ಮೂವರು ಸಹಚರರಾದ ಮಧು, ಸುಮಂತ್ ಮತ್ತು ಮುನಿಯಲ್ಲಪ್ಪ  ಅಂದರ್ ಆಗಿದ್ದಾರೆ.

ಸೋಮ ಮತ್ತು ಗ್ಯಾಂಗ್, ರೌಡಿ ರೋಹಿತ್ ಕಾಡುಬೀಸನಹಳ್ಳಿಯ ಕೊಲೆಗೆ ಸ್ಕೆಚ್ ಹಾಕ್ತಿದ್ದರು. ಜೊತೆಗೆ ದರೋಡೆ ನಡೆಸಲು ಸಂಚು ರೂಪಿಸುತ್ತಿದ್ದರು ಎನ್ನಲಾಗಿದೆ. ಸೋಮ‌ ಹಾಗೂ ರೋಹಿತ್ ಇಬ್ಬರು ಕೂಡ ಮಾರತ್​ಹಳ್ಳಿ ಪೊಲೀಸ್ ಠಾಣೆಯ ರೌಡಿಶೀಟರ್ಗಳು.  ರೋಹಿತ್ ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ಆತನನ್ನು ಕೊಲೆಗೈಯಲ್ಲುಸೋಮನ ಗ್ಯಾಂಗ್ ಸ್ಕೆಚ್ ಹಾಕ್ತಿದ್ರು ಅಂತ ಹೇಳಲಾಗ್ತಿದೆ.

ಎಸಿಪಿ ಹೆಚ್.ಎಸ್ ಪರಮೇಶ್ವರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಸೋಮ ಹಾಗೂ ಆತನ ಸಹಚರರನ್ನ ಅರೆಸ್ಟ್​ ಮಾಡಲಾಗಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಮೂರು ಮಾರಾಕಾಸ್ತ್ರಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.

 

The post ಕೊಲೆಗೆ ಸ್ಕೆಚ್ ಹಾಕ್ತಿದ್ದ ರೌಂಡ್​ ಗ್ಯಾಂಗ್​ ಹೆಡೆಮುರಿಕಟ್ಟಿದ ಸಿಸಿಬಿ ಪೊಲೀಸ್​ appeared first on News First Kannada.

Source: newsfirstlive.com

Source link