ಕೊಹ್ಲಿ ತಮ್ಮ ಅಹಂಕಾರ ಬಿಡಬೇಕು -ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಆಕ್ರೋಶ


ವಿರಾಟ್ ಕೊಹ್ಲಿ ಇನ್ಮುಂದೆ ತನ್ನ ಗರ್ವವನ್ನ ಬಿಟ್ಟು ಯುವ ಆಟಗಾರರ ಕೆಳಗಡೆ ಆಡಬೇಕು ಎಂದು ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಕಪಿಲ್ ದೇವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟೆಸ್ಟ್​ ಕ್ರಿಕೆಟ್​ ಕ್ಯಾಪ್ಟನ್ಸಿಗೆ ವಿರಾಟ್ ಕೊಹ್ಲಿ ವಿದಾಯ ಹೇಳಿದ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಕಪಿಲ್ ದೇವ್​, ನಾನು ವಿರಾಟ್​ ಕೊಹ್ಲಿಯ ನಿರ್ಧಾರವನ್ನ ಸ್ವಾಗತಿಸುತ್ತೇನೆ. ಟಿ-20 ನಾಯಕತ್ವ ತ್ಯಜಿಸಿದ ಬಳಿಕ ಕಠಿಣ ಹಾದಿಯಲ್ಲಿದ್ದಾರೆ. ವಿರಾಟ್​​ ಕೊಹ್ಲಿ ಈಗ ತನ್ನ ಗರ್ವವನ್ನ ಬಿಡಬೇಕು. ಸುನೀಲ್ ಗವಾಸ್ಕರ್​ ನನ್ನ ನಾಯಕತ್ವದಡಿಯಲ್ಲಿ ಆಡಿದ್ರು. ನಾನು ಶ್ರೀಕಾಂತ್​ ಹಾಗೂ ಅಜರುದ್ದೀನ್​ ಕೆಳಗಡೆ ಆಡಿದ್ದೆ. ಈಗ ಕೊಹ್ಲಿ ತನ್ನ ಗರ್ವವನ್ನ ಬಿಟ್ಟು ಯುವ ಆಟಗಾರರ ಕೆಳಗಡೆ ಆಡಬೇಕು. ಜೊತೆಗೆ ಯುವ ನಾಯಕನಿಗೆ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದ್ದಾರೆ.

ಟೆಸ್ಟ್​ ನಾಯಕತ್ವಕ್ಕೂ ಗುಡ್​ ಬೈ ಹೇಳೊದ್ರೊಂದಿಗೆ ವಿರಾಟ್​ ಕೊಹ್ಲಿ ನಾಯಕನಾಗಿ ಮೂರು ಮಾದರಿಯಿಂದ ಕೊಹ್ಲಿ ಕೆಳಗಿಳಿದಂತಾಗಿದೆ. ಇನ್ಮುಂದೆ ಕೊಹ್ಲಿ ಒಬ್ಬ ಸಾಮಾನ್ಯ ಆಟಗಾರನಷ್ಟೇ. ಕಳೆದ ಕೆಲ ವರ್ಷಗಳಿಂದ ಕಿಂಗ್​ ಆಗಿ ಮೆರೆದ ವಿರಾಟ್​, ಅಧಿಕಾರವಿಲ್ಲದೇ ತಂಡದಲ್ಲಿ ಹೇಗೆ ಇರ್ತಾರೆ ಅನ್ನೋದೇ ಕುತೂಹಲ ಮೂಡಿಸಿದೆ.

News First Live Kannada


Leave a Reply

Your email address will not be published. Required fields are marked *