ಸೌತ್ ಆಫ್ರಿಕಾ ವಿರುದ್ಧ ಮೂರನೇ ಟೆಸ್ಟ್ ಮ್ಯಾಚ್ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಅರ್ಧಶತಕ ಬಾರಿಸಿದ್ರು. ಆರಂಭದಿಂದಲೇ ಸತತ ಒಂದರ ಮೇಲೊಂದು ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾಗೆ ಆಸರೆಯಾದ ಕೊಹ್ಲಿ ತಾಳ್ಮೆಯ ಆಟವಾಡಿದರು. ಈಗ ಕೊಹ್ಲಿ ವಿಕೆಟ್ ಪಡೆಯೋಕೆ ಹೇಗೆ ಗೇಮ್ ಪ್ಲಾನ್ ರೂಪಿಸಿದ್ದೇ ಎಂದು ದಕ್ಷಿಣ ಆಫ್ರಿಕಾ ಬೌಲರ್ ಕಗಿಸೊ ರಬಾಡ ಬಹಿರಂಗಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ರಬಾಡ, ಕೊಹ್ಲಿ ಶಿಸ್ತುಬದ್ಧ ಬ್ಯಾಟಿಂಗ್ ಮಾಡಿದರು. ಕೊಹ್ಲಿಗೆ ಲೈನ್ ಅಂಡ್ ಲೆನ್ತ್ ಬೌಲ್ ಮಾಡುತ್ತಿದ್ದೆ. ಪದೇ ಪದೇ ಆಫ್ ಸ್ಟಂಪ್ ಮೇಲೆ ಪಿಚ್ ಮಾಡಿ ಹೊರಗಡೆಗೆ ಸ್ವಿಂಗ್ ಮಾಡುತ್ತಿದ್ದೆ. ಹೀಗಿದ್ದರೂ ಕೊಹ್ಲಿ ತಾಳ್ಮೆ ಆಟವಾಡಿದರು ಎಂದರು.
ಎಷ್ಟೇ ಪ್ರಯತ್ನಿಸಿದರೂ ಕೊಹ್ಲಿ ಹೊರಗಡೆ ಇರೋ ಎಸೆತಗಳನ್ನು ವಿಕೆಟ್ ಕೀಪರ್ಗೆ ಬಿಟ್ಟಿದ್ದರು. ಆದರೆ, ಕೊನೆಗೂ ನನ್ನ ಪ್ಲಾನ್ ವರ್ಕೌಟ್ ಆಯ್ತು, ಕೊಹ್ಲಿ ವಿಕೆಟ್ ಒಪ್ಪಿಸಿದರು ಎಂದು ಹೇಳಿದರು.