ಕೊವಿಡ್ ಮಾರ್ಗಸೂಚಿ ಉಲ್ಲಂಘಿಸಿ ಪ್ರತಿಭಟನೆ ಆರೋಪ: ಡಿ.ಕೆ. ಶಿವಕುಮಾರ್​, ಈಶ್ವರ್ ಖಂಡ್ರೆ ಸೇರಿ 6 ಮಂದಿಗೆ ಸಮನ್ಸ್ ಜಾರಿ | Summons to DK Shivakumar Eshwar Khandre and 6 others KPCC Congress for breaking Coronavirus Rule


ಕೊವಿಡ್ ಮಾರ್ಗಸೂಚಿ ಉಲ್ಲಂಘಿಸಿ ಪ್ರತಿಭಟನೆ ಆರೋಪ: ಡಿ.ಕೆ. ಶಿವಕುಮಾರ್​, ಈಶ್ವರ್ ಖಂಡ್ರೆ ಸೇರಿ 6 ಮಂದಿಗೆ ಸಮನ್ಸ್ ಜಾರಿ

ಡಿ.ಕೆ.ಶಿವಕುಮಾರ್

ಬೆಂಗಳೂರು: ಕೊವಿಡ್ ಮಾರ್ಗಸೂಚಿ ಉಲ್ಲಂಘಿಸಿ ಪ್ರತಿಭಟನೆ ಆರೋಪದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ಗೆ ಸಮನ್ಸ್ ಜಾರಿಗೊಳಿಸಲಾಗಿದೆ. ಕಾಂಗ್ರೆಸ್​ ನಾಯಕರಾದ ಡಿ.ಕೆ. ಶಿವಕುಮಾರ್, ಈಶ್ವರ ಖಂಡ್ರೆ ಸೇರಿ 6 ಜನರಿಗೆ ಸಮನ್ಸ್ ಜಾರಿ ಮಾಡಲಾಗಿದೆ. ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್​ನಿಂದ ಸಮನ್ಸ್ ಜಾರಿಗೊಳಿಸಲಾಗಿದೆ. ಡಿಸೆಂಬರ್​ 22ರಂದು ಖುದ್ದು ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ. ಡಿಸಾಸ್ಟರ್ ಮ್ಯಾನೇಜ್ಮೆಂಟ್ ಕಾಯ್ದೆ ಉಲ್ಲಂಘನೆ ಹಿನ್ನೆಲೆ, ಉಪ್ಪಾರಪೇಟೆ ಠಾಣೆ ಪೊಲೀಸರು ದೂರು ನೀಡಿದ್ದರು. ಅದರಂತೆ ಸಮನ್ಸ್ ಜಾರಿ ಆಗಿದೆ.

10 ಕ್ಷೇತ್ರಗಳಲ್ಲಿ ಸೋಲು ಎಂದು ಬಿಜೆಪಿ ಏಕೆ ಹೇಳುತ್ತಿಲ್ಲ: ಡಿಕೆ ಶಿವಕುಮಾರ್
ವಿಧಾನ ಪರಿಷತ್ ಚುನಾವಣೆಯ 25 ಸ್ಥಾನಗಳ ಪೈಕಿ 15 ಸ್ಥಾನ ಗೆಲ್ತೇವೆಂದು ಬಿಜೆಪಿ ಹೇಳುತ್ತಿದೆ. ಹಾಗಾದ್ರೆ 10 ಕ್ಷೇತ್ರಗಳಲ್ಲಿ ಸೋಲು ಎಂದು ಏಕೆ ಹೇಳುತ್ತಿಲ್ಲ ಎಂದು ಬಿಜೆಪಿ ನಾಯಕರ ಹೇಳಿಕೆಗೆ ಡಿ.ಕೆ. ಶಿವಕುಮಾರ್ ಶನಿವಾರ​ ತಿರುಗೇಟು ನೀಡಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಒಂದು ಹೇಳ್ತಾರೆ, ಬಿಜೆಪಿಯ ಇತರೆ ನಾಯಕರು ಮತ್ತೊಂದು ಹೇಳುತ್ತಾರೆ. ಪಂಚಾಯತ್ ​ರಾಜ್​ ವ್ಯವಸ್ಥೆಗೆ ಶಕ್ತಿ ಕೊಟ್ಟವರೇ ನಾವು ಎಂದು ಅವರು ತಿಳಿಸಿದ್ದಾರೆ.

ಮೇಕೆದಾಟು ಯೋಜನೆ ಜಾರಿಗಾಗಿ ಪಾದಯಾತ್ರೆ ವಿಚಾರವಾಗಿ ಶಿವಕುಮಾರ್ ತಿಳಿಸಿದ್ದಾರೆ. 2022ರ ಜನವರಿಯಲ್ಲಿ ನಾವು ಪಾದಯಾತ್ರೆ ಮಾಡುತ್ತೇವೆ. ಸದ್ಯದಲ್ಲೇ ಪಾದಯಾತ್ರೆಗೆ ದಿನಾಂಕ ಪ್ರಕಟಿಸುತ್ತೇವೆ. ಮೇಕೆದಾಟು ವಿಚಾರದಲ್ಲಿ ಜೆಡಿಎಸ್ ಜತೆಯಾದ್ರೆ ಅಭ್ಯಂತರವಿಲ್ಲ. ಯಾವ ಪಕ್ಷದವರು ಬೇಕಾದ್ರೂ ಹೋರಾಟ ಮಾಡಬಹುದು. ಮೇಕೆದಾಟು ಯೋಜನೆ ಜಾರಿಗೆ ತೊಡಕಿಲ್ಲ ಅಂತಾರೆ ಸಿಎಂ. ಈ ಡಬಲ್​ ಗೇಮ್ ಸರ್ಕಾರ ಯೋಜನೆ ಜಾರಿಮಾಡ್ತಿಲ್ಲ ಎಂದು ರಾಮನಗರ ಜಿಲ್ಲೆ ಕನಕಪುರದಲ್ಲಿ ಡಿ.ಕೆ.ಶಿವಕುಮಾರ್​ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ರಾಜಕೀಯಕ್ಕಾಗಿ ಮಳೆಹಾನಿ ಪ್ರದೇಶಗಳಿಗೆ ಸಿಎಂ ಭೇಟಿ: ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಆರೋಪ

ಇದನ್ನೂ ಓದಿ: ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್​ ನಮಗೆ 2 ಕಣ್ಣುಗಳಿದ್ದಂತೆ: ಜಿ ಪರಮೇಶ್ವರ್ ಹೇಳಿಕೆ

TV9 Kannada


Leave a Reply

Your email address will not be published. Required fields are marked *