ನವದೆಹಲಿ: ಕೊಲೆ ಕೇಸ್​​ನಲ್ಲಿ ಆರೋಪಿಯಾಗಿರುವ ಎರಡು ಬಾರಿ ಒಲಂಪಿಕ್ ಮೆಡಲ್ ಗೆದ್ದ ಕುಸ್ತಿಪಟು ಸುಶೀಲ್​ ಕುಮಾರ್​ ಅವರನ್ನ 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ವಕೀಲ ಬಿ ಎಸ್ ಜಖಾರ್ ಮಾಹಿತಿ ನೀಡಿದ್ದಾರೆ.

ದೆಹಲಿಯ ಛತ್ರಸಾಲ್ ಸ್ಟೇಡಿಯಂಲ್ಲಿ ಯುವ ಕುಸ್ತಿಪಟು ಸಾಗರ್ ರಾಣಾ ಕೊಲೆಯಾಗಿರುವ ಕೇಸ್​ನಲ್ಲಿ ಸುಶೀಲ್ ಕುಮಾರ್ ಆರೋಪಿಯಾಗಿದ್ದಾರೆ. ಇಂದು ಬೆಳಗ್ಗೆ ಸುಶೀಲ್ ಕುಮಾರ್ ಹಾಗೂ ಸಹ ಆರೋಪಿ ಅಜಯ್​ನನ್ನ ದೆಹಲಿ ಪೊಲೀಸರು ಬಂಧಿಸಿದ್ದರು. ಕಳೆದ ಕೆಲವು ವಾರಗಳಿಂದ ಆರೋಪಿಗಳು ತಲೆಮರೆಸಿಕೊಂಡು ಓಡಾಡುತ್ತಿದ್ದರು ಎನ್ನಲಾಗಿತ್ತು.

ಇದನ್ನೂ ಓದಿ: ಕೊಲೆ ಕೇಸ್​: ತಲೆಮರೆಸಿಕೊಂಡಿದ್ದ ಕುಸ್ತಿಪಟು ಸುಶೀಲ್ ಕುಮಾರ್ ಅರೆಸ್ಟ್

The post ಕೊಲೆ ಕೇಸ್: 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕುಸ್ತಿಪಟು ಸುಶೀಲ್ ಕುಮಾರ್ appeared first on News First Kannada.

Source: newsfirstlive.com

Source link