ಕೊವಿಡ್​​ನಿಂದ ಸಾವಿಗೀಡಾದವರ ಕುಟುಂಬಗಳಿಗೆ ₹ 50,000 ಪರಿಹಾರ ಧನ ಘೋಷಿಸಿದ ಮಹಾರಾಷ್ಟ್ರ ಸರ್ಕಾರ | Maharashtra government announces Rs50,000 as ex gratia to the families of people who died due to Covid 19


ಕೊವಿಡ್​​ನಿಂದ ಸಾವಿಗೀಡಾದವರ ಕುಟುಂಬಗಳಿಗೆ ₹ 50,000 ಪರಿಹಾರ ಧನ ಘೋಷಿಸಿದ ಮಹಾರಾಷ್ಟ್ರ ಸರ್ಕಾರ

ಉದ್ಧವ್ ಠಾಕ್ರೆ

ಮುಂಬೈ: ಕೊರೊನಾವೈರಸ್ (Coronavirus) ಕಾಯಿಲೆಯಿಂದ ಸಾವಿಗೀಡಾದ ಜನರ ಕುಟುಂಬಗಳಿಗೆ ₹ 50,000 ಪರಿಹಾರ ಧನ ನೀಡುವುದಾಗಿ ಮಹಾರಾಷ್ಟ್ರ (Maharashtra) ಸರ್ಕಾರ ಶುಕ್ರವಾರ ಹೇಳಿದೆ. ಕೊವಿಡ್ -19 ನಿಂದ ಸಾವನ್ನಪ್ಪಿದವರ ಸಂಬಂಧಿಕರಿಗೆ ಪರಿಹಾರ ನೀಡುವುದಾಗಿ ಸರ್ಕಾರದ ನಿರ್ಣಯವನ್ನು ರಾಜ್ಯ ಕಂದಾಯ ಇಲಾಖೆಯು ಬಿಡುಗಡೆ ಮಾಡಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (NDMA) ನಿಯಮಗಳ ಪ್ರಕಾರ ಕೊವಿಡ್ -19 ಸಂತ್ರಸ್ತರ ಕುಟುಂಬಗಳಿಗೆ ₹ 1 ಲಕ್ಷ ನೀಡುವಂತೆ ಒತ್ತಾಯಿಸಿ ಮಹಾರಾಷ್ಟ್ರ ಕಾಂಗ್ರೆಸ್ ಶಾಸಕಾಂಗ ಪಕ್ಷವು ಮುಖ್ಯಮಂತ್ರಿ ಉದ್ಧವ್ ಠಾಕ್ರೆ(Uddhav Thackeray)ಅವರಿಗೆ ಪತ್ರ ಬರೆದ ಕೆಲವು ದಿನಗಳ ನಂತರ ಈ ನಿರ್ಧಾರ ಬಂದಿದೆ. ಈ ನಿರ್ಧಾರವು ಪ್ರತಿ ಕೊವಿಡ್ ಸಾವಿಗೆ ₹ 3 ಲಕ್ಷ ಪಾಲನ್ನು ಘೋಷಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತದೆ ಎಂದು ಕಾಂಗ್ರೆಸ್ ಶಾಸಕರು ಪತ್ರದಲ್ಲಿ ತಿಳಿಸಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ನಿಯಮಗಳ ಪ್ರಕಾರ ₹ 4 ಲಕ್ಷದಲ್ಲಿ ಶೇ 75 ಕೇಂದ್ರ ಸರ್ಕಾರ ಮತ್ತು ಉಳಿದ ಶೇ 25 ರಾಜ್ಯ ಸರ್ಕಾರ ಪಾವತಿಸಬೇಕಾಗುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. “ರಾಜ್ಯ ಸರ್ಕಾರದ ಪಾಲನ್ನು ₹ 4 ಲಕ್ಷವನ್ನು ಪರಿಹಾರ ಧನ ನೀಡಲು ನೀವು ಬದ್ಧರಾಗಬೇಕೆಂದು ನಾವು ವಿನಂತಿಸುತ್ತೇವೆ, ಇದರಿಂದಾಗಿ ಸಂತ್ರಸ್ತ ನಾಗರಿಕರಿಗೆ ತನ್ನ ಬದ್ಧತೆಯನ್ನು ಪೂರೈಸಲು ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರುತ್ತದೆ” ಎಂದು ಪತ್ರದಲ್ಲಿ ಬರೆಯಲಾಗಿದೆ.

ಕೇಂದ್ರ ಸರ್ಕಾರವು ಒಂದು ಕಡೆ ಏರುತ್ತಿರುವ ಇಂಧನ ಬೆಲೆಗಳ ಮೂಲಕ ತೆರಿಗೆಗಳನ್ನು ಸಂಗ್ರಹಿಸುವುದನ್ನು ಮುಂದುವರೆಸಿದೆ ಮತ್ತು ಮತ್ತೊಂದೆಡೆ ದೊಡ್ಡ ಕಾರ್ಪೊರೇಟ್‌ಗಳಿಗೆ ಪರಿಹಾರಗಳನ್ನು ನೀಡುತ್ತಿದೆ. ನಾಗರಿಕರಿಗೆ ಹೆಚ್ಚು ಅಗತ್ಯವಿರುವ ಪರಿಹಾರವನ್ನು ನಿರಾಕರಿಸುತ್ತಿರುವುದು ಯಾಕೆ ಎಂದು ನಮಗೆ ಅರ್ಥವಾಗುತ್ತಿಲ್ಲ ಎಂದು ಪತ್ರದಲ್ಲಿ ಹೇಳಿದೆ.

ಛತ್ತೀಸ್‌ಗಢ ಮತ್ತು ರಾಜಸ್ಥಾನ ಮುಖ್ಯಮಂತ್ರಿಗಳು ಸಹ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಪ್ರತಿ ಕೊವಿಡ್ ಸಾವಿಗೆ ಪರಿಹಾರವನ್ನು ₹ 50,000 ರಿಂದ ₹ 4 ಲಕ್ಷಕ್ಕೆ ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ. ಸಾಂಕ್ರಾಮಿಕ ರೋಗವು ಬಹುಪಾಲು ಜನಸಂಖ್ಯೆಯ ಮೇಲೆ ಕೆಟ್ಟದಾಗಿ ಪರಿಣಾಮ ಬೀರಿತು ಮತ್ತು ಅನೇಕ ಕುಟುಂಬಗಳು ತಮ್ಮ ಗಳಿಸುವ ಸದಸ್ಯರನ್ನು ಕಳೆದುಕೊಂಡಿವೆ ಮತ್ತು ಆಸ್ಪತ್ರೆಯ ಬಿಲ್‌ಗಳು ಜನರ ಉಳಿತಾಯವನ್ನು ಖಾಲಿ ಮಾಡಿದೆ ಎಂದು ಗೆಹ್ಲೋಟ್ ಹೇಳಿದ್ದರು. “ಒಂದು ಕಲ್ಯಾಣ ರಾಜ್ಯವಾಗಿ ನಮ್ಮ ನಾಗರಿಕರನ್ನು ಅಗತ್ಯವಿರುವ ಸಮಯದಲ್ಲಿ ನೋಡಿಕೊಳ್ಳುವುದು ನಮ್ಮ ಹಂಚಿಕೆಯ ಜವಾಬ್ದಾರಿಯಾಗಿದೆ. ಈ ಕಷ್ಟದ ಸಮಯದಲ್ಲಿ ಜನರಿಗೆ ಸಹಾಯ ಮಾಡಲು ನಮ್ಮ ರಾಜ್ಯವು ಅನೇಕ ಕಲ್ಯಾಣ ಯೋಜನೆಗಳನ್ನು ಪ್ರಾರಂಭಿಸಿದೆ. ಕೇಂದ್ರ ಸರ್ಕಾರವೂ ಈ ಜವಾಬ್ದಾರಿಯನ್ನು ಹಂಚಿಕೊಳ್ಳುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ, ”ಎಂದು ಗೆಹ್ಲೋಟ್ ಮೋದಿಗೆ ಪತ್ರ ಬರೆದಿದ್ದರು.

ಇದನ್ನೂ ಓದಿ:ಭಾರತದಲ್ಲಿ ಇಲ್ಲಿಯವರೆಗೆ ಯಾವುದೇ ಹೊಸ ಕೊವಿಡ್ ರೂಪಾಂತರದ ಪ್ರಕರಣ ಪತ್ತೆಯಾಗಿಲ್ಲ: ವರದಿ

TV9 Kannada


Leave a Reply

Your email address will not be published. Required fields are marked *