ಕೊಹ್ಲಿ, ಪಾಕ್​​​ ತಂಡದ ನಾಯಕ ಬಾಬರ್​​ ನಡುವಿನ ವ್ಯತ್ಯಾಸ ಬಿಚ್ಚಿಟ್ಟ ಹೇಡನ್; ಏನಂದ್ರು?


ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಮತ್ತು ಟೀಂ ಇಂಡಿಯಾ ಕ್ಯಾಪ್ಟನ್​​​​​ ವಿರಾಟ್ ಕೊಹ್ಲಿ ನಡುವಿನ ವ್ಯತ್ಯಾಸವನ್ನು ಪಾಕ್​​​ ಬ್ಯಾಟಿಂಗ್ ಕೋಚ್​​ ಮ್ಯಾಥ್ಯೂ ಹೇಡನ್ ಬಿಚ್ಚಿಟ್ಟಿದ್ದಾರೆ. ಈ ಸಂಬಂಧ ಮಾತಾಡಿದ ಮ್ಯಾಥ್ಯೂ ಹೇಡನ್, ಅನುಭವ ಮತ್ತು ರೆಕಾರ್ಡ್ಸ್​​​ ವಿಚಾರದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್​​​​ ಕೊಹ್ಲಿ ಅವರೇ ದಿಗ್ಗಜ. ಆದರೆ, ಬಾಬರ್​​​​ ತುಂಬಾ ಶಾಂತ ರೀತಿಯ ಗುಣಲಕ್ಷಣಗಳನ್ನು ಹೊಂದಿರುವ ಆಟಗಾರ ಎಂದಿದ್ದಾರೆ.

ಬಾಬರ್​​​ ಅಜಮ್​​​ ಅದ್ಭುತ ನಾಯಕ. ಈತ ತುಂಬಾ ಟೆಂಪರ್‌. ಆದ್ದರಿಂದಲೇ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದಾರೆ. ಇವರು ಉತ್ತಮ ನಿಯಂತ್ರಣ ಮತ್ತು ಅದ್ಭುತ ಮನೋಧರ್ಮ ಹೊಂದಿದ್ದಾರೆ ಎಂದು ಹೇಳಿದರು.

ಇನ್ನು, ಪಾಕ್​​ ತಂಡದ ನಾಯಕ ಬಾಬರ್​​ ಪ್ರತಿಭೆ ಬಗ್ಗೆ ಸುಲಭವಾಗಿ ವರ್ಣಿಸಲು ಸಾಧ್ಯವಿಲ್ಲ. ಚೆಂಡನ್ನು ಬೌಂಡರಿಗೆ ಹೊಡೆಯಲು ಬೇಕಾದ ಸಾಮರ್ಥ್ಯ ನಾನು ನೋಡಿದಕ್ಕಿಂತಲೂ ಬಹಳ ಭಿನ್ನ. ಇದು ಒಬ್ಬ ಉತ್ತಮ ಆಟಗಾರನ ಗುರುತು ಎಂದು ಹಾಡಿ ಹೊಗಳಿದರು.

News First Live Kannada


Leave a Reply

Your email address will not be published.