ಕೊಹ್ಲಿಯ 9 ತಿಂಗಳ ಮಗಳಿಗೆ ಅತ್ಯಾಚಾರ ಬೆದರಿಕೆ ಹಾಕಿದ್ದವ ಐಐಟಿ ಪದವೀಧರ! ಆರೋಪಿಗೆ ವಾರ್ಷಿಕ ವೇತನವೆಷ್ಟು ಗೊತ್ತಾ? | Rape threat to Virat kohli baby Arrested techie is an IIT Hyderabad graduate


ಕೊಹ್ಲಿಯ 9 ತಿಂಗಳ ಮಗಳಿಗೆ ಅತ್ಯಾಚಾರ ಬೆದರಿಕೆ ಹಾಕಿದ್ದವ ಐಐಟಿ ಪದವೀಧರ! ಆರೋಪಿಗೆ ವಾರ್ಷಿಕ ವೇತನವೆಷ್ಟು ಗೊತ್ತಾ?

ಮಗುವಿನೊಂದಿಗೆ ಕೊಹ್ಲಿ ದಂಪತಿ

ಟಿ20 ವಿಶ್ವಕಪ್ ಭಾರತ ತಂಡಕ್ಕೆ ನಿರಾಸೆ ತಂದಿದೆ. ಮೈದಾನದಲ್ಲಿ ಟೀಂ ಇಂಡಿಯಾ ತನ್ನ ಆಟದಿಂದ ಪ್ರಭಾವ ಬೀರಲು ವಿಫಲವಾದಾಗ, ಆಟಗಾರರು ಮೈದಾನದ ಹೊರಗೆ ಟ್ರೋಲಿಂಗ್‌ಗೆ ಬಲಿಯಾಗಬೇಕಾಯಿತು. ಏತನ್ಮಧ್ಯೆ, ಟೀಂ ಇಂಡಿಯಾದ ಪ್ರದರ್ಶನದಿಂದ ನಿರಾಶೆಗೊಂಡ ಅಭಿಮಾನಿಗಳು ನಾಯಕ ವಿರಾಟ್ ಕೊಹ್ಲಿ ಅವರ ಒಂಬತ್ತು ತಿಂಗಳ ಮಗಳಿಗೆ ಅತ್ಯಾಚಾರದ ಬೆದರಿಕೆ ಹಾಕಿದ ಹೀನ ಘಟನೆಯೂ ನಡೆಯಿತು. ಅಭಿಮಾನಿಗಳ ಈ ಕೃತ್ಯಕ್ಕೆ ಎಲ್ಲೆಡೆ ಖಂಡನೆ ವ್ಯಕ್ತವಾಗಿದೆ. ಈ ಬಗ್ಗೆ ಕ್ರಮ ಕೈಗೊಂಡ ಮುಂಬೈ ಪೊಲೀಸರು ಬೆದರಿಕೆ ಹಾಕಿದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಇಂತಹ ಅಸಹ್ಯಕರ ಬೆದರಿಕೆ ಹಾಕಿದ ವ್ಯಕ್ತಿ ಯಾರೋ ಅನಕ್ಷರಸ್ಥ ಹುಡುಗನಲ್ಲ ಬದಲಿಗೆ ಆತ ಐಐಟಿಯಿಂದ ಪದವಿ ಪಡೆದಿದ್ದಾನೆ ಎಂಬುದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ.

ವಿರಾಟ್ ಕೊಹ್ಲಿ ಮಗಳಿಗೆ ಬೆದರಿಕೆ ಬಂದ ನಂತರ ದೆಹಲಿ ಮಹಿಳಾ ಆಯೋಗವು ಈ ಬಗ್ಗೆ ಕ್ರಮ ಕೈಗೊಂಡಿದೆ. ದೆಹಲಿ ಮಹಿಳಾ ಆಯೋಗವು ಈ ವಿಷಯದಲ್ಲಿ ನೋಟಿಸ್ ಜಾರಿ ಮಾಡಿತ್ತು ಮತ್ತು ಪೊಲೀಸರನ್ನು ಇದುವರೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ಕೇಳಿದೆ. ಅದೇ ಸಮಯದಲ್ಲಿ ಕೊಹ್ಲಿಯ ಮ್ಯಾನೇಜರ್ ಕೂಡ ಎಫ್‌ಐಆರ್ ದಾಖಲಿಸಿದ್ದಾರೆ. ಇದರ ನಂತರ, ಮುಂಬೈ ಪೊಲೀಸರ ಸೈಬರ್ ಸೆಲ್ ಬೆದರಿಕೆ ಹಾಕಿದ ವ್ಯಕ್ತಿಗಾಗಿ ಹುಡುಕಾಟ ಆರಂಭಿಸಿತು. ಅಂತಿಮವಾಗಿ ಬುಧವಾರ ಹೈದರಾಬಾದ್‌ನಿಂದ ಆತನನ್ನು ಬಂಧಿಸಿತು. ಇದೀಗ ಆತನನ್ನು ಮುಂಬೈಗೆ ಕರೆತಂದಿದ್ದಾರೆ.

ಆರೋಪಿ ಐಐಟಿಯಲ್ಲಿ ಪದವೀಧರನಾಗಿದ್ದಾನೆ
ಮೂಲಗಳ ಪ್ರಕಾರ ಈ ಆರೋಪಿಯನ್ನು ರಾಮನಾಗೇಶ್ ಶ್ರೀನಿವಾಸ್ ಅಕುಬಾತಿನಿ ಎಂದು ಗುರುತಿಸಲಾಗಿದ್ದು, ಆತನಿಗೆ 23 ವರ್ಷ. ರಾಮನಾಗೇಶ್ ಎರಡು ವರ್ಷಗಳ ಹಿಂದೆ ಐಐಟಿ ಹೈದರಾಬಾದ್‌ನಲ್ಲಿ ಪದವಿ ಪಡೆದಿದ್ದರು. ಇದಾದ ನಂತರ ಅವರು ಟಾಪ್ ಫುಡ್ ಆ್ಯಪ್‌ನಲ್ಲಿ ಕೆಲಸಕ್ಕೆ ಸೇರಿದ್ದರು. ಅವರಿಗೆ ವಾರ್ಷಿಕ 24 ಲಕ್ಷಗಳ ಪ್ಯಾಕೇಜ್ ನೀಡಲಾಗಿದೆ. ಇತ್ತೀಚೆಗಷ್ಟೇ ಕೆಲಸ ತೊರೆದು ಅಮೆರಿಕದಲ್ಲಿ ಸ್ನಾತಕೋತ್ತರ ಪದವಿಗೆ ತಯಾರಿ ನಡೆಸಿದ್ದರು. ತನ್ನ ಮಗನನ್ನು ಏಕೆ ಬಂಧಿಸಲಾಯಿತು ಎಂದು ರಾಮನಾಗೇಶ್ ತಂದೆಗೆ ಇನ್ನೂ ಅರ್ಥವಾಗಿಲ್ಲವಂತೆ. ಅವರೂ ಸಹ ಹೈದರಾಬಾದ್‌ನಿಂದ ತಮ್ಮ ಪುತ್ರನೊಂದಿಗೆ ಮುಂಬೈಗೆ ಬಂದಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಕಳಪೆ ಆಟ
ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಪಾಕಿಸ್ತಾನದ ವಿರುದ್ಧ ಹೀನಾಯ ಸೋಲನ್ನು ಎದುರಿಸಬೇಕಾಯಿತು. ಇದರ ನಂತರ, ಅವರು ನ್ಯೂಜಿಲೆಂಡ್ ವಿರುದ್ಧವೂ ಸೋಲನ್ನು ಎದುರಿಸಬೇಕಾಯಿತು, ಇದರಿಂದಾಗಿ ಅವರ ಸೆಮಿಫೈನಲ್‌ಗೆ ತಲುಪುವ ಪ್ರಯಾಣ ಅಂತ್ಯವಾಯಿತು. ಇದರ ನಂತರ ತಂಡವು ತನ್ನ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದರೂ ಸೆಮಿಫೈನಲ್ ತಲುಪಲು ಸಾಧ್ಯವಾಗಲಿಲ್ಲ. ಈ ವಿಶ್ವಕಪ್ ವಿರಾಟ್ ಕೊಹ್ಲಿ ಟಿ20 ನಾಯಕನ ಕೊನೆಯ ಟಿ20 ಟೂರ್ನಿಯಾಗಿತ್ತು.

TV9 Kannada


Leave a Reply

Your email address will not be published. Required fields are marked *