ಬ್ಯಾಟಿಂಗ್ ಲೆಜೆಂಡ್, ಟೀಮ್ ಇಂಡಿಯಾ ಮಾಜಿ ಆಟಗಾರ ಸಚಿನ್ ತೆಂಡುಲ್ಕರ್ ವಿರಾಟ್ ಕೊಹ್ಲಿ ಜೊತೆಗಿನ ಭಾವನಾತ್ಮಕ ಕ್ಷಣವನ್ನ ನೆನೆಪಿಸಿಕೊಂಡಿದ್ದಾರೆ. ಸಚಿನ್ರ ಕೊನೆಯ ಅಂತಾರಾಷ್ಟ್ರೀಯ ಪಂದ್ಯದ ವೇಳೆ ಕೊಹ್ಲಿ ತಮ್ಮ ತಂದೆಯಿಂದ ಪಡೆದಿದ್ದ ವಿಶೇಷ ವಸ್ತುವೊಂದನ್ನ ಸಚಿನ್ಗೆ ನೀಡಲು ಹೋದಾಗ ಸಚಿನ್, ಬೇಡ ಇದು ನಿಮ್ಮ ತಂದೆ ನಿನಗೆ ನೀಡಿದ್ದಾರೆ. ನಿನ್ನಲ್ಲೇ ಇರಬೇಕೆಂದು ಎಂದು ಹೇಳಿದ್ದರಂತೆ. ಸಂದರ್ಶನವೊಂದರಲ್ಲಿ ಸಚಿನ್ ಈ ಬಗ್ಗೆ ಮಾತನಾಡಿದ್ದಾರೆ.
ಟೀಮ್ ಇಂಡಿಯಾ ಪರ ನನ್ನ ಕೊನೆಯ ಪಂದ್ಯ ಆಡುತ್ತಿದ್ದಾಗ.. ತುಂಬಾ ಎಮೋಷನಲ್ ಆಗಿ ಒಂದು ಡ್ರೆಸ್ಸಿಂಗ್ ರೂಮ್ನ ಒಂದು ಮೂಲೆಯಲ್ಲಿ ಒಬ್ಬನೇ ಕೂತಿದ್ದೆ. ಆಗ ನನ್ನ ಬಳಿ ಬಂದ ವಿರಾಟ್ ಕೊಹ್ಲಿ, ಪವಿತ್ರ ದಾರವನ್ನ ನನಗೆ ನೀಡಿದ್ರು. ಅದನ್ನ ಕೊಹ್ಲಿ ಅವರ ತಂದೆಯಿಂದ ಪಡೆದಿದ್ರು. ಕೊಹ್ಲಿ ನೀಡಿದ್ದ ಆ ದೇವರ ದಾರವನ್ನ ಕೆಲಕಾಲ ನನ್ನ ಬಳಿ ಇಟ್ಟುಕೊಂಡಿದ್ದ ನಾನು ನಂತರ, ಇದು ನಿನ್ನ ಆಸ್ತಿ ನಿನ್ನ ಬಳಿಯೇ ಇರಬೇಕೆಂದು ವಾಪಸ್ ನೀಡಿದೆ ಎಂದು ಸಚಿನ್ ಹಲವು ವರ್ಷಗಳ ನಂತರ ವಿರಾಟ್ ಕೊಹ್ಲಿಯೊಂದಿಗೆ ನಡೆದಿದ್ದ ಎಮೋಷನಲ್ ಮಾತುತೆಯನ್ನ ಹೊರಹಾಕಿದ್ದಾರೆ.