ಕೊವ್ಯಾಕ್ಸಿನ್ ಲಸಿಕೆ ಪಡೆದು ಯುಕೆಗೆ ಬರುವ ಪ್ರಯಾಣಿಕರಿಗೆ ಐಸೋಲೇಷನ್ ಅಗತ್ಯವಿಲ್ಲ | People vaccinated with Covaxin will not have to isolate after arrival in the UK


ಕೊವ್ಯಾಕ್ಸಿನ್ ಲಸಿಕೆ ಪಡೆದು ಯುಕೆಗೆ ಬರುವ ಪ್ರಯಾಣಿಕರಿಗೆ ಐಸೋಲೇಷನ್ ಅಗತ್ಯವಿಲ್ಲ

ಕೊವ್ಯಾಕ್ಸಿನ್​

ಲಂಡನ್: ಇಂದಿನಿಂದ ಭಾರತ್ ಬಯೋಟೆಕ್‌ನ (Bharat Biotech) ಕೊವಿಡ್ -19 (Covid-19) ಲಸಿಕೆ ಕೊವ್ಯಾಕ್ಸಿನ್ (Covaxin) ಪಡೆದ ಪ್ರಯಾಣಿಕರು ಯುಕೆಗೆ(UK) ಬಂದರೆ ಐಸೋಲೇಷನ್ ಅಗತ್ಯವಿಲ್ಲ. ಏಕೆಂದರೆ ಬ್ರಿಟನ್  ತನ್ನ ಅನುಮೋದಿತ ಲಸಿಕೆಗಳ ಪಟ್ಟಿಗೆ ಕೊವ್ಯಾಕ್ಸಿನ್ ಅನ್ನು ಸೇರಿಸಿದ್ದು ಅದು ಇಂದಿನಿಂದ (ನವೆಂಬರ್ 22 ಸೋಮವಾರ) ಜಾರಿಗೆ ಬಂದಿದೆ. ಚೀನಾದ ಸಿನೊವಾಕ್ ಮತ್ತು ಸಿನೊಫಾರ್ಮ್ ಲಸಿಕೆಗಳನ್ನು ಯುಕೆ ಅನುಮೋದಿತ ಲಸಿಕೆಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದು ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಮಲೇಷಿಯಾದ ಜನರಿಗೆ ಪ್ರಯೋಜನವನ್ನು ನೀಡುತ್ತದೆ.  ನವೆಂಬರ್ 9 ರಂದು ಬ್ರಿಟನ್ ಸರ್ಕಾರವು ನವೆಂಬರ್ 22 ರಿಂದ ಅಂತರರಾಷ್ಟ್ರೀಯ ಪ್ರಯಾಣಿಕರಿಗಾಗಿ ಅದರ ಅನುಮೋದಿತ ಲಸಿಕೆ ಪಟ್ಟಿಗೆ ಕೊವ್ಯಾಕ್ಸಿನ್​​ನ್ನು ಸೇರಿಸಿತ್ತು. ಈ ವಿಶ್ವ ಆರೋಗ್ಯ ಸಂಸ್ಥೆಯ (WHO) ಗಾಗಿ ತುರ್ತು ಬಳಕೆಯ ಪಟ್ಟಿಯಲ್ಲಿ ಕೊವ್ಯಾಕ್ಸಿನ್ ಸೇರಿಸಿದ ಬೆನ್ನಲ್ಲೇ ಬ್ರಿಟನ್ ಈ ಕ್ರಮ ಅನುಸರಿಸಿತ್ತು. ಇದು ಭಾರತದಲ್ಲಿ ಎರಡನೇ ಅತಿ ಹೆಚ್ಚು ಬಳಸಿದ ಲಸಿಕೆ ಆಗಿದೆ . 21 ತಿಂಗಳ ನಂತರ ತನ್ನ ಕೊವಿಡ್ ಪ್ರಯಾಣದ ನಿರ್ಬಂಧಗಳನ್ನು ತೆಗೆದುಹಾಕಿರುವ ಯುನೈಟೆಡ್ ಸ್ಟೇಟ್ಸ್, ಕೊವ್ಯಾಕ್ಸಿನ್ ಅನ್ನು ಅನುಮೋದಿಸಿತು. ಎಲ್ಲಾ ಎಫ್​​ಡಿಎ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಅನುಮೋದಿತ ಲಸಿಕೆಗಳನ್ನು ಅಮೆರಿಕ ಅನುಮೋದಿಸಿದೆ.

ಕೊವ್ಯಾಕ್ಸಿನ್‌ಗೆ ಈ ಹಿಂದೆ ವಿವಿಧ ದೇಶಗಳಲ್ಲಿ ಸಮ್ಮತಿ ನೀಡಿದ್ದರೂ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆಗೆ ಸ್ವಲ್ಪ ಸಮಯ ಕಾಯಲಾಗಿತ್ತು. ಅಕ್ಟೋಬರ್ 4 ರಿಂದ ಯುಕೆಗೆ ಬರುವ ಪ್ರಯಾಣಿಕರಿಗೆ ಅಸ್ಟ್ರಾಜೆನೆಕಾ ಲಸಿಕೆಯ ಭಾರತೀಯ ಆವೃತ್ತಿಯಾದ ಕೋವಿಶೀಲ್ಡ್ ಅನ್ನು ಗುರುತಿಸಲು ಪ್ರಾರಂಭಿಸಿತು. ಇದು ಅಕ್ಟೋಬರ್ 11 ರಂದು ಭಾರತದ ಲಸಿಕೆ ಪ್ರಮಾಣಪತ್ರಗಳನ್ನು ಸ್ವೀಕರಿಸಲು ಪ್ರಾರಂಭಿಸಿತು. ಇದರ ಪರಿಣಾಮವಾಗಿ ಯುಕೆ ಪ್ರಜೆಗಳು ಸಂಪೂರ್ಣವಾಗಿ ಲಸಿಕೆ ಹಾಕಿದ್ದರೂ ಸಹ ದೇಶಕ್ಕೆ ಬಂದ ನಂತರ ಕಡ್ಡಾಯವಾಗಿ 10-ದಿನಗಳ ಕ್ವಾರಂಟೈನ್​​ಗೆ ಒಳಪಡುತ್ತಾರೆ.

ಕೊವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ ಅನ್ನು 110 ದೇಶಗಳು ಅನುಮೋದಿಸಿವೆ ಎಂದು ಸರ್ಕಾರಿ ಅಧಿಕಾರಿಗಳು ಕಳೆದ ವಾರ ಹೇಳಿದ್ದಾರೆ. ವರದಿಗಳ ಪ್ರಕಾರ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಈ ಎರಡು ದೇಶಗಳು ಇತ್ತೀಚೆಗೆ ಅನುಮೋದಿಸಿದ್ದವು.

ಕೊವ್ಯಾಕ್ಸಿನ್ ಮತ್ತುಕೊವಿಶೀಲ್ಡ್ ಜನವರಿ 16 ರ ರಾಷ್ಟ್ರವ್ಯಾಪಿ ಪ್ರತಿರಕ್ಷಣೆ ಅಭಿಯಾನಕ್ಕಾಗಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ (DCGI) ತುರ್ತು ಬಳಕೆಯ ಅಧಿಕಾರವನ್ನು (EUA) ಪಡೆದ ಮೊದಲ ಎರಡು ಲಸಿಕೆಗಳಾಗಿವೆ. ಮೊದಲನೆಯದು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಇಂಟರ್‌ನ್ಯಾಶನಲ್ ಲಿಮಿಟೆಡ್ ಅಭಿವೃದ್ಧಿಪಡಿಸಿದ ಮೊದಲ ಭಾರತದಲ್ಲಿ ತಯಾರಿಸಿದ ಕೊವಿಡ್ ವಿರೋಧಿ ಲಸಿಕೆ ಆಗಿದೆ.

ಎರಡನೆಯದು ಅಸ್ಟ್ರಾಜೆನೆಕಾ ಲಸಿಕೆ. ಇದನ್ನು ಪುಣೆ ಮೂಲದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಸ್ಥಳೀಯವಾಗಿ ಉತ್ಪಾದಿಸುತ್ತದೆ.

ಇದನ್ನೂ ಓದಿ: ಭಾರತದೆದುರು ಬಾಗಿದ ಯುಕೆ: ಕೊವಿಶೀಲ್ಡ್​ 2 ಡೋಸ್​ ಲಸಿಕೆ ಪಡೆದು ಬರುವ ಪ್ರಯಾಣಿಕರಿಗೆ ಕ್ವಾರಂಟೈನ್​ ಇಲ್ಲವೆಂದ ಇಂಗ್ಲೆಂಡ್​ ಸರ್ಕಾರ 

TV9 Kannada


Leave a Reply

Your email address will not be published. Required fields are marked *