ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ವಿಚಾರದ ಕುರಿತು ಪಾಕಿಸ್ತಾನದ ಮಾಜಿ ಕ್ರಿಕಟಿಗ ಮುಷ್ತಾಕ್ ಅಹಮದ್ ಕಾಮೆಂಟ್ ಮಾಡಿದ್ದಾರೆ. ವಿರಾಟ್ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿರುವುದು ನೋಡಿದರೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಅನುಮಾನ ಮೂಡುತ್ತಿದೆ ಎಂದಿದ್ದಾರೆ.
ಒಬ್ಬ ಯಶಸ್ವಿ ನಾಯಕನು ತನ್ನ ಸ್ಥಾನವನ್ನು ಬಿಟ್ಟುಕೊಡುವುದು ಅಂದರೆ ಏನು? ಇದು ಟೀಮ್ ಇಂಡಿಯಾದ ಡ್ರೆಸಿಂಗ್ ರೂಮ್‌ನಲ್ಲಿ ಎರಡು ಗುಂಪುಗಳಿವೆ ಎಂಬ ಅನುಮಾನ ಮೂಡಿಸುತ್ತದೆ. ಅವು ಮುಂಬೈ ಮತ್ತು ದೆಹಲಿ ಗುಂಪುಗಳು ಎನ್ನಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಟಿ20 ಕ್ರಿಕೆಟ್‌ಗೂ ಕೊಹ್ಲಿ ಸದ್ಯದಲ್ಲೇ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ. ಆದರೆ, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಾತ್ರ ಮುಂದುವರಿಯಬಹುದು. ಟೀಮ್ ಇಂಡಿಯಾ ವಿಶ್ವಕಪ್ ಟೂರ್ನಿಯಲ್ಲಿ ವೈಫಲ್ಯಕ್ಕೆ ಐಪಿಎಲ್ ಟೂರ್ನಿಯೇ ಕಾರಣ ಎಂದು ಹೇಳಿದರು.
The post ‘ಕೊಹ್ಲಿ ಯಶಸ್ವಿ ನಾಯಕ; ಇವರ ರಾಜೀನಾಮೆಗೆ ಆ ಎರಡು ಗುಂಪುಗಳೇ ಕಾರಣ’- ಹೀಗಂದಿದ್ದು ಯಾರು? appeared first on News First Kannada.