ಕೊವಿಡ್​ 19 ನಿಂದ ಮೃತಪಟ್ಟವರ ಕುಟುಂಬಕ್ಕೆ 5000 ರೂ.ಮಾಸಾಶನ ನೀಡಲಿದೆ ಕೇರಳ ಸರ್ಕಾರ; ಆದರೆ ಷರತ್ತು ಅನ್ವಯ | Kerala Government to give 5,000 to BPL families of Covid 19 deceased Tweet By Minister

ಕೊವಿಡ್​ 19 ನಿಂದ ಮೃತಪಟ್ಟವರ ಕುಟುಂಬಕ್ಕೆ 5000 ರೂ.ಮಾಸಾಶನ ನೀಡಲಿದೆ ಕೇರಳ ಸರ್ಕಾರ; ಆದರೆ ಷರತ್ತು ಅನ್ವಯ

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​

ತಿರುವನಂತಪುರಂ: ಕೊವಿಡ್​ 19 ಸೋಂಕಿನಿಂದ ಮೃತಪಟ್ಟವರ ಕುಟುಂಬಕ್ಕೆ ಪ್ರತಿ ತಿಂಗಳೂ ಹೆಚ್ಚುವರಿಯಾಗಿ 5 ಸಾವಿರ ರೂ. ನೀಡಲು ಕೇರಳ ಸರ್ಕಾರ ನೀಡಿದೆ. ಈ ನೆರವನ್ನು ಮೂರು ವರ್ಷಗಳ ಕಾಲ ನೀಡಲು ಕೇರಳ ರಾಜ್ಯ ಸರ್ಕಾನ ನಿರ್ಧರಿಸಿದ್ದು, ಇದು ಬಡತನ ರೇಖೆಗಿಂತ ಕೆಳಗೆ ((BPL) ಇರುವ ಕುಟುಂಬಗಳಿಗೆ ಮಾತ್ರ ಅನ್ವಯ ಆಗಲಿದೆ. ಬುಧವಾರ ಟ್ವೀಟ್​ ಮಾಡಿರುವ ಕೇರಳ ಸಚಿವ ಥಾಮಸ್​ ಐಸಾಕ್​​, ಕೇರಳದಲ್ಲಿ ಬಡತನ ರೇಖೆಗಳಿಗಿಂತ ಕೆಳಗೆ ಇರುವ ಕುಟುಂಬದಲ್ಲಿ ಯಾರಾದರೂ ಸತ್ತರೆ ಅವರ ಸಂಬಂಧಿಗಳಿಗೆ 50 ಸಾವಿರ ರೂ.ವಿಶೇಷ ನೆರವು ನೀಡಲಾಗುತ್ತಿದೆ. ಈಗ ಅದರೊಂದಿಗೆ ತಿಂಗಳಿಗೆ 5 ಸಾವಿರ ರೂ.ಮಾಸಾಶನ ಹೆಚ್ಚುವರಿಯಾಗಿ ಕೊಡಲು ನಿರ್ಧರಿಸಲಾಗಿದೆ. ಇದು ಮುಂದಿನ ಮೂರು ವರ್ಷಗಳ ಕಾಲ ನೀಡಲ್ಪಡುತ್ತದೆ ಎಂದು ತಿಳಿಸಿದ್ದಾರೆ.  

TV9 Kannada

Leave a comment

Your email address will not be published. Required fields are marked *