ಕೊರೊನಾ ಕಾರಣದಿಂದ ಸ್ಥಗಿತಗೊಂಡಿದ್ದ ಐಪಿಎಲ್ ಟೂರ್ನಿ ಸೆಪ್ಟೆಂಬರ್ 3ನೇ ವಾರದಿಂದ ಯುಎಇಯಲ್ಲಿ ಮುಂದುವರಿಯಲಿದ್ದು, ಈ ವೇಳೆ ಬಹುತೇಕ ವಿದೇಶಿ ಆಟಗಾರರ ಅಲಭ್ಯತೆ ಟೂರ್ನಿಗೆ ಕಾಡಲಿದೆ.

ಪ್ರಮುಖವಾಗಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡದ ಆಟಗಾರರ ಗೈರು ಹಿನ್ನೆಲೆಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್​ಗೆ ಭಾರೀ ಹಿನ್ನಡೆಯನ್ನೇ ತಂದೊಡ್ಡಿದೆ. ಅದ್ರಲ್ಲೂ ನಾಯಕ ಇಯಾನ್ ಮಾರ್ಗನ್ ಅಲಭ್ಯತೆಯಾದರೆ, ನಾಯಕತ್ವದ ಜವಾಬ್ದಾರಿಯನ್ನ ಇಬ್ಬರು ಯುವ ಆಟಗಾರರಿಗೆ ಹೆಗಲಿಗೆ ಹೊರಿಸಲು ಮ್ಯಾನೇಜ್​ಮೆಂಟ್ ಚಿಂತಿಸುತ್ತಿದೆ.

ಈ ಕುರಿತು ಮಾತನಾಡಿರುವ ಕೊಲ್ಕತ್ತಾ ನೈಟ್ ರೈಡರ್ಸ್ ಕೋಚ್ ಬ್ರೆಂಡನ್ ಮೆಕಲಂ, ಐಪಿಎಲ್ ಮುಂದುವರಿಯುವ ವೇಳೆ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡದ ಪ್ರಮುಖ ಆಟಗಾರರು ಅಲಭ್ಯರಾಗಲಿದ್ದಾರೆ ಎಂಬ ಸುದ್ದಿ ಇದೆ.

ನಾಯಕ ಇಯಾನ್ ಮಾರ್ಗನ್ ಹಾಗೂ ಪ್ಯಾಟ್ ಕಮ್ಮಿನ್ಸ್ ತಂಡವನ್ನು ಸೇರಿಕೊಳ್ಳದಿದ್ದರೆ, ಯುವ ಆಟಗಾರರಾದ ಶುಭ್​​​ಮನ್ ಗಿಲ್ ಅಥವಾ ನಿತೀಶ್ ರಾಣಾ ಹೆಚ್ಚಿನ ಜವಾಬ್ದಾರಿ ಹೊರಬೇಕು ಎಂದಿದ್ದಾರೆ. ಆ ಮೂಲಕ ಇಯಾನ್ ಮಾರ್ಗನ್ ಅಲಭ್ಯರಾದರೆ, ಶುಭ್​​​​ಮನ್ ಗಿಲ್ ಅಥವಾ ನಿತೀಶ್ ರಾಣಾಗೆ ನಾಯಕತ್ವ ವಹಿಸಿಸುವ ಸುಳಿವನ್ನ ಕೋಚ್ ಮೆಕಲಂ ಪರೋಕ್ಷವಾಗಿ ನೀಡಿದ್ದಾರೆ.

The post ಕೊಲ್ಕತ್ತಾ ನೈಟ್​ರೈಡರ್ಸ್​ ತಂಡಕ್ಕೆ ಶುಭ್ಮನ್ ಗಿಲ್ ನಾಯಕ..? appeared first on News First Kannada.

Source: newsfirstlive.com

Source link