ಕೊವಿಡ್ ಸೋಂಕಿನ ಅಂತ್ಯದ ದಿನಗಳು ಆರಂಭವಾಗಿದೆ: ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿಕೆ | Coronavirus ending dates are started says dr k sudhakar in bengaluru


ಕೊವಿಡ್ ಸೋಂಕಿನ ಅಂತ್ಯದ ದಿನಗಳು ಆರಂಭವಾಗಿದೆ: ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿಕೆ

ಆರೋಗ್ಯ ಸಚಿವ ಡಾ ಕೆ ಸುಧಾಕರ್

ಬೆಂಗಳೂರು: ಕೊವಿಡ್ ಸೋಂಕಿನ ಅಂತ್ಯದ ದಿನಗಳು ಆರಂಭವಾಗಿದೆ. ಆದರೆ ನಿಖರವಾಗಿ ಸಮಯ ಹೇಳುವುದಕ್ಕೆ ಈಗ ಆಗಲ್ಲ. ರಾಜ್ಯಕ್ಕೆ 3, 4ನೇ ಅಲೆ ಬಂದರೂ ದೊಡ್ಡ ಪರಿಣಾಮವಾಗಲ್ಲ. ಆದರೂ ನಾವು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಕೊರೊನಾ ಸ್ಫೋಟಗೊಳ್ಳುತ್ತಿದೆ. ಶಾಲಾ-ಕಾಲೇಜಿನ ಮಕ್ಕಳಲ್ಲಿ ಸೋಂಕು ಹೆಚ್ಚಾಗಿ ಪತ್ತೆಯಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಕೂಡ ಚರ್ಚೆ ನಡೆಸಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಸದ್ಯ ಬೆಂಗಳೂರಿನಲ್ಲಿ ಇಂದು ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಕೊವಿಡ್ ಸೋಂಕಿನ ಅಂತ್ಯದ ದಿನಗಳು ಆರಂಭವಾಗಿದೆ ಎಂದು ತಿಳಿಸಿದ್ದಾರೆ. ಈಗಾಗಲೇ 7 ಕೋಟಿ 80 ಲಕ್ಷ ಡೋಸ್ ಲಸಿಕೆಯನ್ನು ನೀಡಲಾಗಿದೆ. ಲಸಿಕೆ ನೀಡಿಕೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದೆ. ರಾಜ್ಯದ ಜನ ಕೂಡ ಲಸಿಕೆ ಪಡೆಯಲು ಮುಂದಾಗುತ್ತಿದ್ದಾರೆ. ಕರ್ನಾಟಕದಲ್ಲಿ ಕೊರೊನಾ ತಡೆಗೆ ಕೈಗೊಂಡ ಕ್ರಮಗಳು ಸಮಯೋಚಿತವಾಗಿದೆ. ನಾವು ಕೈಕೊಂಡ ಕ್ರಮಗಳನ್ನು ಇತರರು ಅನುಸರಿಸಬೇಕು. ಒಮಿಕ್ರಾನ್ ಬಗ್ಗೆ ಯಾರೂ ಉದಾಸೀನ ಮಾಡಬಾರದು. ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವುದು ಒಳ್ಳೆಯದು ಎಂದು ರಾಜ್ಯದ ಜನತೆಯಲ್ಲಿ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದ್ದಾರೆ.

TV9 Kannada


Leave a Reply

Your email address will not be published. Required fields are marked *