ಬೆಂಗಳೂರು: ಗೋವಿಂದಪುರ ಪೊಲೀಸರು ಕೊಲೆ ಆರೋಪಿಯೊಬ್ಬನ ಮೇಲೆ ಫೈರಿಂಗ್ ಮಾಡಿ, ಬಳಿಕ ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕರೀಂ ಅಲಿ

ಯ ಕೊಲೆ ಪ್ರಕರಣದ ಆರೋಪಿ ಮಹಮದ್ ಸಲೀಂ ಗುಂಡೇಟು ತಿಂದವನು. ಜೂನ್ 22ರಂದು ಅಲಿಯನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು. ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ರು. ಅವರ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆ ಗೋವಿಂದಪುರ ಪೊಲೀಸರು ಬಂಧಿಸಲು ತೆರಳಿದ್ದರು.

ಆರೋಪಿ ಮಹಮದ್ ಸಲೀಂ

ಈ ವೇಳೆ ಆರೋಪಿ ಸಲೀಂ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಎನ್ನಲಾಗಿದೆ. ಇದರಿಂದ ಕಾನ್ಸ್‌ಟೇಬಲ್ ಹಂಝಾ ಬಿಳಗಿ ಎಂಬವರ ಕೈಗೆ ಗಾಯವಾಗಿದೆ. ಈ ಹಿನ್ನೆಲೆ ಸಬ್ ಇನ್ಸ್​​ಪೆಕ್ಟರ್​​ ಇಮ್ರಾನ್ ಆರೋಪಿ ಕಾಲಿಗೆ ಫೈರ್ ಮಾಡಿ, ಬಂಧಿಸಿದ್ದಾರೆ.

ಸಬ್ ಇನ್ಸ್​​ಪೆಕ್ಟರ್​​ ಇಮ್ರಾನ್

ಗಾಯಾಳು  ಆರೋಪಿ ಮತ್ತು ಕಾನ್ಸ್‌ಟೇಬಲ್​ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ.

ಕಾನ್ಸ್‌ಟೇಬಲ್ ಹಂಝಾ ಬಿಳಗಿ

 

The post ಕೊಲೆ‌ ಆರೋಪಿ ಮೇಲೆ ಗೋವಿಂದಪುರ ಪೊಲೀಸರಿಂದ ಫೈರಿಂಗ್ appeared first on News First Kannada.

Source: newsfirstlive.com

Source link