ಕಲಬುರಗಿ: ಕೊಲೆ ಪ್ರಕರಣದ ಎಫ್‍ಐಆರ್ ನಲ್ಲಿ  ಜೇವರ್ಗಿ ಕ್ಷೇತ್ರದ ಮಾಜಿ ಶಾಸಕ ದೊಡಪ್ಪಗೌಡ ಪಾಟೀಲ್ ನರಿಬೋಳ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಸವರಾಜ್ ಪಾಟೀಲ್ ಹೆಸರನ್ನು ಕೈಬಿಡಬೇಕೆಂದು ಮಠಾಧೀಶರು ಆಗ್ರಹಿಸಿದ್ದಾರೆ.

ಜೇವರ್ಗಿ ತಾಲೂಕಿನ ಕಲ್ಲೂರ(ಬಿ) ಬಳಿ ಜರುಗಿದ ಹಣಮಂತ ಕೂಡಲಗಿ ಕೊಲೆ ಪ್ರಕರಣದ ಎಫ್ ಐಆರ್ ನಲ್ಲಿ ಜೇವರ್ಗಿ ಕ್ಷೇತ್ರದ ಮಾಜಿ ಶಾಸಕ ದೊಡಪ್ಪಗೌಡ ಪಾಟೀಲ್ ನರಿಬೋಳ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಸವರಾಜ್ ಪಾಟೀಲ್ ಹೆಸರು ಅನಾವಶ್ಯಕವಾಗಿ ಸೇರಿಸಲಾಗಿದೆ. ಅವರ ಹೆಸರುಗಳನ್ನು ಕೈಬಿಡಬೇಕು ಎಂದು ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನ ಮಠಾಧೀಶರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ನೆಲೋಗಿ ಮಠದ ಸಿದ್ದಲಿಂಗ ಮಹಾಸ್ವಾಮೀಜಿ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸ್ವಾಮೀಜಿಗಳು, ಹಣಮಂತ ಹತ್ಯೆ ನಮಗೂ ನೋವು ತರಿಸಿದೆ. ಇದೊಂದು ಅಘಾತಕಾರಿ ವಿಷಯವಾಗಿದೆ. ಅವರ ಕುಟುಂಬದ ನೋವಿನಲ್ಲಿ ಮಠಾಧೀಶರು ಭಾಗಿಯಾಗಿದ್ದೇವೆ. ಹಣಮಂತನನ್ನು ಯಾರು ಕೊಲೆ ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗಬೇಕು. ಪೊಲೀಸರು ನಿಷ್ಪಕ್ಷವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಬೇಕು. ಆದ್ರೆ ಪ್ರಕರಣದಲ್ಲಿ ಮಾಜಿ ಶಾಸಕರ ಹೆಸರು ಉದ್ದೇಶ ಪೂರ್ವಕವಾಗಿ ಸೇರಿಸಲಾಗಿದೆ. ಹೀಗಾಗಿ ಕೂಡಲೇ ಅವರ ಹೆಸರು ಕೈ ಬಿಡಲು ಮಠಾಧೀಶರು ಆಗ್ರಹಿಸಿದರು.

The post ಕೊಲೆ ಪ್ರಕರಣದಿಂದ ಮಾಜಿ ಶಾಸಕರ ಹೆಸರನ್ನು ಕೈಬಿಡಿ – ಮಠಾಧೀಶರ ಆಗ್ರಹ appeared first on Public TV.

Source: publictv.in

Source link