ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವ ತ್ಯಜಿಸಿದ ಬೆನ್ನಲ್ಲೇ ಮುಂದಿನ ನಾಯಕ ಯಾರು ಎಂಬ ಚರ್ಚೆ ಹುಟ್ಟಿಕೊಂಡಿದೆ. ಜೊತೆಗೆ ಬಿಸಿಸಿಐ ಮಾಸ್ಟರ್ ಪ್ಲಾನ್ ಏನು ಎಂಬ ನಡೆ ಕೂಡ ನಿಗೂಢವಾಗಿದೆ. ಯಾವ ಮಾನದಂಡದಲ್ಲಿ ಟೆಸ್ಟ್ ತಂಡದ ನಾಯಕನನ್ನು ಆರಿಸಲಾಗುತ್ತೆ ಅನ್ನೋದು ಕೂಡ ಕುತೂಹಲ ಮೂಡಿಸಿದೆ.
ಸದ್ಯ ಎಲ್ಲರಿಗೂ ಕಾಡ್ತಿರುವ ದೊಡ್ಡ ಪ್ರಶ್ನೆ ಟೆಸ್ಟ್ ತಂಡಕ್ಕೆ ಮುಂದಿನ ನಾಯಕ ಯಾರು ಅನ್ನೋದು. ವಿರಾಟ್ ಕೊಹ್ಲಿ ದಿಢೀರ್ ನಿವೃತ್ತಿ ಎಲ್ಲರನ್ನೂ ಆಘಾತಕ್ಕೆ ತಳ್ಳಿದೆ. ಬಿಸಿಸಿಐ ಕೂಡ ಹಠಾತ್ ನಿರ್ಧಾರಕ್ಕೆ ಅಚ್ಚರಿಗೊಳಗಾಗಿದೆ. ಹೀಗಾಗಿ ಮುಂದಿನ ನಾಯಕನನ್ನ ಆರಿಸಲು ಸಾಕಷ್ಟು ಸಮಾಲೋಚನೆ ನಡೆಸಲು ನಿರ್ಧರಿಸಿದೆ.
ಟೆಸ್ಟ್ ತಂಡಕ್ಕೂ ರೋಹಿತ್ ಶರ್ಮಾನೇ ಕ್ಯಾಪ್ಟನ್..?
ಕೊಹ್ಲಿ ಕೆಳಗಿಳಿದ ಬಳಿಕ ಏಕದಿನ ಮತ್ತು ಟಿ20 ತಂಡಕ್ಕೆ ನಾಯಕನಾಗಿರುವ ರೋಹಿತ್ ಶರ್ಮಾನೇ ಟೆಸ್ಟ್ ತಂಡದ ಸಾರಥ್ಯ ವಹಿಸಿಕೊಳ್ಳಿದ್ದಾರೆ ಎನ್ನಲಾಗ್ತಿದೆ. ಈಗಾಗಲೇ ರೋಹಿತ್ ಶರ್ಮಾ ಟೆಸ್ಟ್ ತಂಡದ ಉಪನಾಯಕನಾಗಿದ್ದು, ಅವರೇ ಇದಕ್ಕೆ ಸೂಕ್ತ ಅನ್ನೋ ನಿರ್ಧಾರಕ್ಕೂ ಬಿಸಿಸಿಐ ಬಂದಿದೆ ಎಂಬ ಮಾಹಿತಿ ಇದೆ.
ಪೈಪೋಟಿಯಲ್ಲಿದ್ದಾರೆ ರಾಹುಲ್, ಪಂತ್..?
ಒಂದೆಡೆ ಅನುಭವಿ ರೋಹಿತ್ ಶರ್ಮಾಗೆ ಮಣೆ ಹಾಕುವ ನಿರ್ಧಾರವಾದ್ರೆ, ಮತ್ತೊಂದೆಡೆ ಭವಿಷ್ಯದ ದೃಷ್ಟಿಯಿಂದ ಕೆ.ಎಲ್.ರಾಹುಲ್, ರಿಷಭ್ ಪಂತ್ ಅಥವಾ ವೇಗಿ ಜಸ್ಪ್ರಿತ್ ಬೂಮ್ರಾರಲ್ಲಿ ಒಬ್ಬರಿಗೆ ಜವಾಬ್ದಾರಿ ವಹಿಸುವ ಸಾಧ್ಯತೆ ಇದೆ. ರಾಹುಲ್ಗೆ ಸಿಮೀತ ಓವರ್ಗಳ ಉಪನಾಯಕನಾಗಿರೋ ಕಾರಣ, ಟೆಸ್ಟ್ಗೆ ನಾಯಕನನ್ನಾಗಿ ಮಾಡಿದರೂ ಅಚ್ಚರಿ ಇಲ್ಲ.