ಕ್ರಿಕೆಟ್​ ಎಂಬ ಧರ್ಮಕ್ಕೊಂದು ದೇಗುಲ, ಭಾರತ..! ಈ ಮಾತು ಅಚ್ಚರಿ ಎನಿಸಿದರೂ ಸತ್ಯ. ಅಷ್ಟರ ಮಟ್ಟಿಗೆ ಭಾರತದಲ್ಲಿ ಕ್ರಿಕೆಟ್​​ ಜನಪ್ರಿಯತೆ ಪಡೆದುಕೊಂಡಿದೆ. ಈ ಜನಪ್ರಿಯತೆಗೆ ಕಾರಣ, ಸೌರವ್​ ಗಂಗೂಲಿ. ದಾದಾ ಸೃಷ್ಟಿಸಿದ ಹೊಸ ಮನ್ವಂತರಕ್ಕೆ ಮತ್ತಷ್ಟು ಮೆರುಗು ತಂದ MS ಧೋನಿ, ಭಾರತವನ್ನು ವಿಶ್ವಕ್ಕೆ ಅಧಿಪತಿಯಾಗಿಸಿದರು. ಇದೀಗ ಧೋನಿ ಹಾದಿಯಲ್ಲೇ ಸಾಗಿದ ವಿರಾಟ್​​​ ಕೊಹ್ಲಿ, ತನ್ನ ಆಳ್ವಿಕೆ ಮುಂದುವರೆಸಿದ್ದು, ಟೆಸ್ಟ್​​ ಕ್ರಿಕೆಟ್​​ನಲ್ಲಿ ಸತತ ಐದು ವರ್ಷಗಳಿಂದ ಏಕಚಕ್ರಾಧಿಪತ್ಯ ಸ್ಥಾಪಿಸಿದ್ದಾರೆ..!! ಇದು ಟೀಮ್​​ ಇಂಡಿಯಾ ನಾಯಕರು ತಂಡವನ್ನ ಮುನ್ನಡೆಸಿದ ಸಾಹಸಗಾಥೆ..!!

2000ರಲ್ಲಿ ತಂಡದ ಸಾರಥ್ಯ ವಹಿಸಿಕೊಂಡ ಗಂಗೂಲಿ, ಕ್ರಿಕೆಟ್​​ ಕ್ರೇಜ್​​​​​ ಎಂಬ ಮನೆಗೆ ಅಡಿಪಾಯ ಹಾಕಿಕೊಟ್ಟರೆ, 2008ರಿಂದ ಅದನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಧೋನಿ, ಭವ್ಯ ಬಂಗಲೆ ನಿರ್ಮಿಸಿದರು. ಇದೀಗ ಕೊಹ್ಲಿ ವಿವಿಧ ಬಣ್ಣಗಳೊಂದಿಗೆ ಮನೆಯನ್ನು ಚಿತ್ತಾರ ಮಾಡಿದ್ದಾರೆ. ಇಲ್ಲಿ ನಾವು ಹೇಳ್ತಿರೋದು ದಿ ಗ್ರೇಟ್​​ ಕ್ಯಾಪ್ಟನ್ಸ್​ ಟೀಮ್​ ಇಂಡಿಯಾವನ್ನ ಬೆಳಸಿದ ಪರಿ. ಆದರೆ ಸದ್ಯ ಗಂಗೂಲಿಗಿಂತ ಹೆಚ್ಚು ಟ್ರೆಂಡಿಂಗ್​​ನಲ್ಲಿ ಇರೋದು, ಧೋನಿ ವರ್ಸಸ್ ಕೊಹ್ಲಿ ಕ್ಯಾಪ್ಟನ್ಸಿ..! ಹಾಗಾದ್ರೆ ಈ ಇಬ್ಬರಲ್ಲಿ ಯಾರು BEST ಕ್ಯಾಪ್ಟನ್​​..?

ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತಕ್ಕೆ ನಂ.1 ಪಟ್ಟ..!
ಮೊದಲ ಟೆಸ್ಟ್​ ಸರಣಿ ಆರಂಭವಾದ 1932 ರಿಂದ ಹಿಡಿದು 2008ರವರೆಗೂ, ಅಂದರೆ, ಬರೋಬ್ಬರಿ 76 ವರ್ಷಗಳಿಂದಲೂ ಟೀಮ್​​ ಇಂಡಿಯಾ ನಂಬರ್ ​ವನ್​ ​ಪಟ್ಟಕ್ಕೆ ಏರಿರಲಿಲ್ಲ.! ಏರುವುದಿರಲಿ, ಅದರ ಹತ್ತಿರಕ್ಕೂ ಸುಳಿದಿರಲಿಲ್ಲ. ಈ ಅವಧಿಯಲ್ಲಿ ಕ್ರಿಕೆಟ್​ ಸಾಮ್ರಾಜ್ಯ ಆಳುತ್ತಿದ್ದದ್ದು ಬಲಿಷ್ಠ ಇಂಗ್ಲೆಂಡ್​-ಆಸ್ಟ್ರೇಲಿಯಾ. ಆದರೆ ಅವುಗಳ ತಲೆಕೆಳಗಾಗಿಸಿದ್ದು, ಧೋನಿ ಮಾತ್ರ. ಯಾರೇ ನಾಯಕನಾದರೂ ನಾವೇ ಕಿಂಗ್​ ಎನ್ನುತ್ತಿದ್ದ ಟೀಮ್​ಗಳ ಲೆಕ್ಕಾಚಾರವನ್ನ ಉಲ್ಟಾ ಮಾಡಿದ್ದಲ್ಲದೆ, ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತವನ್ನ, ಟೆಸ್ಟ್​​ನಲ್ಲಿ ನಂ.1 ಪಟ್ಟಕ್ಕೇರಿಸಿ ರೂಲಿಂಗ್​ ಮಾಡಿದರು.

ಅಂದಿನಿಂದ ನಾಯಕನ ಪಟ್ಟಕ್ಕೆ ರಾಜೀನಾಮೆ ನೀಡುವವರೆಗೂ ಧೋನಿ, ಹಿಂತಿರುಗಿ ನೋಡಲೇ ಇಲ್ಲ. ಮುಟ್ಟಿದ್ದೆಲ್ಲಾ ಚಿನ್ನ ಎಂಬಂತೆ ನಾಯಕನಾಗಿ ಆಡಿದ ಸರಣಿಗಳೆಲ್ಲದರಲ್ಲೂ, ಪಾರುಪತ್ಯ ಸಾಧಿಸಿದರು. ಆ ಮೂಲಕ ಧೋನಿ ಟೀಮ್​ ಇಂಡಿಯಾವನ್ನ ಮುನ್ನಡೆಸಿದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು ಎಂಬ ಖ್ಯಾತಿ ಪಡೆದರು.

ಧೋನಿ ನಾಯಕತ್ವದಲ್ಲಿ ಸರಣಿ
ಸರಣಿ 25
ಗೆಲುವು 12
ಸೋಲು 09
ಡ್ರಾ 04

ಸತತ 5 ವರ್ಷಗಳಿಂದ ಭಾರತದ್ದೇ ಪಾರುಪತ್ಯ​..!
ಧೋನಿ ಕ್ಯಾಪ್ಟನ್ಸಿಯಿಂದ ಕೆಳಗಿಳಿಯುತ್ತಿದ್ದಂತೆ, ಬಹುಶಃ ಭಾರತ ಟಾಪ್​​ಗೇರೋದು ಕಷ್ಟ ಎಂಬ ಮಾತುಗಳು ಕ್ರಿಕೆಟ್​ ವಲಯದಲ್ಲಿ ಕೇಳಿ ಬಂದಿದ್ದವು. ಅದರಲ್ಲೂ IPLನಲ್ಲಿ RCB ತಂಡವನ್ನ ಮುನ್ನಡೆಸುವಲ್ಲಿ ವಿಫಲವಾಗಿದ್ದ ಕೊಹ್ಲಿಗೆ, ಈ ಪಟ್ಟ ನೀಡಿದ್ದು ಮತ್ತಷ್ಟು ಟೀಕೆಗೆ ಕಾರಣವಾಯ್ತು. ಅದನ್ನೇ ಸವಾಲಾಗಿ ಸ್ವೀಕರಿಸಿದ ಕೊಹ್ಲಿ, ಸತತ 9 ಟೆಸ್ಟ್ ಸರಣಿಗಳನ್ನು ಗೆದ್ದು ದಾಖಲೆ ಬರೆದರು.

ರನ್​ ಮಶೀನ್​​ ಎಂದೇ ಹೆಸರಾದ ಕೊಹ್ಲಿ, ಸರಣಿಗಳ ಗೆಲುವಿನಲ್ಲೂ ಅದೇ ಹವಾ ಮುಂದುವರೆಸಿದ್ದರು. ಆ ಮೂಲಕ ದ ಮೋಸ್ಟ್​ ಸಕ್ಸಸ್​ಫುಲ್ ಕ್ಯಾಪ್ಟನ್​​ ಲಿಸ್ಟ್​ಗೂ ಸೇರಿಕೊಂಡರು. ಒಂದೊಂದೇ ಗೆಲುವಿನ ಮೆಟ್ಟಿಲು ಹತ್ತಿದ ಕೊಹ್ಲಿ, 2017ರಲ್ಲಿ ಱಂಕಿಂಗ್​​ನಲ್ಲಿ ಮತ್ತೆ ನಂಬರ್​​ ವನ್​ ಪಟ್ಟ ಅಲಂಕರಿಸುವಂತೆ ಮಾಡಿದರು. ಅಲ್ಲಿಂದ 5 ವರ್ಷಗಳು ಅಂದ್ರೆ, ಇವತ್ತಿನವರೆಗೂ ಭಾರತವೇ ಟೆಸ್ಟ್​​ ಕ್ರಿಕೆಟ್​ ಸಾಮ್ರಾಜ್ಯವನ್ನ ಆಳುತ್ತಿದೆ. ಇದು ಕೊಹ್ಲಿಯ ಕನಸು ಕೂಡ ಆಗಿತ್ತು.

ಕೊಹ್ಲಿ ನಾಯಕತ್ವದಲ್ಲಿ ಸರಣಿ
ಸರಣಿ 21
ಗೆಲುವು 17
ಸೋಲು 03
ಡ್ರಾ 01

ನೋಡಿದ್ರಲ್ಲ.. ಕೊಹ್ಲಿಯೇ ಕಡಿಮೆ ಸರಣಿಗಳಲ್ಲಿ ಹೆಚ್ಚು ಸರಣಿಗಳನ್ನು ಗೆದ್ದಿರೋದನ್ನ. ಹಾಗೆಯೇ ಹೋಮ್​ ಪಿಚ್​​ಗಳಲ್ಲೂ ಕೊಹ್ಲಿ, ಮಾಹಿ ದಾಖಲೆಗೂ ಬ್ರೇಕ್​ ಹಾಕಿದ್ದಾರೆ. ಮಾಹಿ 21ರಲ್ಲಿ ಗೆದ್ದಿದ್ರೆ, ಕೊಹ್ಲಿ 22 ಪಂದ್ಯಗಳಲ್ಲಿ ಜಯಿಸಿದ್ದಾರೆ. ಹೀಗೆ ಪ್ರತಿ ಹಂತದಲ್ಲೂ ಧೋನಿ ದಾಖಲೆಗಳನ್ನು ಪುಡಿಪುಡಿ ಮಾಡಿದ್ದಾರೆ ಕೊಹ್ಲಿ.

ಟೆಸ್ಟ್​​ನಲ್ಲಿ ನಾಯಕರ ಲೆಕ್ಕಾಚಾರ
ಧೋನಿ ಕೊಹ್ಲಿ
60 ಪಂದ್ಯ 60
27 ಗೆಲುವು 36
18 ಸೋಲು 14
45 ಗೆ .ಶೇ. 60

ಅಂಕಿಗಳಲ್ಲಿ ಕೊಹ್ಲಿ ಮೇಲುಗೈ, ಫೇಮಸ್​ ಮಾತ್ರ ಧೋನಿ..!
ಹೌದು..! ಅಂಕಿ-ಅಂಶಗಳಲ್ಲಿ ವಿರಾಟ್​ ಕೊಹ್ಲಿಯೇ ಮೇಲುಗೈ ಸಾಧಿಸಿದ್ರೂ, ಸಕ್ಸಸ್​ಫುಲ್​ ಕ್ಯಾಪ್ಟನ್​ ಅನ್ನೋದು ಧೋನಿಯನ್ನ ಮಾತ್ರ. ಕೊಹ್ಲಿ ರನ್​ ಕಲೆ ಹಾಕೋದ್ರಲ್ಲಿ ಕಿಂಗ್​ ಇರಬಹುದು, ನಾಯಕನಾಗಿ ಅಷ್ಟು ಪರ್ಫೆಕ್ಟ್​ ಇಲ್ಲ..! ಅದೇ ಧೋನಿಯನ್ನ ನೋಡಿ, ಚಾಣಾಕ್ಷ ನಡೆಯಿಂದಲೇ ಎದುರಾಳಿ ತಂಡಕ್ಕೆ ಮಣ್ಣು ಮುಕ್ಕಿಸುತ್ತಿದ್ದರು. ಅದಕ್ಕೆ ಬೆಸ್ಟ್​ ಎಕ್ಸಾಂಪಲ್​, ಮೂರು ಐಸಿಸಿ ಟ್ರೋಫಿ ಗೆದ್ದಿರೋದೆ ಕಾರಣ ಅಂತಿದ್ದಾರೆ​ ಫ್ಯಾನ್ಸ್​.!

ಕೊಹ್ಲಿ ಐಸಿಸಿ ಟ್ರೋಫಿ ಗೆದ್ದಿಲ್ಲವೆಂದ ಮಾತ್ರಕ್ಕೆ, ಧೋನಿಯೇ ಗ್ರೇಟ್​ ಅನ್ನೋದು ಸರಿಯಲ್ಲ. ಯಾರು ಏನೇ ಹೇಳಿದ್ರು ಇಬ್ಬರೂ ಕೂಡ ಭಾರತ ಕಂಡ ಸಕ್ಸಸ್​ ಫುಲ್​​ ನಾಯಕರೇ. ಇದರಲ್ಲಿ ಯಾವುದೇ ಅನುಮಾನ ಇಲ್ಲ..!!

The post ಕೊಹ್ಲಿ V/S ಧೋನಿ- ಇಬ್ಬರಲ್ಲಿ ಯಾರು ಬೆಸ್ಟ್ ಕ್ಯಾಪ್ಟನ್..? appeared first on News First Kannada.

Source: newsfirstlive.com

Source link