ಭಾರತ – ಆಸ್ಟ್ರೇಲಿಯಾ ನಡುವಿನ ಪಂದ್ಯ ಅಂದ್ರೆ, ವಿರಾಟ್​ ಕೊಹ್ಲಿ – ಸ್ಟೀವ್​ ಸ್ಮಿತ್​ ನಡುವಿನ ಹಣಾಹಣಿ ಎಂದೇ ಬಿಂಬಿತವಾಗುತ್ತೆ. ಈ ಆಟಗಾರರೂ ಕೂಡ ಅಷ್ಟೇ ಅಗ್ರೆಸ್ಸೀವ್​ ಆಗಿ ಆಡ್ತಾರೆ. ಒಬ್ಬರನ್ನೊಬ್ಬರು ಹೊಗಳಿಕೊಂಡ ಉದಾಹರಣೆಗಳು ಸಾಕಷ್ಟಿವೆ. ಆದ್ರೆ, ಇದೀಗ ಸ್ಟೀವ್​ ಸ್ಮಿತ್​ ತಮ್ಮ ವಿರುದ್ಧ ಆಡಿದ ಬೆಸ್ಟ್​​ ಬ್ಯಾಟ್ಸ್​ಮನ್​ ಯಾರು.? ಅನ್ನೋ ಪ್ರಶ್ನೆಗೆ ಉತ್ತರಿಸಿದ್ದಾರೆ. ಆದ್ರೆ, ಆ ಉತ್ತರ ವಿರಾಟ್​ ಕೊಹ್ಲಿ ಆಗಿಲ್ಲ. ಬದಲಾಗಿ ತಮ್ಮ ವಿರುದ್ಧ ತಂಡದಲ್ಲಿ ಆಡಿದ ಆಟಗಾರರಲ್ಲಿ ಬೆಸ್ಟ್​ ಬ್ಯಾಟ್ಸ್​ಮನ್​ ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತೆಂಡುಲ್ಕರ್​ ಎಂದು ಹೇಳಿದ್ದಾರೆ.

ಇನ್ಸ್​​ಸ್ಟಾಗ್ರಾಮ್​ ಖಾತೆಯಲ್ಲಿ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸ್ಮಿತ್​, ಸಚಿನ್​ ತೆಂಡುಲ್ಕರ್​ ನನ್ನ ಎದುರಾಳಿ ತಂಡದಲ್ಲಿ ಕಂಡ ಬೆಸ್ಟ್​ ಬ್ಯಾಟ್ಸ್​ಮನ್​ ಎಂದಿದ್ದಾರೆ. ‘ನಾನು ಬಹುಶಃ ಸಚಿನ್​ ತೆಂಡುಲ್ಕರ್​ ಹೆಸರನ್ನ ಹೇಳುತ್ತೇನೆ. ಚಿಕ್ಕ ವಯಸ್ಸಿನಿಂದ ನಾನು ಅವರ ಆಟವನ್ನ ಪ್ರೀತಿಯಿಂದ ನೊಡಿದ್ದೇನೆ. ಆ ನಂತರದಲ್ಲಿ ಅವರ ವಿರುದ್ಧ ಆಡಿದ್ದು ಕೂಡ ನನಗೆ ವಿಶೇಷವೇ. ನನ್ನ ಪ್ರಕಾರ ನಾವು ಅವರನ್ನ ನಾನು ಎಸೆದ ಮೊದಲ ಎಸೆತದಲ್ಲೇ ಔಟ್​ ಮಾಡಿದ್ದೆ. ಅದು ನನ್ನ ವಿಶೇಷ ಘಳಿಗೆ’ ಎಂದು ಸ್ಮಿತ್​ ಹೇಳಿಕೊಂಡಿದ್ದಾರೆ.

The post ಕೊಹ್ಲಿ, ಡಿವಿಲಿಯರ್ಸ್​ ಅಲ್ಲ; ತೆಂಡುಲ್ಕರ್ ದಿ ಬೆಸ್ಟ್ ಬ್ಯಾಟ್ಸ್​ಮನ್- ಸ್ಟೀವ್ ಸ್ಮಿತ್ appeared first on News First Kannada.

Source: newsfirstlive.com

Source link