ಕೊಲ್ಕತ್ತಾ: 18ರ ಹರೆಯದ ಮಾಡೆಲ್ ಮೃತದೇಹ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ | 18 year old Saraswati Das Another model found dead at her residence in Kolkata


ಕೊಲ್ಕತ್ತಾ: 18ರ ಹರೆಯದ ಮಾಡೆಲ್ ಮೃತದೇಹ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಸಾಂಕೇತಿಕ ಚಿತ್ರ

ಆಕೆಯ ಅಮ್ಮ ಮತ್ತು ಚಿಕ್ಕಮ್ಮ ಕೆಲಸಕ್ಕಾಗಿ ಹೊರ ಹೋದ ನಂತರ ಈಕೆ ಶನಿವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತೋರುತ್ತದೆ. ಆಕೆಯ ಮೊಬೈಲ್ ನ್ನು ನಾವು ವಶಪಡಿಸಿಕೊಂಡಿದ್ದು, ತನಿಖೆಯ ಭಾಗವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಆಕೆಯ ಚಟುವಟಿಕೆಗಳನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. 

ಕೊಲ್ಕತ್ತಾ: ಕೊಲ್ಕತ್ತಾದಲ್ಲಿ (Kolkata) ಮಾಡೆಲ್ ಒಬ್ಬರು ಶವವಾಗಿ ಪತ್ತೆಯಾಗಿದ್ದು ಮನರಂಜನೆ ಉದ್ಯಮದಲ್ಲಿನ ವ್ಯಕ್ತಿಗಳು ಈ ರೀತಿ ಸಂಶಯಾಸ್ಪದ ರೀತಿಯಲ್ಲಿ  ಸಾವಿಗೀಡಾಗಿರುವ  ಘಟನೆಯಲ್ಲಿ ಇದು ನಾಲ್ಕನೆಯದ್ದಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮೇಕಪ್ ಕಲಾವಿದೆ ಮತ್ತು ಮಾಡೆಲ್ ಆಗಿರುವ 18ರ ಹರೆಯದ ಸರಸ್ವತಿ ದಾಸ್ (Saraswati Das) ಅವರ ಮೃತದೇಹವು ಭಾನುವಾರ ಕಸಬಾ ಪ್ರದೇಶದಲ್ಲಿರುವ ಬೇಡಿಯದಂಗಾದಲ್ಲಿರುವ ಅವರ ಮನೆಯಲ್ಲಿ ನೇಣುಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಣ್ಣ ಪುಟ್ಟ ಸಂಸ್ಥೆಗಳಲ್ಲಿ ಮಾಡೆಲ್ ಆಗಿದ್ದ ಸರಸ್ವತಿಗೆ ಹಲವಾರು ಆಫರ್​​ಗಳು ಸಿಕ್ಕಿದ್ದವು. ಈಕೆ ಶನಿವಾರ ರಾತ್ರಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾಳೆ ಎಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಇದು ಮೇಲ್ನೋಟಕ್ಕೆ ಆತ್ಮಹತ್ಯೆ ಪ್ರಕರಣದಂತೆ ಕಾಣುತ್ತದೆ. ಆದರೆ ನಾವು ಬೇರೆ ಆಯಾಮಗಳನ್ನೂ ಪರಿಶೀಲಿಸಬೇಕಿದೆ. ಸರಸ್ವತಿಯ ಅಜ್ಜಿ ಮೊಮ್ಮಗಳ ಶವವನ್ನು ನೋಡಿದ್ದು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅವರೇ ನಮಗೆ ಮಾಹಿತಿ ತಿಳಿಸಿದ್ದು. ನಾವು ಪೋಸ್ಟ್ ಮಾರ್ಟಂ ವರದಿಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸರು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗುತ್ತಿರುವ ಮಂಜುಷಾ ನೋಗಿ, ಬಿದಿಶಾ ಡಿ ಮುಜುಂದರ್ ಮತ್ತು ಟಿವಿ ಕಲಾವಿದೆ ಪಲ್ಲವಿ ಡೇ ಅವರೊಂದಿಗೆ ಸರಸ್ವತಿಗೆ ಸಂಬಂಧ ಇದೆಯೇ ಎಂಬುದನ್ನು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಆಕೆಯ ಅಮ್ಮ ಮತ್ತು ಚಿಕ್ಕಮ್ಮ ಕೆಲಸಕ್ಕಾಗಿ ಹೊರ ಹೋದ ನಂತರ ಈಕೆ ಶನಿವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತೋರುತ್ತದೆ. ಆಕೆಯ ಮೊಬೈಲ್ ನ್ನು ನಾವು ವಶಪಡಿಸಿಕೊಂಡಿದ್ದು, ತನಿಖೆಯ ಭಾಗವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಆಕೆಯ ಚಟುವಟಿಕೆಗಳನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಸರಸ್ವತಿ ಚಿಕ್ಕವಳಿದ್ದಾಗ ಆಕೆಯ ಅಪ್ಪ ಕುಟುಂಬವನ್ನು ತೊರೆದಿದ್ದು, ಅವಳನ್ನು ತಾಯಿ ಮತ್ತು ಚಿಕ್ಕಮ್ಮ ಬೆಳೆಸಿದ್ದರು. ಅವರಿಬ್ಬರೂ ಸಹಾಯಕಿಯರಾಗಿ ಕೆಲಸ ಮಾಡುತ್ತಿದ್ದರು.

ಮಂಜುಷಾ (26) ಎಂಬ ರೂಪದರ್ಶಿ ಕಳೆದ ವಾರ ಶುಕ್ರವಾರ ತನ್ನ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ತನ್ನ ಸ್ನೇಹಿತೆ ಹಾಗೂ ಸಹೋದ್ಯೋಗಿ ಬಿದಿಶಾ ಡಿ ಮಜುಂದಾರ್ ಬುಧವಾರ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಆಕೆ ಮನನೊಂದಿದ್ದಳು ಎಂದು ಮಂಜುಷಾಳ ತಾಯಿ ಹೇಳಿದ್ದಾರೆ. ಮೇ 15 ರಂದು ಗರ್ಫಾದಲ್ಲಿ ಬಾಡಿಗೆಗೆ ಪಡೆದಿದ್ದ ಅಪಾರ್ಟ್‌ಮೆಂಟ್‌ನ ಕೋಣೆಯಲ್ಲಿ ಪಲ್ಲಬಿ ಡೇ ಶವವಾಗಿ ಪತ್ತೆಯಾಗಿದ್ದಳು.

TV9 Kannada


Leave a Reply

Your email address will not be published. Required fields are marked *