‘ಕೋಟಿಗೊಬ್ಬ’ನಿಗೆ ಕ್ಷೀರಾಭಿಷೇಕ ಮಾಡಿ ಹಾರೈಕೆ.. ರಿಲೀಸ್​ ಆಗುವ ಕೊನೆ ಕ್ಷಣದಲ್ಲಿ ಗೊಂದಲಕ್ಕೆ ಸಿಲುಕಿದ ಫ್ಯಾನ್ಸ್​..!

ಬೆಂಗಳೂರು: ಕೋಟಿಗೊಬ್ಬ-3 ಸಿನಿಮಾ ಇಂದು ರಿಲೀಸ್ ಆಗುತ್ತಾ? ಇಲ್ವಾ? ಎನ್ನುವ ಗೊಂದಲದಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳಿದ್ದಾರೆ. ತಾಂತ್ರಿಕ ಸಮಸ್ಯೆಯಿಂದ ರಾಜ್ಯಾದ್ಯಂತ ಇಂದಿನ ಎಲ್ಲಾ ಫ್ಯಾನ್ಸ್ ಶೋಗಳು ಕ್ಯಾನ್ಸಲ್ ಆಗಿವೆ.

ಹೀಗಾಗಿ ಮೊದಲ ದಿನದ ಮಾರ್ನಿಂಗ್ ಶೋ ಆಗುತ್ತಾ? ಇಲ್ಲವಾ ಅನ್ನೋ ಅನುಮಾನ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕೋಟಿಗೊಬ್ಬ ರಿಲೀಸ್ ಆಗುವ ಬಗ್ಗೆ ಇನ್ನೂ ಕ್ಲಾರಿಟಿ ಸಿಕ್ಕಿಲ್ಲ. ಆದರೆ ಕೆಲವು ಥಿಯೇಟರ್​ಗಳಲ್ಲಿ ಟಿಕೆಟ್​ ಕೂಡ ಸೇಲ್ ಆಗಿವೆ.

ಸದ್ಯ ಸಿನಿಮಾ ರಿಲೀಸ್​ಗೆ ಯಾವುದೇ ಕ್ಲಾರಿಟಿ ಇಲ್ಲದಿರೋ ಕಾರಣ ಥಿಯೇಟರ್​​ಗಳಲ್ಲಿ ಟಿಕೆಟ್​​ ನೀಡುತ್ತಿಲ್ಲ. ಆದರೆ ಆನ್​ಲೈನ್​ಲ್ಲಿ ಈಗಾಗಲೇ ಟಿಕೆಟ್ ಖರೀದಿ ಮಾಡಿರುವ ಕಿಚ್ಚನ ಅಭಿಮಾನಿಗಳು, ಥಿಯೇಟರ್​ನತ್ತ ಆಗಮಿಸುತ್ತಿದ್ದಾರೆ. ಅಲ್ಲದೇ ಇಂದು ಬೆಳಗ್ಗೆ ಫ್ಯಾನ್ಸ್​ ಶೋ ಇದ್ದಿದ್ದರಿಂದ ಅಭಿಮಾನಿಗಳು ಬೆಂಗಳೂರಿನ ಪ್ರಸನ್ನ ಥಿಯೇಟರ್​ಗೆ ಆಗಮಿಸಿದ್ದರು. ಆದರೆ ದಿಢೀರ್​ ಫ್ಯಾನ್ಸ್ ಶೋ ರದ್ದಾಗಿದ್ದರಿಂದ ಕಿಚ್ಚನ ಫ್ಯಾನ್ಸ್​ ನಿರಾಸೆಯಲ್ಲಿ ವಾಪಸ್ ಹೋಗಿದ್ದಾರೆ.

News First Live Kannada

Leave a comment

Your email address will not be published. Required fields are marked *