‘ಕೊಹ್ಲಿ ಬದಲಿಗೆ ಏಕದಿನಕ್ಕೂ ರೋಹಿತ್​​ ಶರ್ಮಾರನ್ನೇ ಕ್ಯಾಪ್ಟನ್​​ ಮಾಡಿ’- ಬಿಸಿಸಿಐಗೆ ಫ್ಯಾನ್ಸ್​ ಒತ್ತಾಯ


ರೋಹಿತ್‌ ಶರ್ಮಾ ಅವರನ್ನೇ ಓಡಿಐ ತಂಡದ ನಾಯಕನನ್ನಾಗಿ ನೇಮಿಸಿ ಎಂದು ಅಭಿಮಾನಿಗಳು ಸೋಶಿಯಲ್‌ ಮೀಡಿಯಾದಲ್ಲಿ ಬಿಸಿಸಿಐಗೆ ಆಗ್ರಹಿಸಿದ್ದಾರೆ. ನ್ಯೂಜಿಲೆಂಡ್‌ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಭಾರತ ತಂಡ 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡ ಬೆನ್ನಲ್ಲೆ ಈ ಕೂಗು ಕೇಳಿ ಬಂದಿದೆ.

ಟಿ20 ಸರಣಿಯನ್ನು ಗೆದ್ದು ಕೊಳ್ಳುತ್ತಿದ್ದಂತೆ ರೋಹಿತ್‌ ಶರ್ಮಾ ನಾಯಕತ್ವವನ್ನು ಅಭಿಮಾನಿಗಳು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಅಷ್ಟೇ ಅಲ್ಲದೆ, ರೋಹಿತ್‌ ಶರ್ಮಾ ಅವರನ್ನೇ ಭಾರತ ಓಡಿಐ ತಂಡಕ್ಕೂ ನಾಯಕನನ್ನಾಗಿ ನೇಮಕ ಮಾಡಬೇಕೆಂದು ಕೆಲವರು ಬಿಸಿಸಿಐಗೆ ಆಗ್ರಹಿಸಿದ್ದಾರೆ.

ಅತ್ಯುತ್ತಮ ನಾಯಕತ್ವ ಹಾಗೂ ಫಾರ್ಮ್‌ನಿಂದಾಗಿ ರೋಹಿತ್‌ ಶರ್ಮಾ ಖಂಡಿತವಾಗಿ ಬಿಸಿಸಿಐ ಆಯ್ಕೆದಾರರ ಗಮನ ಸೆಳೆದಿದ್ದಾರೆ. 2023ರ ಐಸಿಸಿ ಏಕದಿನ ವಿಶ್ವಕಪ್‌ ಹಿನ್ನೆಲೆಯಲ್ಲಿ ಭಾರತ ಓಡಿಐ ತಂಡದ ನಾಯಕತ್ವದ ಬಗ್ಗೆಯೂ ರೋಹಿತ್‌ ಪರಿಗಣಿಸುವ ಬಗ್ಗೆ ಬಿಸಿಸಿಐ ಗಂಭೀರ ಚಿಂತನೆ ನಡೆಸಬಹುದು. ಇದನ್ನು ಗಮನದಲ್ಲಿಟ್ಟುಕೊಂಡು ಅಭಿಮಾನಿಗಳು ಕೊಹ್ಲಿ ಬದಲು ರೋಹಿತ್‌ ಅವರನ್ನೇ ಓಡಿಐ ನಾಯಕತ್ವದಲ್ಲಿ ಮುಂದುವರಿಸಿ ಎಂದು ಹೇಳಿದ್ದಾರೆ.

The post ‘ಕೊಹ್ಲಿ ಬದಲಿಗೆ ಏಕದಿನಕ್ಕೂ ರೋಹಿತ್​​ ಶರ್ಮಾರನ್ನೇ ಕ್ಯಾಪ್ಟನ್​​ ಮಾಡಿ’- ಬಿಸಿಸಿಐಗೆ ಫ್ಯಾನ್ಸ್​ ಒತ್ತಾಯ appeared first on News First Kannada.

News First Live Kannada


Leave a Reply

Your email address will not be published. Required fields are marked *