ಕೊಲೆ ಆರೋಪಿ ಯುವತಿ ಮೇಲೆ ಮಾರಣಾಂತಿಕ ಹಲ್ಲೆ

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ರೋಡಲಬಂಡಾ ಗ್ರಾಮದಲ್ಲಿ ಕೊಲೆ ಆರೋಪಿಯಾಗಿರುವ ಯುವತಿಯ ಮೇಲೆ ಅಪ್ರಾಪ್ತ ಬಾಲಕರು ಮಾರಣಾಂತಿಕ ಹಲ್ಲೆ ನಡೆದಿದೆ.

ರೋಡಲಬಂಡಾ ಗ್ರಾಮದ ಖಾಜಾಬಿ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಗಾಯಗೊಂಡ ಯುವತಿಯನ್ನು ಇದೀಗ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿರವಾರ ಪಟ್ಟಣದ ಅಪ್ರಾಪ್ತ ಸಹೋದರರಿಂದ ಯುವತಿ ಮನೆಯಲ್ಲಿ ಮಾರಣಾಂತಿಕ ಹಲ್ಲೆ ನಡೆದಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.

2020 ನವೆಂಬರ್ ತಿಂಗಳಲ್ಲಿ ಸಿರವಾರದ ಮೆಹಬೂಬ್ ಜೊತೆ ಖಾಜಾಬಿ ಮದುವೆ ನಿಶ್ಚಯವಾಗಿತ್ತು. ತನ್ನ ಪ್ರಿಯಕರ ಶಬ್ಬೀರ್‍ನ ಜೊತೆಗೂಡಿ ಮೆಹಬೂಬ್ ನನ್ನು ಕೊಲೆ ಮಾಡಿದ ಆರೋಪದ ಮೇಲೆ ಖಾಜಾಬಿ ಜೈಲು ಪಾಲಾಗಿದ್ದಳು. ಆದರೆ ಖಾಜಾಬಿ ಒಂದು ತಿಂಗಳ ಹಿಂದೆ ಜಾಮೀನಿನ ಮೇಲೆ ಹೊರಬಂದಿದ್ದಳು.

ಹಳೇ ದ್ವೇಷ ಹಿನ್ನೆಲೆ ಮೆಹಬೂಬ್ ಸಂಬಂಧಿಕರಾದ ಇಬ್ಬರು ಅಪ್ರಾಪ್ತರು ಖಾಜಾಬಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ಖಾಜಾಬಿ ಪೋಷಕರು ಆರೋಪಿಸಿದ್ದಾರೆ. ಅಲ್ಲದೇ ತೀವ್ರವಾಗಿ ಗಾಯಗೊಂಡಿರುವ ಯುವತಿಯನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಘಟನೆ ಹಿನ್ನೆಲೆ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ವಾರಾಂತ್ಯದ ಕರ್ಫ್ಯೂ ಸಮಯದಲ್ಲಿ ಬಿಎಂಟಿಸಿ ಸೇವೆಗಳ ಕಾರ್ಯಾಚರಣೆ ಕಡಿತ

The post ಕೊಲೆ ಆರೋಪಿ ಯುವತಿ ಮೇಲೆ ಮಾರಣಾಂತಿಕ ಹಲ್ಲೆ appeared first on Public TV.

Source: publictv.in

Source link