ಕೊಹ್ಲಿ-ರೋಹಿತ್​​ ಅಲ್ಲ, ಸಿರಾಜ್​​ ಫಾಲೋ ಮಾಡ್ತಿರೋದು ಒಬ್ಬರನ್ನಷ್ಟೇ..!


ರಾಯಲ್​ ಚಾಲೆಂಜರ್ಸ್​ ಬೆಂಗಳೂರು ವಿರಾಟ್​ ಕೊಹ್ಲಿ, ಮ್ಯಾಕ್ಸ್​ ವೆಲ್​​ ಜತೆಗೆ ಮೊಹಮ್ಮದ್​ ಸಿರಾಜ್​ ಅವರನ್ನು ರಿಟೈನ್​​ ಮಾಡಿಕೊಂಡಿದೆ. ಇದಕ್ಕೆ ತನ್ನ ಮೇಲೆ ನಂಬಿಕೆ ಇಟ್ಟು ರಿಟೈನ್​ ಮಾಡಿಕೊಂಡ ವಿರಾಟ್​​ ಕೊಹ್ಲಿ ಮತ್ತು ಆರ್​​ಸಿಬಿ ಫ್ರಾಂಚೈಸಿಗೆ ಸಿರಾಜ್​ ಥ್ಯಾಂಕ್ಸ್​ ಎಂದಿದ್ದಾರೆ.

ಆರ್​​ಸಿಬಿ ವಿಚಾರವಾಗಿ ಸದಾ ಒಂದಲ್ಲ ಮತ್ತೊಂದು ಸುದ್ದಿಯಲ್ಲಿರೋ ಸಿರಾಜ್​ ಈಗ ಇನ್ನೊಂದು ಸುದ್ದಿಯಲ್ಲಿದ್ದಾರೆ. ಹೌದು, ಸಿರಾಜ್​​ಗೆ ಫೇಸ್ಬುಕ್​​ ಫಾಲೋವರ್ಸ್​ ಬರೋಬ್ಬರಿ 1.3 ಮಿಲಿಯನ್​​ ಇದ್ದರೂ, ಇವರು ಮಾತ್ರ ಫಾಲೋ ಮಾಡ್ತಿರೋದು ಒಂದೇ ತಂಡ. ಅದು ಟೀಂ ಇಂಡಿಯಾ ತಂಡದ ಅಧಿಕೃತ ಸೋಷಿಯಲ್​ ಮೀಡಿಯಾ ಅಕೌಂಟ್​​ ಅಲ್ಲ. ಬದಲಿಗೆ ತಾನು ಹೆಚ್ಚು ಇಷ್ಟ ಪಡೋ ಏಕೈಕ ಐಪಿಎಲ್​​ ತಂಡ ಆರ್​ಸಿಬಿಯನ್ನ.

ಆರ್​​ಸಿಬಿಗೂ ಸಿರಾಜ್​​ಗೂ ಒಂದಲ್ಲ ಒಂದು ರೀತಿ ಅವಿನಾಭಾವ ಸಂಬಂಧ. ಹೀಗಾಗಿಯೇ ಇಷ್ಟು ಆಟಗಾರರು ಇದ್ದರೂ ಆರ್​​ಸಿಬಿ ಮಾತ್ರ ಈ ಬಾರಿ ಸಿರಾಜ್​​ನನ್ನು ರಿಟೈನ್​ ಮಾಡಿಕೊಂಡಿದೆ. ಹೀಗಾಗಿ ಸಿರಾಜ್​​ ಕೇವಲ ಆರ್​​ಸಿಬಿಯನ್ನು ಮಾತ್ರ ಫಾಲೋ ಮಾಡ್ತಿದ್ದಾರೆ.

ಇದು ಆರ್​​ಸಿಬಿ ಅಭಿಮಾನಿಗಳು ಬೇಸರವೂ ಮೂಡಿಸಿದೆ. ಏಕೆಂದರೆ ಸಿರಾಜ್​ಗೆ ಲೈಫ್​​ ಕೊಟ್ಟಿದ್ದೇ ಕೊಹ್ಲಿ. ಆದರೆ ಕೊಹ್ಲಿಯನ್ನೇ ಬಿಟ್ಟು ಕೇವಲ ಆರ್​​ಸಿಬಿ ತಂಡವನ್ನು ಫಾಲೋ ಮಾಡ್ತಿರೋದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

​​

News First Live Kannada


Leave a Reply

Your email address will not be published. Required fields are marked *