ನವದೆಹಲಿ: 23 ವರ್ಷದ ಮಾಜಿ ರಾಷ್ಟ್ರೀಯ ಜ್ಯೂನಿಯರ್​ ಕುಸ್ತಿ ಚಾಂಪಿಯನ್ ಸಾಗರ್​ ರಾಣಾ ಕೊಲೆ  ಪ್ರಕರಣದ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿದ್ದ ಒಲಿಂಪಿಯನ್ ಸುಶೀಲ್ ಕುಮಾರ್​ರನ್ನ ಕೊನೆಗೂ ಪೊಲೀಸರು ಬಂಧಿಸಿದ್ದಾರೆ.

ದೆಹಲಿ ಪೊಲೀಸರು ಸುಶೀಲ್​​​​ನನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಸುಶೀಲ್ ಕುಮಾರ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನ ದೆಹಲಿ ಕೋರ್ಟ್​ ವಜಾ ಮಾಡಿತ್ತು. ಅದಾದ ಬಳಿಕ ಕುಸ್ತಿಪಟು ತಲೆಮರೆಸಿಕೊಂಡಿದ್ದರು. ಇನ್ನು ಈ ಪ್ರಕರಣದಲ್ಲಿ ಸುಶಿಲ್​​ ಅವರ ಸಹಾಯಕ ಅಜಯ್ ಕುಮಾರ್ ಎಂಬಾತನನ್ನೂ ಪೊಲೀಸರು ಬಂಧಿಸಿ ತನಿಖೆ ಆರಂಭಿಸಿದ್ದಾರೆ.

ಏನಿದು ಪ್ರಕರಣ..?
ದೆಹಲಿಯ ಸ್ಟೇಡಿಯಂ ಒಂದರಲ್ಲಿ ಮೇ 4 ರಂದು ಗಲಾಟೆ ನಡೆದಿತ್ತು. ಈ ಗಲಾಟೆಯಲ್ಲಿ ರಾಷ್ಟ್ರೀಯ ಜ್ಯೂನಿಯರ್​ ಕುಸ್ತಿ ಚಾಂಪಿಯನ್ ಸಾಗರ್​ ರಾಣಾ ಸಾವನ್ನಪ್ಪಿದ್ದರು. ಅಲ್ಲದೇ ಸಾಗರ್ ಸ್ನೇಹಿತರಾದ ಸೋನು ಮತ್ತು ಅಮಿತ್​ ಕುಮಾರ್​ಗೆ ಗಾಯವಾಗಿತ್ತು. ಈ ಗಲಾಟೆಯಲ್ಲಿ ಸುಶೀಲ್ ಕುಮಾರ್ ಹಾಗೂ ಇತರರು ಭಾಗಿಯಾಗಿದ್ದಾರೆ ಅನ್ನೋ ಆರೋಪ ಇದೆ. ಪ್ರಕರಣದ ಬೆನ್ನಲ್ಲೇ ಸುಶೀಲ್ ನಾಪತ್ತೆಯಾಗಿದ್ದ ಹಿನ್ನೆಲೆ , ಅವರ ಬಗ್ಗೆ ಸುಳಿವು ಕೊಟ್ಟವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡೋದಾಗಿ ದೆಹಲಿ ಪೊಲೀಸರು ಘೋಷಿಸಿದ್ದರು.

ಇದನ್ನೂ ಓದಿ: ಕುಸ್ತಿಪಟು ಸುಶೀಲ್​ಗಾಗಿ ಪೊಲೀಸರ ಹುಟುಕಾಟ: ಸುಳಿವು ಕೊಟ್ಟವ್ರಿಗೆ 1 ಲಕ್ಷ ಬಹುಮಾನ

The post ಕೊಲೆ ಕೇಸ್​: ತಲೆಮರೆಸಿಕೊಂಡಿದ್ದ ಕುಸ್ತಿಪಟು ಸುಶೀಲ್ ಕುಮಾರ್ ಅರೆಸ್ಟ್ appeared first on News First Kannada.

Source: newsfirstlive.com

Source link