ಕೊಹ್ಲಿ, ಪಂತ್​​​ಗೆ ರೆಸ್ಟ್.. ಇವತ್ತಿನ ಪಂದ್ಯದಲ್ಲಿ ಕ್ಯಾಪ್ಟನ್ ರೋಹಿತ್ ಮ್ಯಾಜಿಕ್ ಹೇಗಿರುತ್ತೆ ಗೊತ್ತಾ..?


ಇಂಡೋ-ವಿಂಡೀಸ್​ ನಡುವೆ ಇಂದು ಅಂತಿಮ ಟಿ20 ಪಂದ್ಯ. ಒಂದೆಡೆ ಟೀಮ್​ ಇಂಡಿಯಾ ಕ್ಲೀನ್​ಸ್ವೀಪ್​ ಮೇಲೆ ಕಣ್ಣಿಟ್ಟಿದ್ರೆ, ಮತ್ತೊಂದೆಡೆ ಒಂದು ಪಂದ್ಯವನ್ನಾದರೂ ಗೆದ್ದು ಪ್ರವಾಸ ಮುಕ್ತಾಯಗೊಳಿಸಲು ವಿಂಡೀಸ್​​ ಪಣ ತೊಟ್ಟಿದೆ. ಹಾಗಾದ್ರೆ ಕೊನೆ ಟಿ20 ಕದನಕ್ಕೆ ಭಾರತ ತಂಡದಲ್ಲಿ ಆಗುವ ಬದಲಾವಣೆಗಳೇನು ನಿರೀಕ್ಷಿಸಲಾಗಿದೆ.

ವೆಸ್ಟ್​ ಇಂಡೀಸ್​ ವಿರುದ್ಧ ಟೀಮ್​ ಇಂಡಿಯಾ, ಟಿ20 ಸರಣಿ ಗೆದ್ದಿದೆ. ಒಂದು ಪಂದ್ಯ ಬಾಕಿ ಇರುವಂತೆಯೇ 2-0 ರಲ್ಲಿ ಸರಣಿ ವಶಪಡಿಸಿಕೊಂಡಿದೆ. ಇದೀಗ ಇಂದು ನಡೆಯಲಿರುವ 3ನೇ ಟಿ20 ಪಂದ್ಯದ ಸವಾಲಿಗೆ ರೋಹಿತ್​ ಪಡೆ ಸಜ್ಜಾಗ್ತಿದೆ. ಆ ಮೂಲಕ ವಿಂಡೀಸ್​​​​ ಎದುರು ಸರಣಿ ಕ್ಲೀನ್​ ಸ್ವೀಪ್​ ಸಾಧನೆಗೆ ಭಾರತ ಸಿದ್ಧವಾಗ್ತಿದೆ. ಅತ್ತ ವಿಂಡೀಸ್​ ಕೂಡ​ ಅಂತಿಮ ಪಂದ್ಯವನ್ನಾದ್ರೂ ಗೆದ್ದು ಮರ್ಯಾದೆ ಉಳಿಸಿಕೊಳ್ಳಲು ಪಣ ತೊಟ್ಟಿದೆ. ಹಾಗಾಗಿ ಈ ಪಂದ್ಯ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಅಲ್ಲದೆ ಭಾರತ ತಂಡದಲ್ಲಿ ಪ್ರಮುಖ ಬದಲಾವಣೆಗಳು ಆಗಲಿವೆ.

ಅಂತಿಮ ಟಿ20 ಪಂದ್ಯಕ್ಕೆ ಕೊಹ್ಲಿ, ಪಂತ್​ಗೆ ವಿಶ್ರಾಂತಿ..!
ಹೌದು..! ಅಂತಿಮ ಪಂದ್ಯಕ್ಕೆ ಮಾಜಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಮತ್ತು ವಿಕೆಟ್​ ಕೀಪರ್​ ರಿಷಭ್​ ಪಂತ್​ಗೆ ಬಿಸಿಸಿಐ ವಿಶ್ರಾಂತಿ ನೀಡಿದೆ. ಈಗಾಗಲೇ ಬಯೋಬಬಲ್​ ತೊರೆದಿರುವ ಕೊಹ್ಲಿ ಮತ್ತು ಪಂತ್​ 10 ದಿನಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ಒತ್ತಡ ಮತ್ತು ಮಾನಸಿಕ ಆರೋಗ್ಯ ಗಮನದಲ್ಲಿಟ್ಟುಕೊಂಡು ಎಲ್ಲ ಮಾದರಿ ಕ್ರಿಕೆಟ್‌ನಲ್ಲಿ ತಂಡವನ್ನು ಪ್ರತಿನಿಧಿಸುವ ಆಟಗಾರರಿಗೆ ವಿಶ್ರಾಂತಿ ನೀಡುವುದು ಬಿಸಿಸಿಐ ಉದ್ದೇಶವಾಗಿದೆ. ಹಾಗಾಗಿ ಈ ಇಬ್ಬರಿಗೆ ರೆಸ್ಟ್​ ನೀಡಿದೆ.

ಋತುರಾಜ್​ ಗಾಯಕ್ವಾಡ್​​ ಕಣಕ್ಕಿಳಿಯೋದು ಕನ್ಫರ್ಮ್​​..!
ತಂಡಕ್ಕೆ ಆಯ್ಕೆಯಾದ್ರೂ ಬೆಂಚ್​​​ಗೆ ಸೀಮಿತವಾಗ್ತಿದ್ದ ಯುವ ಆಟಗಾರ ಋತುರಾಜ್​ ಗಾಯಕ್ವಾಡ್​​, ಅಂತಿಮ ಟಿ20 ಕದನಕ್ಕೆ ಕಣಕ್ಕಿಳಿಯೋದು ಕನ್ಫರ್ಮ್​ ಆಗಿದೆ. ಇಶಾನ್​ ಕಿಶನ್​ ವೈಫಲ್ಯ ಅನುಭವಿಸ್ತಿದ್ರೂ, ಗಾಯಕ್ವಾಡ್​ಗೆ ಅವಕಾಶ ನೀಡದಿರೋದು ಮಾಜಿ ಕ್ರಿಕೆಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಹಾಗಾಗಿ ಈಗಾಗಲೇ ಸರಣಿ ಗೆದ್ದಿದ್ದೇವೆ. ಯುವ ಆಟಗಾರರಿಗೆ ಚಾನ್ಸ್​ ನೀಡಬೇಕೆಂದು ಮ್ಯಾನೇಜ್​ಮೆಂಟ್​ ಚಿಂತಿಸಿದೆ.

ಗಾಯಕ್ವಾಡ್​​ಗೆ ಅವಕಾಶ ಸಿಗಲು ಪ್ರಮುಖ ಕಾರಣವೇನೆಂದರೆ ಕೊಹ್ಲಿ ಮತ್ತು ಪಂತ್​​ ವಿಶ್ರಾಂತಿ ಪಡೀತಿರೋದು. ಕೊಹ್ಲಿ ಅಲಭ್ಯತೆಯಿಂದ ಶ್ರೇಯಸ್​​​ ಅಯ್ಯರ್​ ತಂಡದಲ್ಲಿ ಸ್ಥಾನ ಪಡೆಯೋ ಸಾಧ್ಯತೆ ಇದ್ರೆ, ಪಂತ್​ ಜಾಗದಲ್ಲಿ ಇಶಾನ್​ ಕಿಶನ್​ ವಿಕೆಟ್​ ಕೀಪಿಂಗ್​ ಜವಾಬ್ದಾರಿ ನಿಭಾಯಿಸಲಿದ್ದಾರೆ ಎನ್ನಲಾಗ್ತಿದೆ. ಇದ್ರಿಂದ ಇಶಾನ್​ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್​ ಬೀಸೋದು ಕನ್ಫರ್ಮ್ ಎಂದೇ ಹೇಳಲಾಗ್ತಿದೆ. ಆದ್ರೆ ಆರಂಭಿಕ ರೋಹಿತ್​​ಗೆ ಯಾರು ಸಾಥ್​​ ನೀಡೋರು ಇರೋದಿಲ್ಲ. ಹಾಗಾಗಿ ಋತುರಾಜ್​ಗೆ ಚಾನ್ಸ್​ ನೀಡಲು ನಿರ್ಧರಿಸಲಾಗಿದೆ. ಇನ್ನ ಆಲ್​ರೌಂಡರ್ ವಿಭಾಗದಲ್ಲಿ ವೆಂಕಟೇಶ್​ ಅಯ್ಯರ್​​​​​​ ಮುಂದುವರಿಯಲಿದ್ದು, ಭರ್ಜರಿ ಪ್ರದರ್ಶನ ನೀಡುವ ನಿರೀಕ್ಷೆ ಮೂಡಿಸಿದ್ದಾರೆ.

ಇವತ್ತಾದ್ರೂ ಪದಾರ್ಪಣೆ ಮಾಡ್ತಾರಾ ಆವೇಶ್​ ಖಾನ್​​..?
ಹೌದು..! ವೇಗಿ ಆವೇಶ್​ ಖಾನ್​ ಕಳೆದ ಸರಣಿಗಳಿಂದ ಆಯ್ಕೆಯಾದ್ರೂ ಆಡುವ 11ರ ಬಳಗದಲ್ಲಿ ಅವಕಾಶ ಪಡೆಯುತ್ತಿಲ್ಲ. ಹಾಗಾಗಿ ಇವತ್ತಾದ್ರೂ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡ್ತಾರಾ ಎಂಬ ಪ್ರಶ್ನೆ ಎದ್ದಿದೆ. ಜೊತೆಗೆ ಕ್ರಿಕೆಟ್​ ವಲಯದಲ್ಲಿ ಕೂಡ ಆವೇಶ್​​ಗೆ ಅವಕಾಶ ನೀಡದೇ ಇರೋದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಹಾಗಾಗಿ ದೀಪಕ್​ ಚಹರ್​ ಬದಲಿಗೆ ಆವೇಶ್​ ಖಾನ್​​ರನ್ನ ಕಣಕ್ಕಿಳಿಸಲು ಮುಂದಾಗಿದೆ ಮ್ಯಾನೇಜ್ಮೆಂಟ್​.

ಸಾಕಷ್ಟು ಬಲಿಷ್ಠವಾಗಿದೆ ಟೀಮ್​ ಇಂಡಿಯಾ ಬೌಲಿಂಗ್​ ಯೂನಿಟ್​​
ಹೌದು..! ಟೀಮ್​ ಇಂಡಿಯಾ ಬೌಲಿಂಗ್​ ಯೂನಿಟ್​ ಸಖತ್​ ಬಲಿಷ್ಠವಾಗಿದೆ. ಇದಕ್ಕೆ ಬೆಸ್ಟ್​​​ ಎಕ್ಸಾಂಪಲ್​ ವಿಂಡೀಸ್​ ವಿರುದ್ಧ ಏಕದಿನ ಮತ್ತು ಟಿ20 ಸರಣಿ. ಘಟಾನುಘಟಿ ಬ್ಯಾಟ್ಸ್​​ಮನ್​ಗಳಿಗೇ ಭಾರತದ ಬೌಲರ್​ಗಳು ಚಳ್ಳೆಹಣ್ಣು ತಿನ್ನಿಸಿದ್ದಾರೆ. ಅಲ್ಲದೆ, ಅಲ್ಪಮೊತ್ತವನ್ನೂ ಡಿಪೆಂಡ್​ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಏಕದಿನ ಸರಣಿಯಲ್ಲಿ ಪ್ರಸಿದ್ಧ್​ ಕೃಷ್ಣ ಮಿಂಚಿದ್ರೆ, ಟಿ20 ಸರಣಿಯಲ್ಲಿ ಭುವನೇಶ್ವರ್​​ ಸ್ವಿಂಗ್​ ವರ್ಕೌಟ್​ ಆಗಿದೆ.
ಎರಡೂ ಸರಣಿಗಳಲ್ಲಿ ಯಜುವೇಂದ್ರ ಚಹಲ್​ ಕೂಡ ಮ್ಯಾಜಿಕ್​ ಮಾಡಿದ್ದಾರೆ. ಡೆಬ್ಯೂಟೆಂಟ್​ ರವಿ ಬಿಷ್ಣೋಯ್​​ ಗೂಗ್ಲಿ ಸ್ಪಿನ್​​ ಮೂಲಕ ಗಮನ ಸೆಳೆದಿದ್ದಾರೆ. ಹರ್ಷಲ್​ ಪಟೇಲ್​ ಮತ್ತು ದೀಪಕ್​ ಚಹರ್ ಕಳೆದ ಪಂದ್ಯದಲ್ಲಿ ಕೊಂಚ ದುಬಾರಿಯಾದ್ರೂ, ಅದ್ಭುತ ಸ್ಪೆಲ್​ ಮಾಡಿದ್ದಾರೆ. ಆದ್ರೆ ಈ ಇಬ್ಬರಲ್ಲಿ ಒಬ್ಬರನ್ನ ಬೆಂಚ್​ ಕಾಯ್ಸಿಸೋ ಸಾಧ್ಯತೆ ಇದೆ ಎನ್ನಲಾಗ್ತಿದೆ. ಹಾಗೇ ಸ್ಪಿನ್​ ವಿಭಾಗದಲ್ಲಿ ಕುಲ್ದೀಪ್ ಯಾದವ್​ ಅವಕಾಶ ಪಡೆಯೋ ಸಾಧ್ಯತೆ ಹೆಚ್ಚಿದೆ.

ಎಚ್ಚರ ತಪ್ಪಿದರೆ ಟೀಮ್​ ಇಂಡಿಯಾಗೆ ಅಪಾಯ ಗ್ಯಾರಂಟಿ..!
ಏಕದಿನ ಮತ್ತು ಟಿ20 ಸರಣಿ ಸೋತಿರುವ ವಿಂಡೀಸ್​, ಇವತ್ತಿನ ಪಂದ್ಯ ಗೆಲ್ಲಲು ಪಣ ತೊಟ್ಟಿದೆ. ಏಕದಿನ ಮತ್ತು ಟಿ20 ಸರಣಿಯಲ್ಲಿ ವಿಂಡೀಸ್​ ಅದ್ಭುತ ಪ್ರದರ್ಶನವನ್ನೇ ನೀಡಿದೆ. ಆದ್ರೆ ತೀರಾ ಸಮೀಪಕ್ಕೆ ಬಂದು ಸೋಲನುಭವಿಸಿದೆ. ಇದಕ್ಕೆ ಕಾರಣ ಆಟಗಾರರಲ್ಲಿ ಇರುವ ಒತ್ತಡ. ಏಕೆಂದ್ರೆ IPL​ ಫ್ರಾಂಚೈಸಿಗಳು ವಿಂಡೀಸ್ ಆಟಗಾರರ ಮೇಲೆ ಕೋಟಿ ಕೋಟಿ ಬಂಡವಾಳ ಸುರಿದಿವೆ. ಹೀಗಾಗಿ ಫ್ರಾಂಚೈಸಿಗಳ ನಂಬಿಕೆ ಉಳಿಸಿಕೊಳ್ಳಲು ನಡೆಸಿದ ಪ್ರಯತ್ನದಲ್ಲಿ ವಿಫಲರಾಗಿದ್ದು, ಒತ್ತಡದಲ್ಲಿ ವಿಂಡೀಸ್​ ಆಟಗಾರರು ಎಡವಿದ್ದಾರೆ.

ಹಾಗಂತ ಕೊನೇ ಟಿ20 ಪಂದ್ಯದಲ್ಲಿ ಟೀಮ್​ ಇಂಡಿಯಾ, ಎಚ್ಚರ ತಪ್ಪಿರೆ ಅಪಾಯ ಗ್ಯಾರಂಟಿ. ಸ್ಪಲ್ಪ ಯಾಮಾರಿದ್ರೆ 2ನೇ ಟಿ20 ಪಂದ್ಯವನ್ನ ವಿಂಡೀಸ್​​​ ಗೆದ್ದು ಬೀಗುತ್ತಿತ್ತು. ಬೌಲಿಂಗ್​ ಬ್ಯಾಟಿಂಗ್​​​ನಲ್ಲಿ ಆಟಗಾರರು ಅದ್ಭುತ ಫಾರ್ಮ್​​ನಲ್ಲಿದ್ದಾರೆ. ಹಾಗಾಗಿ ಈ ಹಿಂದಿನ ಪಂದ್ಯಗಳಲ್ಲಿ ಹೇಗೆ ಗೇಮ್​ ಪ್ಲಾನ್​ಗಳನ್ನ ರೂಪಿಸಲಾಗಿತ್ತೋ ಅದೇ ರೀತಿ ಪ್ಲಾನ್​ಗಳನ್ನ ಎಕ್ಸಿಕ್ಯೂಟ್​ ಮಾಡಬೇಕು. ಇಲ್ಲವಾದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ. ಹೀಗಾಗಿ ನಾಯಕ ರೋಹಿತ್​​ ಪಡೆ ಎಚ್ಚರಿಕೆ ಹೆಜ್ಜೆ ಇಡೋದು ಅನಿವಾರ್ಯ.

News First Live Kannada


Leave a Reply

Your email address will not be published. Required fields are marked *