ಕೊಹ್ಲಿಯ ವಿಶೇಷ ಫೋಟೋವೊಂದನ್ನು ಪೋಸ್ಟ್ ಮಾಡಿದ ಡಿವಿಲಿಯರ್ಸ್​; ಶಾಕ್ ಆದ ವಿರಾಟ್, ಅನುಷ್ಕಾ..! | AB de Villiers unseen Instagram post leaves Virat Kohli Anushka Sharma stunned See Picture


Virat Unseen Pics: ಡಿವಿಲಿಯರ್ಸ್ ಸೋಷಿಯಲ್ ಮೀಡಿಯಾದಲ್ಲಿ ಯಾರೂ ನೋಡದ ಥ್ರೋಬ್ಯಾಕ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಡಿವಿಲಿಯರ್ಸ್ ಮತ್ತು ಕೊಹ್ಲಿ ಇಬ್ಬರೂ ಸ್ಕೂಟರ್ ಮೇಲೆ ಕುಳಿತಿದ್ದಾರೆ.

ಮೂರು ವರ್ಷಗಳ ವೈಫಲ್ಯಗಳನ್ನು ಮೆಟ್ಟಿ ನಿಂತಿರುವ ವಿರಾಟ್ ಕೊಹ್ಲಿ (Virat Kohli) ಮತ್ತೊಮ್ಮೆ ತಮ್ಮ ಹಳೆಯ ಫಾರ್ಮ್​ಗೆ ಮರಳಿದ್ದಾರೆ. ಏಷ್ಯಾಕಪ್​ನಲ್ಲಿ ತಮ್ಮ ಸಾಮರ್ಥ್ಯ ತೋರಿದ ಕೊಹ್ಲಿಗೆ ವಿಶ್ವದಾದ್ಯಂತ ಪ್ರಶಂಸೆ ವ್ಯಕ್ತವಾಗುತ್ತಿದೆ. 71ನೇ ಶತಕವನ್ನು ಬಾರಿಸಿದ ಕೊಹ್ಲಿಗೆ ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಜೊತೆಗೆ ಅನೇಕ ಕ್ರಿಕೆಟಿಗರು ಕೂಡ ಕೊಹ್ಲಿ ಶತಕಕ್ಕೆ ಅಭಿನಂದನೆ ತಿಳಿಸುತ್ತಿದ್ದಾರೆ. ಅವರಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ (AB de Villiers) ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಫೋಟೋ ಇರುವ ಪೋಸ್ಟ್ ಒಂದನ್ನು ಮಾಡಿದ್ದಾರೆ. ಈ ಪೋಸ್ಟ್‌ನಿಂದ ಕೊಹ್ಲಿ ಅಭಿಮಾನಿಗಳು ದಂಗಾಗಿದ್ದಾರೆ. ಅವರಷ್ಟೇ ಅಲ್ಲ.. ಡಿವಿಲಿಯರ್ಸ್ ಅವರ ಈ ಅನಿರೀಕ್ಷಿತ ಥ್ರೋಬ್ಯಾಕ್ ಪೋಸ್ಟ್ ನೋಡಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಕೂಡ ಶಾಕ್ ಆಗಿದ್ದಾರೆ.

ವಾಸ್ತವವಾಗಿ, ವಿಶ್ವದಾದ್ಯಂತ ಕೊಹ್ಲಿಯ ಅಭಿಮಾನಿಗಳು ಅವರ ಶತಕ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. 1020 ದಿನಗಳ ಅಂತರದ ನಂತರ ಭಾರತದ ಮಾಜಿ ನಾಯಕ ಕೊಹ್ಲಿ ಕೇವಲ 61 ಎಸೆತಗಳಲ್ಲಿ 122 ರನ್ ಗಳಿಸಿದರು. ಈ ಸ್ಕೋರ್‌ನೊಂದಿಗೆ ಕೊಹ್ಲಿ ತಮ್ಮ ವೃತ್ತಿಜೀವನದ 71 ನೇ ಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ಹಲವು ಕ್ರಿಕೆಟಿಗರು ವಿರಾಟ್ ಬಗ್ಗೆ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ.

ಈ ಹಿನ್ನಲೆಯಲ್ಲಿ ತಮ್ಮದೇ ಶೈಲಿಯಲ್ಲಿ ಡಿವಿಲಿಯರ್ಸ್ ಸೋಷಿಯಲ್ ಮೀಡಿಯಾದಲ್ಲಿ ಯಾರೂ ನೋಡದ ಥ್ರೋಬ್ಯಾಕ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಡಿವಿಲಿಯರ್ಸ್ ಮತ್ತು ಕೊಹ್ಲಿ ಇಬ್ಬರೂ ಸ್ಕೂಟರ್ ಮೇಲೆ ಕುಳಿತಿದ್ದಾರೆ. “ಇಂದು ಕೊಹ್ಲಿ 100 ರನ್ ಗಳಿಸಿದ ಸಂದರ್ಭದಲ್ಲಿ, ನಾನು ಈ ಚಿತ್ರವನ್ನು ಹಂಚಿಕೊಳ್ಳಲು ಯೋಚಿಸಿದೆ. ಇನ್ನೂ ಹೆಚ್ಚು ಶಯತಕಗಳು ಬರಲಿದೆ” ಎಂದು ಡಿವಿಲಿಯರ್ಸ್ ಶೀರ್ಷಿಕೆ ನೀಡಿದ್ದಾರೆ. ಆದಾಗ್ಯೂ, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಬ್ಬರೂ ಈ ಥ್ರೋ ಬ್ಯಾಕ್ ಫೋಟೋಗೆ ಪ್ರತಿಕ್ರಿಯಿಸಿದ್ದು, ‘ಹಹಹಹಹ’ ಎಂದು ಕಾಮೆಂಟ್ ಮಾಡಿ.. ‘ಥ್ಯಾಂಕ್ಯೂ ಬಿಸ್ಕೆಟ್. ಲವ್ ಯೂ’ ಎಂದು ಉತ್ತರಿಸಿದ್ದಾರೆ. ಹಾಗೆಯೇ ಅನುಷ್ಕಾ ಶರ್ಮಾ ಕೂಡ ‘ಓ ಮೈ ಗಾಡ್’ ಎಂದು ಶಾಕ್ ಆದವರಂತೆ ಉತ್ತರಿಸಿದ್ದಾರೆ.

ಈಗ ಡಿವಿಲಿಯರ್ಸ್ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿದ್ದು, ಫೋಟೋ ನೋಡಿದ ವಿರಾಟ್ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ. ಜೊತೆಗೆ ಡಿವಿಲಿಯರ್ಸ್ ಮತ್ತು ಕೊಹ್ಲಿ ಅವರ ಸ್ನೇಹಕ್ಕೆ ವಂದನೆ ಸಲ್ಲಿಸುತ್ತಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.