ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ನೀವು ತಪ್ಪಿಸಬೇಕಾದ ಮತ್ತು ಸೇವಿಸಬೇಕಾದ 6 ಆಹಾರ ಪದಾರ್ಥಗಳಿವು | These six foods to avoid and include in your diet check in kannada


ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ನೀವು ತಪ್ಪಿಸಬೇಕಾದ ಮತ್ತು ಸೇವಿಸಬೇಕಾದ 6 ಆಹಾರ ಪದಾರ್ಥಗಳಿವು

ಸಾಂದರ್ಭಿಕ ಚಿತ್ರ

ಅನಾರೋಗ್ಯಕರ ಕೊಲೆಸ್ಟ್ರಾಲ್ ಸ್ಟ್ರೋಕ್ ಮತ್ತು ಹೃದಯರಕ್ತನಾಳದ ಕಾಯಿಲೆಗೆ ಕಾರಣವಾಗಬಹುದು. ಇದು ಆರೋಗ್ಯದ ಸಮಸ್ಯೆಯಲ್ಲಿ ಅಪಾಯವನ್ನು ಹೆಚ್ಚಿಸಬಹುದು. ಹಾಗಿರುವಾಗ ನೀವು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ತಪ್ಪಿಸಬೇಕಾದ ಮತ್ತು ಸೇವಿಸಬಹುದಾದ ಆಹಾರ ಪದಾರ್ಥಗಳಾವುವು ಎಂಬುದು ಈ ಕೆಳಗಿನಂತಿದೆ ತಿಳಿಯೋಣ. ಕೊಲೆಸ್ಟ್ರಾಲ್ ದೇಹದ ಪ್ರತಿಯೊಂದು ಜೀವಕೋಶದ ಅತ್ಯಗತ್ಯ ಅಂಶವಾಗಿದೆ. ಇದು ಜೀವಕೋಶದ ಪೊರೆಗಳಿಗೆ ಶಕ್ತಿಯನ್ನು ನೀಡುತ್ತದೆ. ಅದಾಗ್ಯೂ ಯಾವುದಾದರೂ ಅಧಿಕವಾಗಿರುವುದು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ನೀವು ಹೆಚ್ಚಿನ ಮಟ್ಟದ ಕೊಲೆಸ್ಟ್ರಾಲ್ ಹೊಂದಿದ್ದರೆ ನೀವು ಸಂಪೂರ್ಣವಾಗಿ ತ್ಯಜಿಸಬೇಕಾದ ಮತ್ತು ಯೋಗ್ಯವಾಗ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳಲು ಸೇವಿಸಬಹುದಾದ ಆಹಾರ ಪದಾರ್ಥಗಳು ಈ ಕೆಳಗಿನಂತಿವೆ.

ನೀವು ತಪ್ಪಿಸಬೇಕಾದ ಆಹಾರ ಪದಾರ್ಥಗಳು
ಕೇಕ್
ಸಕ್ಕರೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ದೇಹದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ. ಕೇಕ್, ಫೇಸ್ಟ್ರಿ ಮತ್ತು ಇತರ ಸಿಹಿ ತಿಂಡಿಗಳು ಹೆಚ್ಚಿನ ಸಕ್ಕರೆ ಅಂಶವನ್ನು ಹೊಂದಿರುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ.

ಫ್ರೆಂಚ್ ಫ್ರೈಸ್
ಅಲೂಗಡ್ಡೆಯಿಂದ ತಯಾರಿಸಿದ ಫ್ರೆಂಚ್ ಫ್ರೈಗಳು ಸಾಕಷ್ಟು ಜನರಿಗೆ ಇಷ್ಟವಾದ ತಿಂಡಿ. ಹಾಗಿರುವಾಗ ರುಚಿಯೆಂದು ಅತಿಯಾಗಿ ಸೇವಿಸಿದರೆ ಆರೋಗ್ಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟದಲ್ಲಿನ ಹೆಚ್ಚಳಕ್ಕೆ ಕಾರಣವಾಗಬಹುದು.

ಸಂಸ್ಕರಿಸಿದ ಆಹಾರ
ಸಂಸ್ಕರಿಸಿದ ಆಹಾರವನ್ನು ಸುಲಭದಲ್ಲಿ ಸ್ಟಾಕ್ ಮಾಡಬಹುದು. ಚೀಸ್, ಧಾನ್ಯಗಳು, ಊಟ ಇತ್ಯಾದಿ ಸಂಸ್ಕರಿಸಿದ ಆಹಾರಗಳು ರುಚಿ ಇದ್ದರೂ ನಿಮ್ಮ ಆರೋಗ್ಯದಲ್ಲಿ ಏರು-ಪೇರು ಉಂಟು ಮಾಡಬಹುದು. ಹಾಗಿರುವಾಗ ಹೆಚ್ಚಿನ ಮಟ್ಟದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೊಂದಿರುವರು ಈ ಆಹಾರ ಪದಾರ್ಥಗಳನ್ನು ತಪ್ಪಿಸಬೇಕು.

ನೀವು ಸೇವಿಸಬಹುದಾದ ಆಹಾರ ಪದಾರ್ಥಗಳು
ಓಟ್ಸ್
ಬಹಳಷ್ಟು ಜನರು ಓಟ್ಸ್ ಸೇವಿಸುತ್ತಾರೆ. ಇದು ಆರೋಗ್ಯಕ್ಕೆ ಸಂಬಂಧಿಸಿದಂತೆ ಅತ್ಯುತ್ತಮ ಆಯ್ಕೆಗಳಲ್ಲಿ ಒಂದು. ಕರಗುವ ನಾರಿನಾಂಶ ಇರುವುದಿಂದ ಸೇವಿಸಲು ಸುಲಭ ಮತ್ತು ಆರೋಗ್ಯಕ್ಕೆ ಸುರಕ್ಷಿತವೂ ಹೌದು. ಅದಾಗ್ಯೂ, ನೆನಪಿಡಬೇಕಾದ ಅಂಶವೆಂದರೆ ಸಂಸ್ಕರಿಸಿದ ಓಟ್ಸ್ ನಿಮ್ಮ ಕೊಲೆಸ್ಟ್ರಾಲ್ ಮಟ್ಟದಲ್ಲಿನ ಹೆಚ್ಚಳಕ್ಕೆ ಕಾರಣವಾಗಬಹುದು.

ನಟ್ಸ್
ಬಾದಾಮಿ, ವಾಲ್ನಟ್ಸ್ ಇತ್ಯಾದಿಗಳು ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಇದು ಎಚ್​ಡಿಎಲ್​ಅನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಇದನ್ನು ಉತ್ತಮ ಕೊಲೆಸ್ಟ್ರಾಲ್ ಎಂದು ಕರೆಯುತ್ತಾರೆ.

ಬೆಂಡೆಕಾಯಿ
ಬೆಂಡೆಕಾಯಿ ಕೆಲವರಿಗೆ ಅಚ್ಚುಮೆಚ್ಚಿನ ಆಹಾರ ಪದಾರ್ಥ. ಇನ್ನು ಕೆಲವರಿಗೆ ಅಷ್ಟು ಇಷ್ಟವಾಗುವುದಿಲ್ಲ. ಬೆಂಡೆಕಾಯಿ ಫೈಬರ್​ನಿಂದ ಸಮೃದ್ಧವಾಗಿರುತ್ತದೆ. ಇದು ಇತ್ಕರ್ಷಣ ನಿರೋಧಕಗಳು ಉತ್ತಮ ಮೂಲವಾಗಿದೆ. ನೀವು ಉತ್ತಮ ಕೊಲೆಸ್ಟ್ರಾಲ್ ಹೆಚ್ಚಿಸಿಕೊಳ್ಳಲು ಬೆಂಡೆಕಾಯಿ ಸೇವಿಸಬಹುದು.

TV9 Kannada


Leave a Reply

Your email address will not be published. Required fields are marked *