ನವದೆಹಲಿ: ಮದ್ರಾಸ್ ಹೈಕೋರ್ಟ್​ ವಿರುದ್ಧ ಚುನಾವಣಾ ಆಯೋಗ ಸುಪ್ರೀಂಕೋರ್ಟ್​ ಮೆಟ್ಟಿಲೇರಿದೆ

ಕೊರೊನಾ ಸಾಂಕ್ರಾಮಿಕದ ನಡುವೆ ದೇಶದಲ್ಲಿ ಚುನಾವಣೆ ನಡೆಸಿದ್ದಕ್ಕೆ ಮದ್ರಾಸ್​ ಹೈಕೋರ್ಟ್​ ಚುನಾವಣಾ ಆಯೋಗವನ್ನು ತರಾಟೆಗೆ ತಗೆದುಕೊಂಡಿತ್ತು. ದೇಶದಲ್ಲಿನ ಕೊರೊನಾ ಬಿಕ್ಕಟ್ಟಿಗೆ ಚುನಾವಣಾ ಆಯೋಗವೇ ಕಾರಣ. ಚುನಾವಣಾ ಸಮಾವೇಶಗಳು ನಡೆಯುವಾಗ ರಾಜಕೀಯ ಪಕ್ಷಗಳಿಗೆ ಮತ್ತು ನಾಗರಿಕರಿಗೆ ಕೊರೊನಾ ನಿಯಮಗಳನ್ನು ಪಾಲಿಸಲು ಹೇಳದಿರುವ ಹಿನ್ನಲೆಯಲ್ಲಿ ಆಯೋಗದ ವಿರುದ್ಧ ಕೊಲೆ ಪ್ರಕರಣ ದಾಖಲಿಸಬುಹುದಾಗಿದೆ ಅಂತಾ ​ಮದ್ರಾಸ್​ ಹೈ ಕೋರ್ಟ್​ ಹೇಳಿತ್ತು.

ಇದನ್ನೂ ಓದಿ: ‘ಕೊರೊನಾ 2 ನೇ ಅಲೆ; ನಿಮ್ಮ ವಿರುದ್ಧ ಕೊಲೆ ಕೇಸ್ ಯಾಕೆ ದಾಖಲಿಸಬಾರದು’ ಚು.ಆಯೋಗಕ್ಕೆ ತರಾಟೆ

ಬಳಿಕ ಹಲವು ಮಾಧ್ಯಮಗಳಲ್ಲಿ ಈ ಕುರಿತು ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಇದೀಗ ಆಯೋಗವು ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದೆ. ಮಾಧ್ಯಮಗಳು ಕೋರ್ಟ್​ ವ್ಯಕ್ತಪಡಿಸಿದ ಅಭಿಪ್ರಾಯಗಳಿಗೆ ತಮ್ಮ ವರದಿಗಾರಿಕೆಯನ್ನು ಸೀಮಿತವಾಗಿರಿಸಿಕೊಂಡು, ವಿಚಾರಣೆ ಸಮಯದಲ್ಲಿ ಮಡಲಾಗುವ ಮೌಖಿಕ ಹೇಳಿಕೆಯನ್ನು ವರದಿ ಮಾಡದಂತೆ ನಿರ್ದೇಶನ ನೀಡಬೇಕೆಂದು ಸುಪ್ರೀಂ ಕೋರ್ಟ್​ಗೆ ಮನವಿ ಮಾಡಿದೆ.

The post ‘ಕೊಲೆ’ ಕೇಸ್​​ ದಾಖಲಿಸೋ ಚಾಟಿ ಬೀಸಿದ​​ ಹೈಕೋರ್ಟ್​ ವಿರುದ್ಧ ಸುಪ್ರೀಂಕೋರ್ಟ್​​ ಮೆಟ್ಟಿಲೇರಿದ ಚು. ಆಯೋಗ appeared first on News First Kannada.

Source: newsfirstlive.com

Source link