ಚೊಚ್ಚಲ ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್ ಫೈನಲ್​ ಫೈಟ್​​ಗೆ ಕೌಂಟ್​​ಡೌನ್ ಸ್ಟಾರ್ಟ್​ ಆಗಿದೆ. ಸೌತ್​ಹ್ಯಾಂಪ್ಟನ್​ನಲ್ಲಿ ನಡೆಯೋ ಹೈವೋಲ್ಟೆಜ್​ ಫೈಟ್​ನಲ್ಲಿ ಗೆದ್ದು ಬೀಗೋ ಲೆಕ್ಕಾಚಾರದಲ್ಲಿ ನ್ಯೂಜಿಲೆಂಡ್​ ಹಾಗೂ ಟೀಮ್​ ಇಂಡಿಯಾ ಎರಡೂ ತಂಡಗಳಿವೆ. ಇತಿಹಾಸದಲ್ಲೇ ಚೊಚ್ಚಲ ಐಸಿಸಿ ಟ್ರೋಫಿ ಗೆಲ್ಲಲು ಪಣತೊಟ್ಟಿರುವ ಕೇನ್​ ವಿಲಿಯಮ್​ಸನ್​ ನೇತೃತ್ವದ ನ್ಯೂಜಿಲೆಂಡ್​ ತಂಡ, ಇಂಗ್ಲೆಂಡ್​ ವಿರುದ್ಧದ ಸರಣಿಯೊಂದಿಗೆ ಕಠಿಣ ತಯಾರಿ ಆರಂಭಿಸಿದೆ. ಇದೀಗ ಇಂಗ್ಲೆಂಡ್​ ತಲುಪಿರುವ ಟೀಮ್​ ಇಂಡಿಯಾ ಆಟಗಾರರು ಕಠಿಣ ಕ್ವಾರಂಟೀನ್​ಗೆ ಒಳಗಾಗಿದ್ದಾರೆ.

ಹೇಗಿತ್ತು ಕ್ರಿಕೆಟಿಗರ ಮುಂಬೈ ಟು ಸೌತಾಂಪ್ಟನ್​ ಜರ್ನಿ..?
ಜೂನ್ 2ರ ತಡರಾತ್ರಿ ಮುಂಬೈನಲ್ಲಿ ವಿಶೇಷ ಫ್ಲೈಟ್​ ಏರಿದ ಟೀಮ್​ ಇಂಡಿಯಾ ಕ್ರಿಕೆಟಿಗರ ವಿಮಾನ ಇಂಗ್ಲೆಂಡ್​ ತಲುಪಿದ್ದು ಜೂನ್​ 3ರ ಸಂಜೆ ವೇಳೆಗೆ. ಆ ಬಳಿಕ ಸೌತಾಂಪ್ಟನ್​ಗೆ 2 ಗಂಟೆಗಳ ಕಾಲ ಬಸ್​ ಜರ್ನಿ. ಇದು ಟೀಮ್​ ಇಂಡಿಯಾ ಆಟಗಾರರ ಜರ್ನಿಯ ಕ್ವಿಕ್​ ಲಿಕ್​.. ಹೇಗಿತ್ತು ಅನ್ನೋದನ್ನ ಈ ವಿಡಿಯೋದಲ್ಲಿ ನೀವೇ ನೋಡಿ..

ಸೌತಾಂಪ್ಟನ್​ ತಲುಪಿದ ಟೀಮ್​ ಇಂಡಿಯಾಗೆ ಕಠಿಣ ಕ್ವಾರಂಟೀನ್​..!
ಮುಂಬೈನಿಂದ ಒಟ್ಟಿಗೆ ಪ್ರಯಾಣ, ಇಂಗ್ಲೆಂಡ್​ನಲ್ಲಿ ಬೇರೆ ಬೇರೆ ವಾಸ..!

ಪ್ರತಿಷ್ಠೆಯ ಸರಣಿಯನ್ನಾಡುವ ಕನಸಿನೊಂದಿಗೆ ಮುಂಬೈನಿಂದ ಹೊರಟ ಟೀಮ್​ ಇಂಡಿಯಾ ಆಟಗಾರರು ಒಂದೇ ಚಾರ್ಟೆಡ್​ ಫ್ಲೈಟ್​​ನಲ್ಲಿ ತೆರಳಿದ್ರು. ವನಿತೆಯರ ತಂಡವೂ ಕೊಹ್ಲಿ ಪಡೆಯೊಂದಿಗೆ ಆಂಗ್ಲರ ನಾಡಿಗೆ ಪ್ರಯಾಣ ಬೆಳೆಸಿತು. ಆದ್ರೆ, ಸೌತಾಂಪ್ಟನ್​ ತಲುಪಿದ ಬೆನ್ನಲ್ಲೇ ಪ್ರತಿಯೊಬ್ಬರು ದೂರವಾಗಬೇಕಾಯ್ತು. ಇಂಗ್ಲೆಂಡ್​ ಸರಕಾರದ ಕಠಿಣ ಕ್ವಾರಂಟೀನ್​ ನಿಯಮದ ಪ್ರಕಾರ ಇನ್ನೂ ಮೂರು ದಿನಗಳ ಕಾಲ ಎಲ್ಲಾ ಆಟಗಾರರು ಪ್ರತ್ಯೇಕ ವಾಸವನ್ನ ಮಾಡಬೇಕಿದೆ. ಆ ಬಳಿಕವಷ್ಟೇ ಆಟಗಾರರಿಗೆ ಮತ್ತೇ ಒಟ್ಟಿಗೆ ಬೆರೆಯೋ ಅವಕಾಶ ಸಿಗೋದು.

ಮೇ 25ರಿಂದಲೇ ಆರಂಭವಾಗಿದೆ ಕಠಿಣ ಕ್ವಾರಂಟೀನ್​..!
ಅಸಲಿಗೆ ಟೀಮ್​ ಇಂಡಿಯಾ ಆಟಗಾರರ ಕಠಿಣ ಕ್ವಾರಂಟೀನ್​ ಆರಂಭವಾಗಿರೋದು ಸೌತಾಂಪ್ಟನ್​ನಲ್ಲಲ್ಲ. ಮೇ 25 ರಿಂದ ದುಬೈನಲ್ಲೇ ಆರಂಭವಾಗಿದೆ. ಈಗ ಆಂಗ್ಲರ ನಾಡಲ್ಲಿರೋ ಪ್ಲೇಯರ್ಸ್​ ಇಂಗ್ಲೆಂಡ್​​ ಫ್ಲೈಟ್​​ ಹತ್ತೋ ಮುನ್ನ ಮುಂಬೈನಲ್ಲಿ 8 ದಿನಗಳ ಕಠಿಣ ಕ್ವಾರಂಟೀನ್​ಗೆ ಒಳಗಾಗಿದ್ರು. ಮುಂಬೈ ವಿಮಾನ ನಿಲ್ದಾಣ ಸಮೀಪದ ಗ್ರ್ಯಾಂಡ್ ಹಯಾತ್ ಹೋಟೆಲ್‌ನಲ್ಲಿ ಪ್ರತ್ಯೇಕವಾಗಿದ್ದ ತಂಡ, ಕ್ವಾರಂಟೀನ್ ಅವಧಿಯಲ್ಲಿ ನಡೆಯುವ ಮೂರು ಕೊರೊನಾ ಪರೀಕ್ಷೆಗೂ ಒಳಗಾಗಿತ್ತು.

ಮುಂಬೈನಲ್ಲಿ ಟೀಮ್​ ಇಂಡಿಯಾ ಕ್ವಾರಂಟೀನ್​ಗೆ ಒಳಗಾಗಿದ್ರೂ ಸಮರಾಭ್ಯಾಸ ಮಾತ್ರ ನಿಂತಿರಲಿಲ್ಲ. ಕ್ವಾರಂಟೀನ್​ ಸಮಯದಲ್ಲಿ ಜಿಮ್​ನಲ್ಲಿ ಬೆವರು ಹರಿಸಿದ್ದ ಕೊಹ್ಲಿ ಬಾಯ್ಸ್,​​ ಫಿಟ್​ನೆಸ್​ನತ್ತ ಗಮನಹರಿಸಿದ್ರು. ಹೋಟೆಲ್​​ನಲ್ಲೇ ಅಳವಡಿಸಿದ್ದ ಸುಸಜ್ಜಿತ ಜಿಮ್​ನಲ್ಲಿ ಟೀಮ್​ ಇಂಡಿಯಾ ಪ್ಲೇಯರ್ಸ್​​​ ಬೆವರು ಹರಿಸಿದ್ರು.

ಕೊಹ್ಲಿ ಬಾಯ್ಸ್​ ಮಾತ್ರವಲ್ಲ, ಅದೇ ಹೋಟೆಲ್​ನಲ್ಲಿ ಟೀಮ್​ ಇಂಡಿಯಾ ವನಿತೆಯರ ತಂಡವೂ ಕ್ವಾರಂಟೀನ್​ಗೆ ಒಳಗಾಗಿತ್ತು. ಇಂಗ್ಲೆಂಡ್​ನಲ್ಲಿ ಮಹತ್ವದ ಏಕೈಕ ಟೆಸ್ಟ್​ ಪಂದ್ಯ ಹಾಗೂ ಏಕದಿನ, ಟಿ20 ಸರಣಿಯನ್ನಾಡಲಿರುವ ವನಿತೆಯರ ತಂಡವೂ ಫಿಟ್​​ನೆಸ್​​ಗೆ ಒತ್ತು ನೀಡಿತ್ತು. ಒಟ್ಟಿನಲ್ಲಿ.. ಪ್ರತಿಷ್ಠೆಯ ಕದನಕ್ಕೆ ಭಾರತದಲ್ಲಿ ಭರ್ಜರಿ ಕಸರತ್ತು ನಡೆಸಿದ ಟೀಮ್​ ಇಂಡಿಯಾ ಈಗ ಆಂಗ್ಲರ ನಾಡಿಗೆ ಕಾಲಿಟ್ಟಿದೆ. ಈಗೇನಿದ್ರೂ 3 ದಿನಗಳ ಕಠಿಣ ಕ್ವಾರಂಟೀನ್​ ಬಳಿಕ ನಡೆಯಲಿರುವ ಗೇಮ್​ಪ್ಲಾನ್​, ಸ್ಟಾರ್ಟಜಿ ಮೀಟಿಂಗ್​, ಅಭ್ಯಾಸ ಪಂದ್ಯಗಳು ಮೇಲೆ ಕುತೂಹಲ ಮೂಡಿದೆ.

The post ಕೊಹ್ಲಿ ಬಾಯ್ಸ್​ ಮುಂಬೈ To ಸೌತಾಂಪ್ಟನ್ ಜರ್ನಿ ಹೇಗಿತ್ತು ಗೊತ್ತಾ..? appeared first on News First Kannada.

Source: newsfirstlive.com

Source link