ಜುಲೈ 1ನೇ ತಾರೀಖ್​​ನಿಂದ ಸ್ಯಾಂಡಲ್​ವುಡ್​​ ಮಂದಿ ಹುರುಪಿನಲ್ಲಿ ಶೂಟಿಂಗ್ ಅಡ್ಡಕ್ಕೆ ಇಳಿದಿದ್ದಾರೆ. ಸರ್ಕಾರ ಸದ್ಯಕ್ಕೆ ಥಿಯೇಟರ್ ಓಪನ್ ಮಾಡಕ್ಕೆ ಆಗಲ್ಲ ಅನ್ನೋ ಬ್ರೇಕಿಂಗ್ ನ್ಯೂಸ್ ಕೊಟ್ಟಿದೆ. ಒಂದು ವೇಳೆ ಥಿಯೇಟರ್ ಓಪನಿಂಗ್​​​ಗೆ ಅವಕಾಶ ಕೊಟ್ರೇ ಕೋಟಿಗೊಬ್ಬ ಬರುತ್ತಾನಾ? ಈ ಬಾರಿಯಾದ್ರು ಮನೋರಂಜನೆ ಕೊಡ್ತಾನಾ? ಅನ್ನೋ ಲೆಕ್ಕಾಚಾರಿ ಗಂಧದಗುಡಿಯಲ್ಲಿ ಶುರುವಾಗಿದೆ.

ಮೂರು ವರ್ಷದಿಂದ ಅದ್ಧೂರಿ ರಸರಂಜನೆಯಗೆ ಸಿದ್ಧವಾಗುತ್ತಿರೋ ಅದ್ಧೂರಿ ಸಿನಿಮಾ ಕೋಟಿಗೊಬ್ಬ-3.. ಎರಡನೇ ಕೋಟಿಗೊಬ್ಬ ಸಿನಿಮಾದ ಮೂಲಕ ಸೂಪರ್ ಡೂಪರ್ ಎಂಟರ್​​ಟೈನ್ಮೆಂಟ್ ಕೊಟ್ಟಿದ್ದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೋಟಿಗೊಬ್ಬ 3 ಸಿನಿಮಾದಲ್ಲಿ ಅದಕೂ ಮೀರಿಸೋ ಕಲರ್​​​​​​​​​​ಫುಲ್ ಎಂಟರ್​​ಟೈನ್ಮೆಂಟ್ ಇರಲಿದೆ ಅನ್ನೋ ಸುಳಿವನ್ನ ಕೊಟ್ಟಿದ್ದಾರೆ. ಆದರೆ ಯಾವಾಗ ರಿಲೀಸ್ ಅನ್ನೋದೆ ಗಗನ ಚುಕ್ಕಿ.

ಸೂರಪ್ಪ ಬಾಬು ನಿರ್ಮಾಣದ ಶಿವಕಾರ್ತಿಕ್ ನಿರ್ದೇಶನದ ಕೋಟಿಗೊಬ್ಬ-3 ಸಿನಿಮಾದ ಹಾಡುಗಳು ಟೀಸರ್ ಝಲಕ್​​ಗಳು ಮತ್ತು ಮೇಕಿಂಗ್ಸ್​ಗಳು ಈಗಾಗಲೇ ಘಟ್ಟಿ ಭರವಸೆಯನ್ನ ನೀಡಿದಾಗಿದೆ. ಆದ್ರೆ ಯಾವಾಗ ಸಿನಿಮಾ ರಿಲೀಸ್ ಅನ್ನೋದನ್ನೇ ಜಡ್ಜ್ ಮಾಡಲಾಗುತ್ತಿಲ್ಲ. ಈ ವರ್ಷ ಮೇ ತಿಂಗಳಲ್ಲೇ ಬಂದು ಬಿಡಬೇಕು ಎಂದುಕೊಂಡಿದ್ದ ಚಿತ್ರತಂಡಕ್ಕೆ ಕೊರೊನಾ ಎರಡನೇ ಅಲೆ ನಿರಾಸೆ ಉಂಟು ಮಾಡಿತ್ತು. ಈಗ ಕೋವಿಡ್ ಸೆಕೆಂಡ್ ವೇವ್ ಕಡಿಮೆಯಾಗುತ್ತಿದ್ದು, ಥೀಯೇಟರ್ ಓಪನಿಂಗ್​ಗಾಗಿ ಸಿನಿಲೋಕ ಕಾಯುತ್ತಿದೆ.

ಕೆಲ ದಿನಗಳ ಹಿಂದೆ ಆಗಸ್ಟ್ 19ನೇ ತಾರೀಖ್ ವಿಕ್ರಾಂತ್ ರೋಣ ಬರೋ ದಿನದ ಬದಲು ಕೋಟಿಗೊಬ್ಬ-3 ಸಿನಿಮಾ ರಿಲೀಸ್ ಆಗಲಿದೆ ಅನ್ನೊ ಒಪ್ಪಂದ ಮಾತುಗಳು ಕೇಳಿಬಂದಿದ್ವು. ಆದರೆ ಈಗ ಕರ್ನಾಟಕ ಸರ್ಕಾರ ಸದ್ಯಕ್ಕೆ ಚಿತ್ರಮಂದಿಗಳ ಬಾಗಿಲು ತೆಗೆಯೋದಿಲ್ಲ ಅನ್ನೋ ನಿರ್ಧಾರವನ್ನ ಪ್ರಕಟಿಸಿದೆ. ಹೀಗಾಗಿ ಆಗಸ್ಟ್​ ತಿಂಗಳಿನಲ್ಲಿ ಮೂರನೇ ಕೋಟಿಗೊಬ್ಬನಿಗೆ ಬಿಡುಗಡೆ ಸೌಭಾಗ್ಯ ಸಿಗುತ್ತಾ ಅನ್ನೋ ಪ್ರಶ್ನೆಗಳು ಉದ್ಭವವಾಗಿವೆ. ಮತ್ತೆ ಥಿಯೇಟರ್​ಗಳಿಗೆ ಚಿತ್ರಪ್ರೇಮಿಗಳು ಬರಬೇಕೆಂದ್ರೆ ದೊಡ್ಡ ದೊಡ್ಡ ಸ್ಟಾರ್ಸ್ ಸಿನಿಮಾಗಳು ತೆರೆಗಪ್ಪಳಿಸ ಬೇಕಿದೆ.

The post ಕೋಟಿಗೊಬ್ಬನಿಗೆ ಆಗಸ್ಟ್​​​​​​​​​ನಲ್ಲಿ ಬಿಡುಗಡೆ ಭಾಗ್ಯ ಸಿಗುತ್ತಾ? appeared first on News First Kannada.

Source: newsfirstlive.com

Source link