ವಿಶ್ವ ಕ್ರಿಕೆಟ್​​ನ ಸಾಮ್ರಾಟ ವಿರಾಟ್​ ಕೊಹ್ಲಿ, ಮಾಡ್ರನ್ ಡೇ ಕ್ರಿಕೆಟ್​​ನ ರನ್ ಮಷಿನ್ ಅಂತಾನೇ ಕರೆಸಿಕೊಳ್ಳುವ ಕಿಂಗ್ ಕೊಹ್ಲಿ, ಅಂತರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಹಲವು ದಾಖಲೆಗಳನ್ನ ತಮ್ಮದಾಗಿಸಿಕೊಂಡಿದ್ದಾರೆ. ಈಗಾಗಲೇ 70 ಶತಕಗಳನ್ನ ದಾಖಲಿಸಿರುವ ವಿರಾಟ್​, ಶತಕ ವೀರರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇನ್ನೊಂದು ಶತಕ ದಾಖಲಿಸಿದರೆ, ದಿಗ್ಗಜ ರಿಕ್ಕಿ ಪಾಂಟಿಂಗ್ ದಾಖಲೆ ಸರಿಗಟ್ಟಲಿದ್ದಾರೆ. ಇದೇ ದಾರಿಯಲ್ಲಿ ಸಾಗಿದರೆ, ಮುಂದೊಂದು ದಿನ ಗಾಡ್​ ಆಫ್​ ಕ್ರಿಕೆಟ್ ಸಚಿನ್​ ತೆಂಡುಲ್ಕರ್​ರ ಶತಕದ ದಾಖಲೆಯನ್ನೂ ಬ್ರೇಕ್​ ಮಾಡೋದು ಗ್ಯಾರಂಟಿ. ಇದೇ ವಿಚಾರವನ್ನ ಪ್ರಸ್ತಾಪಿಸಿರುವ ಆಸ್ಟ್ರೇಲಿಯನ್ ಓಪನರ್ ಡೇವಿಡ್​​ ವಾರ್ನರ್​, ಮಾಡ್ರನ್​ ಡೇ ಕ್ರಿಕೆಟ್​​ನ ಟಾಪ್ 10 ಶತಕ ವೀರರ ಪಟ್ಟಿಯನ್ನ ಶೇರ್​ ಮಾಡಿದ್ದಾರೆ.

ಈ ಪಟ್ಟಿಯಲ್ಲಿ ವಾರ್ನರ್​, ಕ್ರಿಸ್ ​ಗೇಲ್, ರೋಹಿತ್ ಶರ್ಮಾ, ರಾಸ್ ಟೇಲರ್, ಸ್ಟೀವ್ ಸ್ಮಿತ್​​, ಕೇನ್​​ ವಿಲಿಯಮ್ಸನ್, ಜೋ ರೂಟ್, ಶಿಖರ್ ಧವನ್, ಫಾಫ್ ಡುಪ್ಲೆಸಿಸ್​ ಇದ್ದಾರೆ. ಈ ಪೈಕಿ ವಿರಾಟ್​ ಕೊಹ್ಲಿಯ ಪೋಟೋವನ್ನ ಮಾರ್ಕ್​ ಮಾಡಿರುವ ವಾರ್ನರ್​, ನಾವೆಲ್ಲರೂ ಈ ವ್ಯಕ್ತಿಯನ್ನ ಹಿಡಿಯೋದು ಕಷ್ಟಕರವಾಗಿದೆ. ನಮಗಿಂತ ದೂರ ಇರುವ ಈ ಮಿಷನ್ ಗನ್​​​​ ವಿರಾಟ್​​ಗೆ ಬ್ರೇಕ್​ ಹಾಕುವುದು ಹೇಗೆ ಎಂದು ಕ್ಯಾಪ್ಷನ್ ನೀಡಿದ್ದಾರೆ. ಇನ್ನೂ 2019ರ ನವೆಂಬರ್ ಬಳಿಕ ಒಂದೇ ಒಂದು ಶತಕ ಸಿಡಿಸದ ವಿರಾಟ್​, ಸದ್ಯ ವಿಶ್ವ ಟೆಸ್ಟ್​ ಚಾಂಪಿಯನ್ ಶಿಪ್ ಹಾಗೂ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್​ ಸರಣಿಗೆ ಸಜ್ಜಾಗ್ತಿದ್ದಾರೆ.

The post ಕೊಹ್ಲಿಯನ್ನ ಹಿಡಿಯೋಕೆ​ ನಮ್ಮಿಂದ ಆಗಲ್ಲ..! ವಾರ್ನರ್ ಹೀಗೆ ಹೇಳಿದ್ಯಾಕೆ..?​​ appeared first on News First Kannada.

Source: newsfirstlive.com

Source link