ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್​ ಕೊಹ್ಲಿ ಗ್ರೇಟೆಸ್ಟ್​ ಕ್ರಿಕೆಟರ್​​.. ಕ್ರಿಕೆಟ್​​​ನಲ್ಲಿ ಕಿಂಗ್ ಆಗಿರುವ ಕೊಹ್ಲಿಗೆ ಫುಟ್ಬಾಲ್ ಎಂದರೂ ವಿಶೇಷ ಪ್ರೀತಿ.. ಕ್ರಿಕೆಟ್​​ ಮಾತ್ರವಲ್ಲದೆ ಪುಟ್ಬಾಲ್​​ ಆಡುವ ಕೌಶಲ್ಯವನ್ನು ಹೊಂದಿರುವ ವಿರಾಟ್​, ತಂಡದ ಅಭ್ಯಾಸ ಸಮಯದಲ್ಲಿ ಫುಟ್ಬಾಲ್ ಆಡಿರುವುದನ್ನ ನೋಡಿದ್ದೇವೆ ಕೂಡ. ಆದ್ರೀಗ ಮುಂಬೈನಲ್ಲಿ ಕ್ವಾರಂಟೀನ್​ನಲ್ಲಿ ವಿರಾಟ್, ಅಭ್ಯಾಸದ ವೇಳೆ ಫುಟ್ಬಾಲ್ ಆಡುವ ಮೂಲಕ ಗಮನ ಸೆಳೆದಿದ್ದಾರೆ. ಈ ವಿಡಿಯೋವನ್ನ ಟ್ವಿಟರ್​​ನಲ್ಲಿ ಹಂಚಿಕೊಂಡಿರುವ ವಿರಾಟ್, ಗೋಲ್‌ಪೋಸ್ಟ್‌ನ ಕ್ರಾಸ್‌ಬಾರ್‌ಗೆ ಹೊಡೆದಿದ್ದಾರೆ. ಕೊಹ್ಲಿಯ ಈ ಕೌಶಲ್ಯಕ್ಕೆ ಅಭಿಮಾನಿಗಳ ಭರಪೂರ ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ. ಇನ್ನೂ ಈ ಕುರಿತು ಇಂಡಿಯನ್ ಫುಟ್ಬಾಲ್ ಟೀಮ್ ಕ್ಯಾಪ್ಟನ್ ಸುನೀಲ್ ಚೆಟ್ರಿ ರಿಯಾಕ್ಟ್​ ಮಾಡಿದ್ದು, ನಾನು ಫುಟ್ಬಾಲ್​​ ಕೋಚಿಂಗ್ ಸೆಷನ್ ವಾಯ್ಸ್​ ಕಳುಹಿಸುತ್ತೇನೆ. ನೀನು ಕಂತುಗಳ ರೂಪದಲ್ಲಿ ಹಣ ಪಾವತಿಸುವಿರಾ ಚಾಂಪಿಯನ್ ಎಂದು ಪ್ರಶ್ನಿಸಿದ್ದಾರೆ. ಅದ್ಹಾಗೆ ಸುನೀಲ್ ಚೆಟ್ರಿ ಹಾಗೂ ವಿರಾಟ್​ ಸ್ನೇಹಿತರಾಗಿದ್ದಾರೆ. ಅಷ್ಟೇ ಅಲ್ಲ..! ವಿರಾಟ್​ ಕೊಹ್ಲಿ ಅಭಿಮಾನಿಯೂ ಅನ್ನೋದನ್ನ ಮರೆಯುವಂತಿಲ್ಲ.

The post ಕೊಹ್ಲಿಗೆ ‘ಕಿಕ್’ ಕೊಟ್ಟ ಫುಟ್ಬಾಲ್ ಆಟಗಾರ ಸುನೀಲ್ ಚೆಟ್ರಿ..! appeared first on News First Kannada.

Source: newsfirstlive.com

Source link