ಕೊಳ್ಳೇಗಾಲ‌ ಪಟ್ಟಣದ ರಸ್ತೆಗೆ ಪುನೀತ್​ ಹೆಸರು; ಜಿಲ್ಲಾಧಿಕಾರಿಗೆ ಪತ್ರ ಬರೆದ ಶಾಸಕ ಮಹೇಶ್


ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ‌ ಪಟ್ಟಣದ ರಸ್ತೆಗೆ ನಟ ಪುನೀತ್ ರಾಜ್​ಕುಮಾರ್ ಹೆಸರು ಹಾಗೂ ಕಾಲೇಜು ವೃತ್ತದಲ್ಲಿ ಅಪ್ಪು ಪ್ರತಿಮೆ ನಿರ್ಮಾಣಕ್ಕೆ ಕೋರಿ ಜಿಲ್ಲಾಧಿಕಾರಿಗೆ ಶಾಸಕ ಎನ್.ಮಹೇಶ್ ಪತ್ರ ಬರೆದಿದ್ದಾರೆ.​

ಈ ಕುರಿತು ಮಾಧ್ಯಗಳೊಂದಿಗೆ ಮಾತನಾಡಿದ ಶಾಸಕ ಮಹೇಶ್​, ನಟ ಪುನೀತ್ ಚಾಮರಾಜನಗರದ ರಾಯಭಾರಿ ಆಗಿದ್ದವರು. ವಿವಿಧ ಸಂಘಟನೆಗಳು ಕೊಳ್ಳೇಗಾಲದ ಯಾವುದಾದರು ಒಂದು ವೃತ್ತಕ್ಕೆ ಹಾಗೂ  ರಸ್ತೆಗೆ ಪುನೀತ್ ಹೆಸರಿಡುವಂತೆ ಮನವಿ ಮಾಡಿದ್ದಾರೆ.

ನಾನು ಇವತ್ತೆ ಒಂದು ತೀರ್ಮಾನ ಮಾಡಿದ್ದೇನೆ, ಪಟ್ಟಣದ‌ ತಾ.ಪಂ ಕಚೇರಿಯಿಂದ ಎಂ.ಜಿ.ಎಸ್.ವಿ ಕಾಲೇಜು ವರೆಗಿನ ರಸ್ತೆಗೆ ಪುನೀತ್ ಹೆಸರಿಡುವಂತೆ ಮತ್ತು ಕಾಲೇಜು ವೃತ್ತದಲ್ಲಿ ಅಪ್ಪು ಪ್ರತಿಮೆ ನಿರ್ಮಾಣಕ್ಕಾಗಿ ಜಿಲ್ಲಾಧಿಕಾರಿಗೆ ಪತ್ರ ಬರೆಯುತ್ತೇನೆ ಎಂದಿದ್ದರು.

ಇದನ್ನೂ ಓದಿ:JDS​ನಲ್ಲಿ ಅಮ್ಮ, ಮಗ ಫುಲ್ ಆ್ಯಕ್ಟೀವ್; GTD ಸೇರಿ ಹಲವು ಅತೃಪ್ತರ ಮನವೊಲಿಕೆ ಸಕ್ಸಸ್..?

ಇದಕ್ಕೆ ಸಂಬಂಧಿಸಿ ಜಿಲ್ಲಾಡಳಿತ, ನಗರ ಸಭೆ ತೀರ್ಮಾನ ಮಾಡಿ ಸರ್ಕಾರಕ್ಕೆ ಕಳುಹಿಸಲಿ. ನಾನು ಅದನ್ನ ರಾಜ್ಯ ಸರ್ಕಾರದಿಂದ ಅನುಮತಿ ಪಡೆಯುತ್ತೇನೆ. ಈ ಕೆಲಸದಿಂದ ಪುನೀತ್ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದರು. ಇನ್ನು ಕೋವಿಡ್ ಬಳಿಕ ಅಪ್ಪು ಅವರನ್ನ ಪ್ರವಾಸೋದ್ಯಮಕ್ಕೆ ಬಳಸಿಕೊಳ್ಳಲು ಮುಂದಾಗಿದ್ವಿ. ಅಷ್ಟರಲ್ಲಿ ಅಪ್ಪು ನಮ್ಮಿಂದ ದೂರ ಹೋಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಮುಂದಿನ ದಿನಗಳಲ್ಲಿ ಅವರ ಹೆಸರನ್ನೆ ತೆಗೆದುಕೊಂಡು, ಕುಟುಂಬಸ್ಥರನ್ನೆ ಬಳಸಿಕೊಂಡು ಚಾಮರಾಜನಗರ ಅಭಿವೃದ್ದಿಗೆ ಯೋಜನೆ ರೂಪಿಸುತ್ತೇವೆ ಎಂದು ಮಹೇಶ್​ ತಿಳಿಸಿದ್ದಾರೆ.

News First Live Kannada


Leave a Reply

Your email address will not be published. Required fields are marked *