ಬಳ್ಳಾರಿ: ರಾಜ್ಯದಲ್ಲಿ ಕೊರೊನಾ ಕರಿನೆರಳಿನಿಂದ ಎರಡು ವರ್ಷಗಳಾದರೂ ಶಾಲೆಗಳು ಸಂಪೂರ್ಣವಾಗಿ ಓಪನ್ ​ಆಗಿದ್ದೆ ಇಲ್ಲ. ಇನ್ನೇನು ಕೊರೊನಾ ಕಡಿಮೆಯಾಯ್ತು ಶಾಲೆಗಳು ಆರಂಭ ಆಗ್ತವೆ ಎನ್ನುವುದರೊಳಗಾಗಿ ಇಲ್ಲೊಂದು ಶಾಲೆ ದಿಢೀರನೆ ಬಾಗಿಲು ಮುಚ್ಚಿದೆ.

ಶಾಲೆ ಮುಚ್ಚಿದ್ದರಿಂದ ವಿದ್ಯಾರ್ಥಿಗಳು, ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ಬಾಡಿಗೆ ಕಟ್ಟಲು ಆಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಶಾಲೆಯೊಂದು ಸಂಪೂರ್ಣವಾಗಿ ಬಾಗಿಲು ಮುಚ್ಚಿದ್ದು 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಂತ್ರವಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ನಗರದ ಸಂಗನಕಲ್ಲು ರಸ್ತೆಯಲ್ಲಿರೋ ನಳಂದ ವಿದ್ಯಾ ನಿಕೇತನ ಪ್ರೈವೇಟ್​ ಸ್ಕೂಲ್​ನ್ನು ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿತ್ತು. ಎರಡು ವರ್ಷಗಳಿಂದ ಕೋವಿಡ್​ ಕಾರಣಕ್ಕಾಗಿ ಶಾಲೆ ತೆರೆಯಲೇ ಇಲ್ಲ. ಮಕ್ಕಳ ದಾಖಲಾತಿಯು ಇಲ್ಲದೇ ಶಿಕ್ಷಕರು ಮತ್ತು ಕಟ್ಟಡದ ಬಾಡಿಗೆ ನೀಡಲು ಹಣವಿಲ್ಲದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಶಾಲಾ ಮಂಡಳಿ ಶಾಲೆಗೆ ಬೀಗ ಜಡಿದು ವರ್ಗಾವಣೆ ಪತ್ರ ಒಯ್ಯುವಂತೆ ಪಾಲಕರಿಗೆ ಮೆಸೇಜ್​ ಮಾಡಿದೆ.

ಎಲ್‍ಕೆಜಿ ಯಿಂದ 10 ನೇ ತರಗತಿವರೆಗೆ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡ್ತಿದ್ದು ಇದರಲ್ಲಿ RTE ವಿಧ್ಯಾರ್ಥಿಗಳು ಸೇರಿದ್ದಾರೆ. ಶಾಲಾ ಮಂಡಳಿಯ ದಿಢೀರ್​ ನಿಧಾರ್ರ ದಿಂದ ಶಾಕ್​ ಆದ ಪೋಷಕರು ಮಕ್ಕಳ ಭವಿಷ್ಯ ಮುಂದೆ ಏನು ಅಂತ ಚಿಂತಿಸುತ್ತಿದ್ದಾರೆ.

ಇನ್ನು RTE ಅಯಲ್ಲಿ ಪ್ರವೇಶ ಪಡೆದಿರುವ ಮಕ್ಕಳಿಗೆ ಬೇರೆ ಸಂಸ್ಥೆಗಳಲ್ಲಿ ವರ್ಗಾವಣೆ ಮಾಡಲು ಬರುವುದಿಲ್ಲ ಎಂಬ ಶಿಕ್ಷಣ ಅಧಿಕಾರಿಗಳ ಹೇಳಿಕೆಗೆ ಕಂಗಾಲಾದ ಪೋಷಕರು ಬೇರೆ ಬೇರೆ ಶಾಲೆಗಳಲ್ಲಿ ಲಕ್ಷ ಲಕ್ಷ ಡೊನೆಷನ್ ಕೇಳ್ತಾರೆ ಎನು ಮಾಡೋದು ಅಂತ ನ್ಯೂಸ್​ಫಸ್ಟ್​ನ ಮುಂದೆ ಪೋಷಕರು ತಮ್ಮ ಅಳಲು ತೊಡಿಕೊಂಡಿದ್ದಾರೆ.

The post ಕೊವಿಡ್​ ಹೊಡೆತಕ್ಕೆ ಬಾಗಿಲು ಮುಚ್ಚಿದ ಶಾಲೆ: 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಂತ್ರ appeared first on News First Kannada.

Source: newsfirstlive.com

Source link