ಒನ್ ಡೇ ಮತ್ತು T20 ಬೆನ್ನಲ್ಲೀಗ ಟೀಂ ಇಂಡಿಯಾ ಟೆಸ್ಟ್ ಮಾದರಿ ನಾಯಕತ್ವದಿಂದ ವಿರಾಟ್ ಕೊಹ್ಲಿ ಕೆಳಗಿಳಿದಿದ್ದಾರೆ. ಈ ವಿಚಾರ ಭಾರೀ ಚರ್ಚೆಗೆ ಗ್ರಾಸವಾದ ಹೊತ್ತಲ್ಲೇ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಕೊಟ್ಟ ಹೇಳಿಕೆಯೀಗ ತೀವ್ರ ಕುತೂಹಲ ಮೂಡಿಸಿದೆ.
ವಿರಾಟ್ ಬಹಳ ಬೇಗನೆ ಒಂದರ ಹಿಂದೆ ಒಂದರಂತೆ ಟೆಸ್ಟ್, ಒನ್ ಡೇ, T20 ಎನ್ನದೇ ನಾಯಕತ್ವ ತೊರೆದಿದ್ದಾರೆ. ಕೇವಲ ವೈಟ್ ಬಾಲ್ ಮಾತ್ರ ಐಪಿಎಲ್ ನಾಯಕತ್ವಕ್ಕೂ ರಾಜೀನಾಮೆ ನೀಡುತ್ತೇನೆ ಎಂದಿರುವುದು ಅನಿರೀಕ್ಷಿತ. ಈ ಮೂರು ಪ್ರಮುಖ ಸ್ಥಾನಗಳಿಗೆ ನೀಡಿದ ರಾಜೀನಾಮೆಗಳು ಒಂದರ ನಂತರ ಒಂದರಂತೆ ಬಂದಿವೆ. ಇದು ಬಹಳ ಕುತೂಹಲಕಾರಿ ಎಂದು ಸಂಜಯ್ ಮಂಜ್ರೇಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಿಸಿಸಿಐ ತನ್ನನ್ನು ನಾಯಕತ್ವದಿಂದ ಕಿತ್ತು ಹಾಕುವ ಅವಕಾಶ ನೀಡದಿರಲು ಕೊಹ್ಲಿ ಬಯಸಿದ್ದರು. ಟೆಸ್ಟ್ ನಾಯಕತ್ವ ಹುದ್ದೆಗೆ ಕೂಡ ಅಪಾಯವಿದೆ ಎಂದು ಅರಿತ ಕೊಹ್ಲಿ, ಹೀಗೆ ಮಾಡಿರಬಹುದು ಎಂದಿದ್ದಾರೆ.